ಶ್ರೀ ಧೀರೇಂದ್ರ ತೀರ್ಥರು

1 0 0
                                    

🌺🌺🌺🌺🌺🌺🌺
*ಶ್ರೀ ಧೀರೇಂದ್ರ ತೀರ್ಥರ ಚರಿತ್ರೆ*
🌺🌺🌺🌺🌺🌺🌺
ಗೌಡನು ತನ್ನ ಧರ್ಮದ ಅಹಂಕಾರದಲ್ಲಿ ಗುರುಗಳು ಕಾಲರಾಗಿ ಆರೇಳು ವರ್ಷಗಳಾದವು. ಅವರ ದೇಹ ಕೊಳೆತಿರುತ್ತದೆ. ಎಂದು ವಾದಿಸಿ ಕೊನೆಗೆ ಒಂದು ಸವಾಲು ಹಾಕಿದನು.  ಒಂದು ವೇಳೆ ಗುರುಗಳ ದೇಹ ಮೊದಲಿನಂತಿದ್ದರೆ ನಾನು ಮಠಕ್ಕೆ ಸ್ಥಳ ಕೊಡುವೆ. ಇಲ್ಲದಿದ್ದರೆ ನೀವು ಮತಾಂತರ ಆಗಬೇಕು ಎಂದನು.  ವಿಪ್ರ ಸಮುದಾಯಕ್ಕೆಬಿಸಿ ತುಪ್ಪ ದಂತಾಯಿತು. ಗುರುಗಳ ಮೇಲೆ ನಂಬಿಕೆ ವಿಶ್ವಾಸ ಇಟ್ಟು ಸರಿ ಎಂದು ಮುಂದಿನ ಕಾರ್ಯಕ್ಕೆ ಅಣಿಯಾದರು.  ಗೌಡನನ್ನು ಮೊದಲು ಮಾಡಿ ಎಲ್ಲರಿಗೂ ಆಶ್ಚರ್ಯ ಕಾದು ಕುಳಿತಿತ್ತು. ಗುರುಗಳ ಮೈಮೇಲಿನ ಗಂಧ ಅಕ್ಷತೆ ಒಣಗಿರಲಿಲ್ಲ.  ತುಳಸೀ ಹಾರ ಹಸಿರಾಗಿ ಇಟ್ಟು. ದೇಹ ವಿಕಾರ ಆಗಿರಲಿಲ್ಲ.  ಗೌಡ ತನ್ನ ಮಾತಿಗೆ ಮರ್ಯಾದೆ ಕೊಟ್ಟು ಗುರುಗಳ ವೃಂದಾವನಕ್ಕೆ ಜಾಗ ಕೊಟ್ಟನು.  ಅಲ್ಲದೆ ತನ್ನಲ್ಲಿದ್ದ ಬ್ರಾಹ್ಮಣ ದ್ವೇಷ ಮರೆತು ಮಿತ್ರನಂತಾದನು.  ಇಂದಿಗೂ ಹೊಸರಿತ್ತಿ ಗ್ರಾಮದಲ್ಲಿ ಗುರುಗಳ ವಿಷಯದಲ್ಲಿ ವೀರಶೈವ ಜನಾಂಗದವರು ಒಂದಾಗಿ ಬ್ರಾಹ್ಮಣರ ಸಂಗಡ ಕೂಡಿಕೊಂಡು ಆರಾಧನೆ ಆಚರಿಸುತ್ತಾ ಬಂದಿದ್ದಾರೆ.

