ಮೊದಲಕಲ್ ಶ್ರೀ ಶೇಷದಾಸಾರ್ಯರು

0 0 0
                                    

*ಶ್ರೀಶೇಷದಾಸರು
**************
ಶ್ರೀಶೇಷದಾಸರು ಹುಟ್ಟಿದ್ದು 1800 ರಲ್ಲಿ ಮೆಹಬೂಬ್ ನಗರದ ದರೂರು ಎಂಬ ಊರಿನಲ್ಲಿ.
ಇವರು ಗಡ್ವಾಲ್ ಸಂಸ್ಥಾನದ ರಾಜನಾಗಿದ್ದ ಸೋಮ ಭೂಪಾಲನ ಹತ್ತಿರ ಕೆಲಸಮಾಡುತ್ತಿದ್ದರು.ಇವರು ಅವರ ತಂದೆಯವರು ಮಾಡುತ್ತಿದ್ದ ಕುಲಕರ್ಣಿ ವೃತ್ತಿ
ಯನ್ನೇ ಮಾಡುತ್ತಿದ್ದರು.
ಬಹಳ ಸಜ್ಜನಿಕೆಯ ಮನೋಭಾವ ಉಳ್ಳವರಾಗಿದ್ದರು.ಇವರ ಮೃದು ಸ್ವಭಾವದಿಂದಾಗಿ ರೈತರುಗಳಿಂದ ಕರ ವಸೂಲಿ
ಮಾಡಲಾಗದಿದ್ದುದಕ್ಕಾಗಿ ಗದ್ವಾಲಿನ ಸೋಮ ಭೂಪಾಲ ರಾಜ ಅವರನ್ನು ಕೆಲಸದಿಂದ ವಜಾಮಾಡುತ್ತಾನೆ.
ಶೇಷಪ್ಪನವರು ಇದರಿಂದಾಗಿ ಯಾವ ಚಿಂತೆಯನ್ನೂ ಮಾಡದೆ ಮನೆಗೂ ವಾಪಸ್ಸು ಹಿಂದಿರುಗದೆ ದರೂರಿನ ಹತ್ತಿರದ ಚಿಂತಲರೇವಿನಲ್ಲಿರುವ ಶ್ರೀವ್ಯಾಸತೀರ್ಥರು ಪ್ರತಿಷ್ಠೆ ಮಾಡಿದ್ದ ಶ್ರೀಮಖ್ಯಪ್ರಾಣದೇವರ ಮೊರೆ ಹೋಗುತ್ತಾರೆ.ಶ್ರೀಪ್ರಾಣದೇವರು ಸ್ವಪ್ನದಲ್ಲಿ ಸೂಚಿಸಿದಂತೆ ಮೊದಲುಕಲ್ಲಿಗೆ ತೆರಳಿ
ತಪಸ್ಸಿನಲ್ಲಿ ಮಗ್ನರಾಗುತ್ತಾರೆ.ಕೇವಲ ತುಳಸೀದಳ ಸೇವಿಸಿ ಉಪವಾಸದಿಂದ ಮುಖ್ಯಪ್ರಾಣದೇವರನ್ನು ಪ್ರಾರ್ಥಿಸುತ್ತಾರೆ.
ಅವರು ಧ್ಯಾನಮಾಡಿ ಕೃಶರಾದರೂ ಅವರ
ಮುಖದಲ್ಲಿ ಒಳ್ಳೆಯ ದೈವದತ್ತವಾದ ಕಾಂತಿ
ಮಿರುಗುತ್ತಿತ್ತು.ಅವರು ದೇವರೇ ಕೊಟ್ಟ ಪರೀಕ್ಷೆ
ಎಂದು ಆನಂದಮಗ್ನರಾಗಿದ್ದರು.
ಅವರಿಗೆ ಸ್ವಪ್ನದಲ್ಲಿ ಅವರ ಕುಲದೇವರಾದ
ಶ್ರೀಶ್ರೀನಿವಾಸನ ದರ್ಶನವೂ ಆಯಿತು.
ಇವರಿಗೆ ಗುರುವಿಜಯ ವಿಠಲ ಎಂಬ ಹರಿದಾಸ ದೀಕ್ಷೆ ಅಂಕಿತ ಪ್ರದಾನವೂ ಆಯಿತು.
ಅವರ ಮೊದಲ ಕೃತಿ:
"ನಂಬಿದೆ ನಿನ್ನ ಪಾದ ಮುಖ್ಯಪ್ರಾಣ
