ಶ್ರೀ ಮಧ್ವಾಚಾರ್ಯರು

1 0 0
                                    

*[
ಶ್ರೀಮದಾಚಾರ್ಯರಿಗೆ ಅನಂತ ವಂದನೆಗಳು....

ವ್ಯಾಪ್ತಿರ್ಯಸ್ಯ ನಿಜೇ ನಿಜೇನ ಮಹಸಾ ಪಕ್ಷೇಸಪಕ್ಷೇ ಸ್ಥಿತಿಃ
ವ್ಯಾವೃತ್ತಿಶ್ಚ ವಿಪಕ್ಷತೋऽಥ ವಿಷಯೇ ಸಕ್ತಿರ್ನ ವೈ ಬಾಧಿತೇ |
ನೈವಾಸ್ತಿ ಪ್ರತಿಪಕ್ಷಯುಕ್ತಿರತುಲಂ ಶುದ್ಧಂ ಪ್ರಮಾಣಂ ಸ ಮೇ
ಭೂಯಾತ್ ತತ್ವವಿನಿರ್ಣಯಾಯ ಭಗವಾನಾನಂದತೀರ್ಥೋ ಮುನಿಃ ॥ಶ್ರೀಮನ್ನ್ಯಾಯ ಸುಧಾ.
     
ಯಾರಿಗೆ ಸ್ವಕೀಯ ಮತದಲ್ಲಿ ಸ್ವಾಭಾವಿಕ ಸಾಮರ್ಥ್ಯದಿಂದ ನಿಯತ ಸಂಬಂಧವಿದೆಯೋ,,ಸಪಕ್ಷದಲ್ಲಿ ಸ್ಥಿತಿಯಿದೆಯೋ,,ವಿಪಕ್ಷದ ಸಂಬಂಧವಿಲ್ಲವೋ,,ಪ್ರಮಾಣಾಬಾಧಿತ ವಿಷಯದಲ್ಲಿ ಆಸಕ್ತಿಯಿಲ್ಲವೋ,,ಪ್ರತಿಪಕ್ಷದ ಯುಕ್ತಿಗಳಿಲ್ಲವೋ,, ಅಂತಹ ನಿರ್ದುಷ್ಟವೂ ಪ್ರಮಾಣರೂಪರಾದ, ಜ್ಞಾನಾನಂದಾದಿ ಷಡ್ಗುಣಯುಕ್ತರಾದ ಶ್ರೀಮದಾನಂದತೀರ್ಥರು ನನಗೆ ತತ್ವನಿರ್ಣಯ ಉಂಟಾಗಲು ಕಾರಣರಾಗಲಿ.

      ಅನುವ್ಯಾಖ್ಯಾನ ಯುಕ್ತಿಪ್ರಧಾನ ಗ್ರಂಥ.
ಇಲ್ಲಿ ಶ್ರೀಮತ್ ಟೀಕಾಕೃತ್ಪಾದರು, ಶ್ರೀಮದಾಚಾರ್ಯರರನ್ನು ಯುಕ್ತಿರೂಪಕದಿಂದ ನಮಿಸುತ್ತಾರೆ.
   ಪ್ರಮಾ =ಯಥಾರ್ಥ ಜ್ಞಾನ.
ಅದಕ್ಕೆ "ಕರಣ"=ಅತಿಶಯಿತ ಸಾಧನ..   ಅದೇಪ್ರಮಾಣ.
ಪಂಚಜ್ಞಾನೇಂದ್ರಿಯ ಮತ್ತು ಮನಸ್ಸು ಯಥಾರ್ಥ ಜ್ಞಾನಸಾಧನವಾದ್ದರಿಂದ ಪ್ರಮಾಣ.
ಅವುಗಳಲ್ಲಿಯ ಶಕ್ತಿಯನ್ನು ಪ್ರಧಾನವಾಗಿ ಉದ್ಭೋದನಗೊಳಿಸುವವರು ಮುಖ್ಯಪ್ರಾಣರ ಅವತಾರರಾದ ಶ್ರೀಮದಾಚಾರ್ಯರು.
ಹೀಗೆ ಅವರೇ ಮುಖ್ಯ ಪ್ರಮಾಣರು.
    ಪ್ರತ್ಯಕ್ಷ, ಅನುಮಾನ ಹಾಗು ಆಗಮ ತ್ರಿವಿಧ ಪ್ರಮಾಣಗಳು.
ಅನುಮಾನ==ಅನ್ವಯವ್ಯಾಪ್ತಿ,,ವ್ಯತಿರೇಕ ವ್ಯಾಪ್ತಿ  ಹಾಗು ಅನ್ವಯವ್ಯತಿರೇಕ ವ್ಯಾಪ್ತಿಯುಳ್ಳದ್ದು.