ಧಿರೇಂದ್ರರ ವೃಂದಾವನ ಆದಮೇಲೆ ಎಷ್ಟೋ ಪವಾಡಗಳು ಆಗಿವೆ.  ಭಕ್ತರ ಅಭೀಷ್ಟೆಗಳನ್ನು ನೆರವೇರಿಸಿದ್ದಾರೆ.  ಇದರಿಂದ ಧಿರೇಂದ್ರರ ಮಹಿಮೆ ಬೆಳೆಯುತ್ತಾ ಬಂದಿದೆ. ಶ್ರೀ ಧಿರೇಂದ್ರರು ಶ್ರೀ ರಾಘವೇಂದ್ರರ ಪರಮ ಭಕ್ತರು. ಇಂದಿಗೂ ಹೊಸರಿತ್ತಿಯಲ್ಲಿ ರಾಘವೇಂದ್ರ ಸ್ತೋತ್ರ ಪಠಿಸುತ್ತ ಎಲ್ಲ ಪೂಜೆ ನಡೆಯುತ್ತವೆ.
ಅಂದಾಜು ಮೂವತ್ತು ನಲವತ್ತು ವರ್ಷ ಗಳ ಹಿಂದಿನ ಸಂಗತಿ ಇರಬಹುದು.  ರಿತ್ತಿಯಲ್ಲಿ ಶ್ರೀ ಬಾಗಲಕೋಟಿ ಶೀನಪ್ಪ ಎಂಬ ಭಕ್ತರು ಇದ್ದರು.  ಊರಿಗೆ ನಾಯಕರಂತೆಯೂ ಇದ್ದರು.  ಒಂದುಸಲ ಬದರಿ ಯಾತ್ರೆಗೆ ಹೋದಾಗ ಅವರಿಗೆ ಆಯಾಸದಿಂದ ಜ್ವರದ ಭಾದೆ ಆಯಿತು.  ಔಷಧೋಪಚಾರ ನಡೆಯಿತು.  ಗುಣಮುಖರಾಗಲಿಲ್ಲ.  ಏನು ಮಾಡಬೇಕೆಂಬುದು ತಿಳಿಯಲಿಲ್ಲಾ. ಗುರುಗಳನ್ನು ನೆನೆದು ಮಲಗಿದರು. ಸ್ವಪ್ನದಲ್ಲಿ ಗುರುಗಳು ಕಾಣಿಸಿಕೊಂಡು ನಿನ್ನ ಮಕ್ಕಳು ನನ್ನ ಮಠಕ್ಕೆ ಬಂದಿಲ್ಲ ಬರಲು ಹೇಳು ನಿನಗೆ ಗುಣವಾಗುವದು ಎಂದು ಹೇಳಿದಂತಾಯಿತು.  ಬೆಳಿಗ್ಗೆ ಎದ್ದು ಮೊದಲು ದೂರವಾಣಿ ಮಾಡಿ ಮಕ್ಕಳಿಗೆ ವಿಷಯ ತಿಳಿಸಿದರು.  ಮಕ್ಕಳು ಮಠಕ್ಕೆ ಬಂದು ಸೇವೆ ಮಾಡಿದರು. ಇಟ್ಟ ಬದರಿಯಲ್ಲಿ ತಂದೆ ಗುಣಮುಖರಾಗಿ ಮನೆಗೆ ಬಂದರು. ಎಲ್ಲರಿಗೂ ಗುರುಗಳ ಬಗ್ಗೆ ಭಕ್ತಿ ನಂಬಿಕೆ ಇನ್ನು ಹೆಚ್ಚು ಬೆಳೆದು ಮಹಿಮೆ ಪ್ರಚಾರವಾಯಿತು.  
ಗುರುಗಳ ಅಂತರ್ಗತ ಭಾ. ಮು. ಅಂ. ಹಯಗ್ರೀವ ದೇವರು ಸಕಲರಿಗೂ ಆಯುರಾರೋಗ್ಯ ಕೊಡಲೆಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.
[27/3 5:05 ಅಪರಾಹ್ನ] Prasad Madwa Grpjj Punyavanta: *ಶ್ರೀ ರಾಯರ ಅಗಮ್ಯ ಮಹಿಮೆ...*(2019 ಆರಾಧನಾ ಸಮಯ)
ಇತ್ತೀಚೆಗೆ ಶ್ರೀ ಧೀರೇಂದ್ರತೀರ್ಥ ಗುರುಗಳ ಆರಾಧನೆಯಂದು ಹೊಸರಿತ್ತಿ ಕ್ಷೇತ್ರಕ್ಕೆ ಹೋಗಿದ್ದೆವು. ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಉಪನ್ಯಾಸವಾದ ನಂತರ ಚಿತ್ರದುರ್ಗ ಶ್ರೀರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ಇತ್ತೀಚೆಗೆ ವರ್ಗಾವಣೆಯಾಗಿ ಬಂದಿರುವ ವ್ಯವಸ್ಥಾಪಕರು ಒಂದು ಶ್ರೀರಾಯರ ಮಹಿಮಾ ವೃತ್ತಾಂತವನ್ನು ತಿಳಿಸಿದರು.