ಡಿಂಭದೊಳಗೆ ಹರಿಯ ಬಿಂಬ ಪೊಳೆಯುವಂತೆ
ಮಾಡು......""
ತಮ್ಮ ಬದುಕಿನ ಹೆಚ್ಚುಕಾಲವನ್ನು ದೇವರಸೇವೆಯಲ್ಲಿ ಕಳೆದರು.
ಅಲ್ಲಿಗೆ ಬಂದ ವರಿಗೆ  ನಾಮ ಸಂಕೀರ್ತನೆ,ಮತ್ತು
ಶ್ರವಣಾದಿಗಳಿಂದ ಮನದಣಿಸುತ್ತಿದ್ದರು.
ಶ್ರೀನಿವಾಸನ,ಶ್ರೀಪ್ರಾಣದೇವರ ಕೃಪೆಯಿಂದ ಅವರ ಕೀರ್ತಿವ್ಯಾಪಿಸಿ ಸಜ್ಜನರು ತಂಡೋಪ
ತಂಡವಾಗಿ ಅವರ ಬಳಿ ಬಂದು ಧನ್ಯರಾದರು.
ದಾಸರು ಶ್ರೀಜಗನ್ನಾಥದಾಸರು ರಚಿಸಿರುವ ಹರಿಕಥಾಮೃತ ಸಾರದ ಮೇಲೆ ವ್ಯಾಖ್ಯಾನವನ್ನೂ ರಚಿಸಿದ್ದಾರೆ.
ಇಲ್ಲಿಗೆ ಬಂದವರಿಗೆ ದಾಸರ ಮೂಲಕ ಶ್ರೀನಿವಾಸನ ದರ್ಶನ ಮತ್ತು ಅನುಗ್ರಹದ ಭಾಗ್ಯ ದೊರೆಯುತ್ತಿತ್ತು.
ಶ್ರೀಶೇಷದಾಸರು ಭಗವಂತನ ಅನುಗ್ರಹದಿಂದ
ಅನೇಕ ಪವಾಡ ಸದೃಶ ಘಟನೆಗಳನ್ನು ತೋರಿಸಿದ್ದಾರೆ.
ಅನೇಕ ಭಕ್ತರ ಉನ್ಮಾದ ರೋಗ,ಭೂತಬಾಧೆ,ಸಂತಾನ ಹೀನತೆಗಳನ್ನು ಶ್ರೀವಾಯುದೇವರ ಅನುಗ್ರಹದಿಂದ ಕಳೆದು ಇಂದಿಗೂ ಜನರು ಮೊದಲಕಲ್ಲಿಗೆ ಹೋಗಿ ಅನುಗ್ರಹ ಪಡೆಯುತ್ತಿದ್ದಾರೆ ಎಂದು ಕೇಳಿದ್ದೇವೆ.
ಶ್ರೀಗುರು ವಿಜಯವಿಠಲರು ವೈಶಾಖ ಶುದ್ಧ ಅಷ್ಟಮೀ (1869)ಯಂದು ಹರಿಪದವನ್ನೈದಿದರು.
ಈದಿನವನ್ನು ಅವರ ಆರಾಧನಾ ದಿನವನ್ನಾಗಿ
ಭಕ್ತರು ಆಚರಿಸುತ್ತಾ ಬಂದಿದ್ದಾರೆ.
ಮೊದಲಕಲ್ಲು ಶ್ರೀಶೇಷದಾಸರ ಆರಾಧನ ದಿನವಾದ ಇಂದು ಶ್ರೀದಾಸರನ್ನು  ಸ್ಮರಣೆಮಾಡಿ,ಭಕ್ತಿಪೂರ್ವಕ ನಮಸ್ಕಾರಗಳನ್ನು
ಅರ್ಪಿಸಿ ಅವರ ಅಂತರ್ಯಾಮಿಯಾದ ಶ್ರೀಪ್ರಾಣದೇವರು,ಶ್ರೀಶ್ರೀನಿವಾಸದೇವರ ಅನುಗ್ರಹಕ್ಕೆ ಪಾತ್ರರಾಗೋಣ.
*************************************
ಶ್ರೀಂ ಶ್ರೀ ಕಂ ಕಪಿಲಾಯ ನಮಃ*

ದಾಸ ಸಾಹಿತ್ಯWhere stories live. Discover now