    ಭಕ್ತವರ್ಗವು (ಪಕ್ಷ)
ವಿಷ್ಣುಸರ್ವೋತ್ತಮತ್ವರೂಪ ತತ್ವವುಳ್ಳದ್ದು (ಸಾಧ್ಯ)  ಅನುಗ್ರಾಹ್ಯತ್ವ ಅಥವಾ ಅನುಗ್ರಾಹಕತ್ವರೂಪ ಸಂಬಂಧವಿರುವದರಿಂದ (ಹೇತು)
ಶ್ರೀಹರಿಯಂತೆ (ದೃಷ್ಟಾಂತ).

   ಮಂಗಳ ಶ್ಲೋಕದನ್ವಯ ಐದು ಧರ್ಮಸಹಿತ ಅನುಮಾನದ ಲಕ್ಷಣಗಳಿವೆ...
1) *ಸರ್ವಸಪಕ್ಷವೃತ್ತಿತ್ವ*==
*ನಿಜೇಪಕ್ಷೇ ನಿಜೇನ ಮಹಸಾ* ವ್ಯಾಪ್ತಿ...
   ವಿಷ್ಣುಸರ್ವೋತ್ತಮತ್ವ ಜ್ಞಾನವೇ ಸರ್ವಸಮ್ಮತ ತತ್ವಜ್ಞಾನವು,,*ಶ್ರೀಮದಾನಂದತೀರ್ಥವತ್ವ*ವೆಂಬ ಅನುಗ್ರಾಹಕತ್ವ ಸಂಬಂಧವಿದ್ದರಿಂದ,
     ಎಲ್ಲ ಸದ್ಭಕ್ತರನ್ನು ಅನುಗ್ರಹಿಸುವ ಇಚ್ಛೆಯಿಂದ ತಮ್ಮ ಮಹಾತ್ಮ್ಯರೂಪದಿಂದ ಅವರಲ್ಲಿ ಸನ್ನಿಹಿತರಾಗಿದ್ದಾರೆ.

2) *ಸಪಕ್ಷದಲ್ಲಿರುವದು ==ಸಪಕ್ಷೇ ಸ್ಥಿತಿಃ*
ಶ್ರೀಮದಾನಂದತೀರ್ಥರು ಭಗವದನುಗ್ರಹದಿಂದ  ಯಥಾರ್ಥಜ್ಞಾನದೊಂದಿಗೆ ಅನನ್ಯಭಾವದಿಂದ ಶ್ರೀಹರಿಯನ್ನು ನಿರಂತರ ಆರಾಧಿಸುವರು .
ಹೀಗೆ ಸಪಕ್ಷನಾದ ಭಗವಂತನಲ್ಲಿ ನಿಷ್ಠೆಯೊಂದಿಗೆ,,,,(ಸಪಕ್ಷದಲ್ಲಿ )ಸ್ಥಿತಿಯಿದೆ.

ದಾಸ ಸಾಹಿತ್ಯWhere stories live. Discover now