ಚಿತ್ರದುರ್ಗದ ಶ್ರೀಮಠದಲ್ಲಿ ನೀರಿನ ತೊಂದರೆಯಿಂದ ಸುಮಾರು ಆರು-ಏಳು ಕೊಳವೆ ಬಾವಿಗಳನ್ನು ತೆಗೆಸಿದರೂ ಒಂದು ಹನಿ ನೀರು ಬಾರದೆ ಸುಮ್ಮನೇ ವ್ಯರ್ಥ ಪ್ರಯತ್ನವಾಯ್ತು. ಅಲ್ಲದೇ ಹಣವೂ ಖರ್ಚಾಯಿತು, ಏನೂ ಪ್ರಯೋಜನವಾಗಲಿಲ್ಲ.

ಇದರಿಂದ ಬೇಸರಗೊಂಡ ಶ್ರೀಮಠದ ವ್ಯವಸ್ಥಾಪಕರು ಈ ವಿಷಯವನ್ನು ಮಂತ್ರಾಲಯದಲ್ಲಿರುವ ಶ್ರೀಸುಬುಧೇಂದ್ರ ತೀರ್ಥರಿಗೆ ತಿಳಿಸಿ ಗುರುಗಳಿಗೆ ಶ್ರೀಗುರುಸಾರ್ವಭೌಮರಲ್ಲಿ ಪ್ರಾರ್ಥನೆ ಮಾಡಿ ನೀರಿನ ಅನುಕೂಲ ಮಾಡಿಸಿಕೊಡುವಂತೆ ಅರಿಕೆ ಮಾಡಿಕೊಂಡರು.

ಶ್ರೀ ಸುಬುಧೇಂದ್ರತೀರ್ಥರು ಶ್ರೀರಾಯರಲ್ಲಿ ಈ ವಿಷಯವಾಗಿ ಪ್ರಾರ್ಥಿಸಿಕೊಂಡಾಗ ಶ್ರೀರಾಯರು ಶ್ರೀಪಾದಂಗಳವರಿಗೆ ಸ್ವಪ್ನದಲ್ಲಿ ಇಂತಹ ಜಾಗದಲ್ಲಿ ಕೊಳವೆಬಾವಿ ತೋಡಿಸಿದರೆ ನೀರು ಬರುತ್ತದೆ ಎಂದು ಸೂಚಿಸುತ್ತಾರೆ. ಅದರಂತೆ ಶ್ರೀ ಸ್ವಾಮಿಗಳು ಮಠದ ವ್ಯವಸ್ಥಾಪಕರಿಗೆ ಶ್ರೀಗುರುಸಾರ್ವಭೌಮರು ಸ್ವಪ್ನದಲ್ಲಿ ತಿಳಿಸಿದ ಜಾಗವನ್ನು ತಿಳಿಸಿ ಕೊಳವೆಬಾವಿ ತೋಡಿಸಲು ತಿಳಿಸುತ್ತಾರೆ.

ಸ್ವಪ್ನದಲ್ಲಿ ಸೂಚಿಸಿದ ಜಾಗ ಯಾವುದೆಂದರೆ ಮಠಕ್ಕೆ ದಾರಿ ಎಂದು ಸೂಚನಾ ಫಲಕದ(ಬೋರ್ಡ್) ಇದೆ. ಅದರಿಂದ ಒಂದು ಗೆರೆ ಎಳೆದು ಆ ಜಾಗದಲ್ಲಿ ನೀರು ಬರುತ್ತೆಯೆಂಬುದಾಗಿರುತ್ತದೆ.

