*ಶ್ರೀ ಬ್ರಹ್ಮಣ್ಯತೀರ್ಥರು

0 0 0
                                    

    *ವೈಶಾಖ ಬಹುಳ ದಶಮೀ*

*ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸಪುಂಗವಃ/*
*ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ//*

ಇಂದಿನಿಂದ ನಾಲ್ಕು ದಿನದ ವರೆಗೆ *ಶ್ರೀ ಬ್ರಹ್ಮಣ್ಯತೀರ್ಥರ ಆರಾಧನಾ* ಮಹೋತ್ಸವ... (ಅಬ್ಬೂರು)

ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರಂತಹಾ ಅಮೂಲ್ಯ ವಜ್ರವನ್ನು ನೀಡಿದಂತಹವರು, ವಾದಿಗಳಿಗೆ ಸಿಂಹದಂತಿರುವವರು, ಪರಮ ವೈರಾಗ್ಯ ಗುಣೋಪೇತರೂ, ನಮ್ಮನ್ನು ಕಾಪಾಡುವುದಕ್ಕೇ ಹುಟ್ಟಿಬಂದ ಸೂರ್ಯದೇವರು,
ಇವತ್ತಿಗೂ ಕಣ್ವತಟದಲ್ಲಿ ವೃಂದಾವನದಲ್ಲಿ ಕುಳಿತು ಬೇಡಿದವರಿಗೆ ಇಷ್ಟಾರ್ಥಗಳನ್ನು ತೀರಿಸುವುದಷ್ಟೇ ಅಲ್ಲದೇ ಆರೋಗ್ಯಾದಿಗಳನ್ನು ಪ್ರದಾನಮಾಡುವ ಮಹಾನ್ ಚೇತನರೂ, *ಸೂರ್ಯಾಂಶ* ಸಂಭೂತರಾದ, ಶ್ರೀ ಪುರುಷೋತ್ತಮತೀರ್ಥರ ಶಿಷ್ಯರೂ, ಶ್ರೀ ರಾಜೇಂದ್ರತೀರ್ಥರ ವಿದ್ಯಾಶಿಷ್ಯರೂ,
ಸೇವೆ ಮಾಡಿದವರಿಗೆ ವರಗಳು ನೀಡುವ, ಶರಣಾಗತರ ಕಷ್ಟಗಳನ್ನು ಪರಿಹರಿಸಿ ಸಲಹುವ, ಮಕ್ಕಳಿಲ್ಲದವರಿಗೆ ಮಕ್ಕಳನ್ನು ಪ್ರಸಾದಿಸುತ್ತಿರುವ, ಏನೇ ಸಂಕಟ ಬಂದರೂ ಸೇವೆ ಮಾಡಿ,  ಆರಾಧನೆ ಮಾಡಿದವರನ್ನು , ತಮ್ಮನ್ನು ಬೇಡಿ ಬಂದವರನ್ನು ಸದಾ ಸದಾ ಸಲಹುತ್ತಿರುವ, ನನ್ನ ಜೀವಪ್ರದಾತರು, ಆರೋಗ್ಯ ಪ್ರದಾತರೂ  ಶ್ರೀ ಶ್ರೀ  *ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರ* ಅನುಗ್ರಹ ಸದಾ ಸದಾ ನಮ್ಮ ಎಲ್ಲರಿಗೂ ಇದ್ದು, ಆರೋಗ್ಯಾದಿ ಅಷ್ಟೈಶ್ವರ್ಯಗಳನ್ನು ನೀಡಿ ಕಾಪಾಡಲೀ ..

ಹಾಗೆಯೆ *ದೇಶಕ್ಕೆ ಬಂದ ಈ ಘೋರ ಆಪತ್ತನ್ನು* *ಸೂರ್ಯಾಂಶಜರು ತಮ್ಮ ಜ್ಞಾನ ಕಿರಣಗಳಿಂದ ಸುಟ್ಟು ಹಾಕಲಿ* ಎಂದು ಅವರಲ್ಲಿ ಪೂರ್ಣ ಜೀವದ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ......

ಮತ್ತೆ.. ಶ್ರೀ ಶ್ರೀಪಾದರಾಜಮಠದ 15 ನೇ ಶತಮಾನದ ಯತಿಗಳಾದ ಶ್ರೀ *ಶ್ರೀಪತಿತೀರ್ಥರ* ಆರಾಧನಾ ಮಹೋತ್ಸವ , ಮುಳಬಾಗಿಲು..

ಹಾಗೆಯೇ..

*ರಂಗನಾಮಾಭಿದಂ ವಂದೇ ಕವಿತಾಳ ಪುರ ವಾಸಿನಂ/*
*ವೈರಾಗ್ಯ ಭಾಗ್ಯ ಸಂಪನ್ನಂ ಭಕ್ತಾಭೀಷ್ಟ ಪ್ರದಾಯಕಂ//*

ವೆಂಕಪ್ಪನ ಅನುಗ್ರಹ ಪಡೆದವರು,
ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಪರಮ ಭಕ್ತರು, ರಾಯರ ಪರಮ ಕರುಣಾಪಾತ್ರರೂ, ಮಹಾನ್ ಮಹಿಮಾ ಗುಣ ಸಂಪನ್ನರೂ, ವೈರಾಗ್ಯ ಮೂರ್ಧನ್ಯರು, ಇಂದಿಗೂ  ಆಂಧ್ರದ, ಕೌತಾಳದ ವೃಂದಾವನದಲ್ಲಿ ನಿಂತ ಭಕ್ತರನ್ನು ಕಾಯ್ತಿರುವವರಾದ *ಶ್ರೀ ಕೌತಾಳಂ ರಂಗಯ್ಯನವರ* ಪೂರ್ವಾರಾಧನೆಯೂ...

ಮಹಾನ್ ಯತಿದ್ವಯರು, ಶ್ರೀ ರಂಗಯ್ಯನವರು ನಮಗೆ ಸನ್ಮತಿಯನಿತ್ತು ಸದಾ ಸಾಧನೆಯ ಹಾದಿಯಲ್ಲಿ ನಡೆಸುವಂತಾಗಲೀ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ.....

ದಾಸ ಸಾಹಿತ್ಯWhere stories live. Discover now