*ವೃಂದಾವನಸ್ಥಳ ತಿರುಕೋಯಿಲೂರು*ಸತ್ಯಾಭಿಜ್ಞಕರಾಬ್ಜೋತ್ಥಾನ್
ಪಂಚಾಶದ್ವರ್ಷಪೂಜಕಾನ್ !
ಸತ್ಯಪ್ರಮೋದತೀರ್ಥಾರ್ಯಾನ್
ನೌಮಿ ನ್ಯಾಯಸುಧಾರತಾನ್ !!ಅರ್ಥ :- ಶ್ರೀ ಸತ್ಯಾಭಿಜ್ಞತೀರ್ಥರ ಕರಕಮಲಸಂಜಾತರಾದ, ಒಂದು ದಿನವೂ ಬಿಡದೆ ೫೦ ವರ್ಷ ನಿರಂತರ ರಾಮದೇವರ ಪೂಜೆಯನ್ನು ಮಾಡಿದ, ಯಾವಾಗಲೂ ಶ್ರೀಮನ್ನ್ಯಾಯಸುಧಾದಿ ಪಾಠಪ್ರವಚನಾಸಕ್ತರಾದ ಶ್ರೀ ಸತ್ಯಪ್ರಮೋದತೀರ್ಥರನ್ನು ಭಕ್ತಿಯಿಂದ ನಮಸ್ಕರಿಸುತ್ತೇನೆ ಅಂತ ಪ್ರಾರ್ಥನೆ.
ಸತ್ಯಪ್ರಮೋದತೀರ್ಥರ ಪವಾಡಗಳನ್ನು ಸಾಕ್ಷಾತ್ ನೋಡಿದಂಥ ಭಕ್ತವೃಂದ ಇವತ್ತಿಗೂ ಇದೆ. ಕೆಲವೇ ದಿನಗಳ ಹಿಂದೆ ಆ ಸತ್ಯಪ್ರಮೋದತೀರ್ಥರ ಶತಮಾನೋತ್ಸವ ವೈಭವದಿಂದ ಜರುಗಿದ್ದು ಸರ್ವರಿಗೂ ತಿಳಿದಿದೆ. ಇವತ್ತು ನಮ್ಮ ಗುರುಗಳನ್ನು (ಶ್ರೀ ಸತ್ಯಾತ್ಮತೀರ್ಥರನ್ನು) ಪೀಠದಲ್ಲಿ ಕೂಡಿಸಿ ಅವರಿಂದ ಇಡೀ ಜಗತ್ತನ್ನೇ ಉದ್ಧಾರ ಮಾಡಿಸುತ್ತಿರುವ ಶ್ರೀ ಸತ್ಯಪ್ರಮೋದತೀರ್ಥರು ಎಲ್ಲರಿಗೂ ಅನುಗ್ರಹಿಸಲಿ ಅಂತ ಪ್ರಾರ್ಥನೆ.
*ಶ್ರೀ ಸತ್ಯಾತ್ಮತೀರ್ಥಸ್ವಾಮಿಶ್ರೀಪಾದ ಗುರುಭ್ಯೋ ನಮಃ !*
ಸರ್ವೇ ಜನಾಃ ಸುಖಿನೋ ಭವಂತು !
ಎಲ್ಲರಿಗೂ ಅಕ್ಕನತದಿಗಿ ಹಬ್ಬದ ಹಾರ್ದಿಕ ಶುಭಾಶಯಗಳು.
*ಎಲ್ಲಾ ಅಕ್ಕತಂಗಿಯರಿಗೂ ನನ್ನ ಕಡೆಯಿಂದ ವಿಶೇಷವಾದ ಹಾರ್ದಿಕವಾದ ಶುಭಾಶಯಗಳು.*
*ತಂ ನಾರಸಿಂಹಂ ನಮಾಮಿ !*
ಇವತ್ತಿನ ಸಮಾಜಕ್ಕೆ ಅತ್ಯಮೂಲ್ಯ ರತ್ನದಂತಿರುವ, ಎಷ್ಟೆಷ್ಟೋ ಆತ್ಮರನ್ನು (ಜೀವರನ್ನು) ಉದ್ಧಾರ ಮಾಡಿದ, ಮಾಡುತ್ತಿರುವ, ಮಾಡಲಿರುವ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥರು (ನಮ್ಮ ಸ್ವರೂಪೋದ್ಧಾರಕ ಗುರುಗಳು) ಭುವಿಯಲ್ಲಿ ಅವತರಿಸಿದ ದಿನ ಇವತ್ತು. ಅವರ ಸ್ಮರಣೆಯೇ ನಮಗೆ ಎಲ್ಲದಕ್ಕೂ ರಕ್ಷಣೆ. ಅವರ ಅನುಗ್ರಹ ಆದರೆ ನಾವು ಖಂಡಿತವಾಗಿ ಭವರೋಗದಿಂದ ಮುಕ್ತರಾಗ್ತೇವೆ. ಅಂಥ ಗುರುಗಳ ಸ್ಮರಣೆಯನ್ನು ಮಾಡಿ ಪಾವನರಾಗೋಣ.
*ಮೋದತೀರ್ಥಕೃಪಾಪಾತ್ರಾನ್*
*ಜಯತೀರ್ಥಾಲಯಪೋಷಕಾನ್* !
*ವಂದೇ ಸತ್ಯಾತ್ಮತೀರ್ಥಾರ್ಯಾನ್*
*ಮಮ ಹೃದ್ಬುದ್ಧಿಶುದ್ಧಯೇ !!*ಅರ್ಥ :- ಮೋದತೀರ್ಥರು ಅಂದರೆ ಶ್ರೀ ಸತ್ಯಪ್ರಮೋದತೀರ್ಥರು ಮತ್ತು ಅವರ ಅಂತರ್ಗತ ದೇವರ ಅನುಗ್ರಹಕ್ಕೆ, ಕೃಪೆಗೆ ವಿಶೇಷವಾಗಿ ಪಾತ್ರರಾದ, (ಆದ್ದರಿಂದಲೇ ಇವತ್ತು ಇಷ್ಟೊಂದು ಸಾಧನೆಮಾಡುತ್ತಿರುವ) ಜಯತೀರ್ಥಾಲಯ ಅಂದರೆ ಜಯತೀರ್ಥವಿದ್ಯಾಪೀಠ ಅದರ ಪೋಷಕರಾದ (ಅನ್ನ ಬಟ್ಟೆ ವಿದ್ಯೆ ಎಲ್ಲವನ್ನೂ ಕೊಟ್ಟು ರಕ್ಷಣೆ ಮಾಡುತ್ತಿರುವ), ನಮ್ಮ ಗುರುಗಳಾದ ಶ್ರೀ ಸತ್ಯಾತ್ಮತೀರ್ಥರನ್ನು ನನ್ನ ಮನಸ್ಸು ಮತ್ತು ಬುದ್ಧಿ ಶುದ್ಧವಾಗೋದಕ್ಕೋಸ್ಕರ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರಗಳನ್ನು ಮಾಡುತ್ತೇನೆ ಅಂತ ಪ್ರಾರ್ಥನೆ.

YOU ARE READING
ದಾಸ ಸಾಹಿತ್ಯ
Poesía*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...