ವ್ಯವಸ್ಥಾಪಕರು ಹೊಸದಾಗಿ ಬಂದಿದ್ದರಿಂದ ಅವರು ಆ ಜಾಗವನ್ನು ಹುಡುಕುತ್ತಾ ಹೋದಾಗ ಸೂಚನಾ ಫಲಕ ಹಳೆಯದಾಗಿ ಬರೀ ದಾರಿ ಎಂದು ಮಾತ್ರ ಕಂಡಿತು. ಅವರು ಶ್ರೀಗಳವರು ತಿಳಿಸಿದ ಪ್ರಕಾರ ಆ ಬೋರ್ಡಿನಿಂದ ಗೆರೆ ಎಳೆದು ಆಜಾಗದಲ್ಲಿ ಕೊಳವೆ ಬಾವಿ ತೋಡಿಸಿದಾಗ 180 ಅಡಿಗಳ ಆಳದಲ್ಲಿ ನಾಲ್ಕು ಇಂಚು ನೀರು ದೊರಕಿತು ಎಂದು ವ್ಯವಸ್ಥಾಪಕರು ಬಹಳ ಸಂತೋಷದಿಂದ ಈ ಪವಾಡ ನಡೆದಿದ್ದನ್ನು ತಿಳಿಸಿದರು.

ಇನ್ನೊಂದು ವಿಷಯವೆಂದರೆ ಶ್ರೀಪಾದಂಗಳವರು ಈ ಜಾಗವನ್ನು ನೋಡಿಲ್ಲ ಮತ್ತು ವ್ಯವಸ್ಥಾಪಕರೂ ಸಹ ಹೊಸದಾಗಿ ಬಂದಿದ್ದರಿಂದ ಜಾಗವನ್ನು ಅಲ್ಲಿಯವರೆಗೂ ನೋಡಿಲ್ಲ. ಶ್ರೀರಾಯರು ಅನುಗ್ರಹಿಸಿ ಸೂಚಿಸಿದ ಜಾಗದಲ್ಲಿ ಕೊಳವೆ ಬಾವಿ ತೋಡಿಸಿದ್ದರಿಂದ ಚಿತ್ರದುರ್ಗದ ರಾಯರಮಠದಲ್ಲಿ ನೀರಿನ ಬವಣೆ ತಪ್ಪಿದೆ.

ಹಿಂದೆ ರಾಯರು ಬಿಸಿಲಿಯಲ್ಲಿ ಕಾದು ಹೋಗಿದ್ದ ಬಯಲುಸೀಮೆಯ ಬಂಡೆಯೊಂದರಿಂದ ತಮ್ಮ ತಪಃಶಕ್ತಿಯಿಂದ ಗಂಗೆಯನ್ನು ಚಿಮ್ಮಿಸಿದ್ದರು ಎಂದು ಕೇಳಿದ್ದೇವೆ. ಆದರೆ, ಈಗ ನೀರಿಗೆ ಬರಗಾಲವಿರುವ ಚಿತ್ರದುರ್ಗದಂತಹ ಬಯಲುಸೀಮೆಯಲ್ಲಿ ರಾಯರು ನಡೆಸಿದ ಪವಾಡ ಗುರುಗಳ ಕರುಣೆ ಹಾಗೂ ಶಕ್ತಿಗೆ ಸಾಕ್ಷಿಯಾಗಿದೆ.

ಇದು ಭಕ್ತರಿಂದ ರಾಯರು ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಮಂತ್ರಾಲಯ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪವಾಡಗಳಿಗೊಂದು ಜ್ವಲಂತ ನಿದರ್ಶನ..

ಓಂ ಶ್ರೀರಾಘವೇಂದ್ರಾಯ ನಮಃ

ದಾಸ ಸಾಹಿತ್ಯWhere stories live. Discover now