*ಶ್ರೀ ಮೋಹನದಾಸಾರ್ಯ

44 0 0
                                    

🌺🌺🌺🌺🌺🌺🌺🌺🌺
*ಶ್ರೀ ಮೋಹನ ದಾಸರ*  
        *ಆರಾಧನೆ*
🙏🙏ಹರೇ ಶ್ರೀನಿವಾಸ 🙏🙏
ಶ್ರೀ ಮೋಹನ ದಾಸರು
ಕ್ರಿ. ಶ.1730- 1815
ಹೆಸರು - ಮೋಹನ ( ಶ್ರೀ ವಿಜಯ ದಾಸರ ದತ್ತು ಪುತ್ರ ) ದುರ್ದೈವ ವಶಾತ್ ಋಣ ರೋಗದಿಂದ ಕೂಡಿದ ಮಗು.
ಜನನ - ಕ್ರಿ. ಶ. ಸುಮಾರು 1730.
ತಂದೆ - ಭೀಮಪ್ಪ ನಾಯಕ (ಚಿನಿವಾರ ವೃತ್ತಿ. ಶ್ರೀಮಂತ ಕುಟುಂಬ )
ತಾಯಿ -ಶ್ರೀಮತಿ  ಸೀತಮ್ಮ
ಮಕ್ಕಳು - ವೆಂಕೋಬ
ಮೊಮ್ಮಕ್ಕಳು - ದಾಸಪ್ಪ ದಾಸ, ವಿಜಯದಾಸ, ರಾಘವೇಂದ್ರ ದಾಸ, ಗುರುರಾಯಪ್ಪದಾಸ, ಶ್ರೀನಿವಾಸದಾಸ.
ಪೂರ್ವ ಜನ್ಮ - ಮಾಂಡವ್ಯ ಋಷಿಗಳು
ಅಂಕಿತ - ಮೋಹನ ವಿಠಲ
ಅಂಕಿತ ಕೊಟ್ಟವರು - ಶ್ರೀ ವಿಜಯದಾಸರು.
ಅಂಕಿತ ಪಡೆದ ಸ್ಥಳ - ನವ ವೃಂದಾವನ. ಶ್ರೀ ವಿಜಯದಾಸರು ಮೋಹನನನ್ನು ನವ ವೃಂದಾವನಕ್ಕೆ ಶ್ರೀ ವ್ಯಾಸರಾಜರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದಾಗ ಬೃಂದಾವನದಿಂದ ಪ್ರತ್ಯಕ್ಷ ದರ್ಶನ ಕೊಟ್ಟ ವ್ಯಾಸರಾಯರು ಮೋಹನನಿಗೆ ಅಂಕಿತ ನೀಡಲು ಆದೇಶಸಿದರಂತೆ.)
ಅಪಮೃತ್ಯು ಬಂದ ಸ್ಥಳ - ಚೀಕಲಪರವಿ (ಮಾನವಿ ತಾಲೂಕು ರಾಯಚೂರು ಜಿಲ್ಲಾ )
ಗ್ರಂಥಗಳು - ಹಲವಾರು ಕೀರ್ತನೆಗಳು, ಪದಪದ್ಯ, ಸುಳಾದಿಗಳು, ಕೋಲು ಹಾಡು, ಮುಂತಾದುವು. ತಾರತಮ್ಯಅನುಸಾರ, ದಾಸ ಕಕ್ಷ, ಯತಿ ಕಕ್ಷ, ಹಾಗು ದೇವತಾ ಕಕ್ಷಕ್ಕೆ  ಕೀರ್ತನೆಗಳನ್ನು ರಚಿಸಿದವರು. ವಿಶೇಷವಾಗಿ ತಂದೆ ಹಾಗು ಗುರುಗಳಾದ  ಶ್ರೀ  ವಿಜಯದಾಸರ ಮೇಲಿನ ಕೃತಿಗಳೇ ಜಾಸ್ತಿ ಎನ್ನುವರು. ತತ್ವಾರ್ಥಗರ್ಭಿತ 217 ನುಡಿಗಳುಳ್ಳ ಕೋಲು ಪದ ತುಂ ಬ ಪ್ರಸಿದ್ಧವಾದದ್ದು.
ಕಾಲವಾದದ್ದು - ಜೇಷ್ಠ ಮಾಸ ಶುದ್ಧ ಷಷ್ಟಿ ಕ್ರಿ. ಶ.1815.
ಶ್ರೀ ಮದಾನಂದತೀರ್ಥರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿ ತೀರ್ಥರು ಪ್ರತಿಷ್ಟಾಪಿಸಿದ ಶ್ರೀ ರಾಮ ಸೀತಾ ಲಕ್ಶ್ಮಣ ಹಾಗು ಹನುಮಂತ ದೇವರ ದರ್ಶನವನ್ನು ತಮ್ಮ 80ನೇ ಇಳಿ ವಯಸ್ಸಿನಲ್ಲಿ ಚಿಕ್ಕೆರಹಳ್ಳಿಗೆ ಹೋಗಿ ಪಡೆದವರು.
ಇಂತಹ ಮಹಿಮಾನ್ವಿತ ದಾಸವರ್ಯರ ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುವೆ.
ಸಕಲ ದಾಸವಾರ್ಯಂತರ್ಗತ ಸಕಲ ಗುರುಗಳಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣ ನಮಸ್ತು.
🙏🙏🙏🙏🙏
🌺🌺🌺🌺🌺🌺🌺🌺🌺
⚜️⚜️⚜️⚜️⚜️⚜️⚜️⚜️⚜️
ದಿನಾಂಕ :16.06.2021
ಶ್ರೀ ಮೋಹನದಾಸರ ಆರಾಧನ ನಿಮಿತ್ತ.. ಅವರ ಕೃತಿಗಳು / ಅವರನ್ನು ಕುರಿತ ಕೃತಿಗಳ ವಿಶೇಷ....

ಶ್ರೀ ಮೋಹನದಾಸರು..

"ಮೋಹಾಭಯ ದುಃಖಾದಿ ದೂರಂ
ಲೋಹಲೋಷ್ಠ ಸಮೇಕ್ಷಣಂ
ಮಾಹಿತಾಂಘ್ರಿ ಸರೋಜಭೃಂಗಂ
ಮೊಹನಾರ್ಯ ಗುರುಂ ಭಜೇ"

ಶ್ರೀ ವಿಜಯದಾಸರು ಒಮ್ಮೆ ಹಂಪಿಯ ಚಕ್ರತೀರ್ಥದಲ್ಲಿ ಪುರಂದರದಾಸರ ಆರಾಧನೆ ಮಾಡುತ್ತಿದ್ದರು. ಆ ದಿನ ಮುಂಜಾನೆ ಯಾರೋ ನದಿಗೆ ಹಾರಲು ಸಿದ್ಧರಾಗಿದ್ದದ್ದು ಕಂಡಿತು.

ದಾಸ ಸಾಹಿತ್ಯWhere stories live. Discover now