ಮೀರಾ

1 0 0
                                    

*ಮೀರಾ ಭಜನೆ ಕನ್ನಡದ ಕಂಠದಲ್ಲಿ*

ಕೋರಿಕೆಯೊಂದ ಕೇಳೋ ಮುರಾರಿ
ಕೇಳೋ ಶ್ರೀಹರಿ ಈ ಹೃದಯದ ಅಧಿಕಾರಿ

ಮೋಹನ ತಂದಿದೆ ಸವರಿದ ನವಿಲುಗರಿ
ಒಪ್ಪಿಕೋ ಎನ್ನನು ಮನ ಪಿತಾಂಬರಧಾರಿ

ಜನುಮ ಜನುಮದಲಿ ಕೂಡಿದೆ ಈ ಲಗ್ನ
ಸಾಕ್ಷಿ ಕೇಳೆಲೋ ಇಂದು ತಾರೆ ಗಗನ

ಕಾಯ್ದಿಹೆ ನಿನಗೆ ಪ್ರತಿ ಉಸುರನು ತೇಯ್ದು
ಸತಾವಣೆ ಏಕೆ ಮನಸನು ಕದ್ದೊಯ್ದು

ಕಂಗಳು ಕಾದಿವೆ ಮುಚ್ಚದೇ
ರೆಪ್ಪೆ ಮುಚ್ಚದ ಲೋಚನನೆ

ಒಪ್ಪು ಪ್ರೇಮವ ಬಾಧಾಹರ ಭವ ವಿಪತ್ತಿ ಮೋಚನನೇ

ಸ್ವಾಗತ ಕೋರುವ ಸತ್ತಾ ಕೊಡು ಹರಿ
ಶರಣಾಗತ ವತ್ಸಲ ಭಕ್ತ ಪೂಜಾರಿ

ಏನು ಹೇಳಲಿ ನೀ ಅಂತರ್ಯಾಮಿ
ತನು ಮನ ಘನ ಪ್ರಾಣದ ಸ್ವಾಮಿ

ಕರುಣಾಕರ ದಾಮೋದರ ವಿಠಲ
ಒಪ್ಪಿಕೋ ಈಗಲೇ ಮೀರಾಲೋಲ

ದಾಸ ಸಾಹಿತ್ಯWhere stories live. Discover now