*ಶ್ರೀಅಹೋಬಲಾಚಾರ್ಯರು ಗುರುಗೋವಿಂದದಾಸರಿಗೆ ಮಾಡಿದ ಅನುಗ್ರಹ*
ಶ್ರೀ ಇಭರಾಮಪುರ ಅಪ್ಪಾವರ ಏಕ ಮಾತ್ರ ಸುಪುತ್ರರು ಶ್ರೀ ಅಹೋಬಲಾಚಾರ್ಯರು. ತಂದೆಯಂತೆಯೇ ಮಹಾತಪಸ್ವಿಗಳು. ಶ್ರೀಅಹೋಬಲಾಚಾರ್ಯರು ಸಂಚಾರಾನ್ವಯ ಚಿಕ್ಕಮಗಳೂರಿಗೆ ದಯಮಾಡಿದರು. ಆಚಾರ್ಯರು ತಮ್ಮ ಊರಿಗೆ ಬಂದ ವಿಷಯ ತಿಳಿದು ಶ್ರೀ ರಘುನಾಥರಾಯರು ಮತ್ತು ಸಾಧ್ವಿ ಲಕ್ಷ್ಮೀಬಾಯಿ ಶ್ರೀಅಹೋಬಲಾಚಾರ್ಯರಿನ್ನು ಮನೆಗೆ ಬರಮಾಡಿಕೊಂಡರು. ಶ್ರೀ ಆಚಾರ್ಯರು ರಘುನಾಥರಾಯರ ದಂಪತಿಗಳಿಗೆ ವಿಶೇಷ ಅನುಗ್ರಹಿಸಿ ಸಾಧ್ವಿ ಲಕ್ಷ್ಮೀಬಾಯಿಯವರಿಗೆ ಕೀರ್ತಿವಂತನಾದ ಸುಪುತ್ರ ಜನನವಾಗುತ್ತಾನೆ ಎಂದು ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. ಶ್ರೀಅಹೋಬಲಾಚಾರ್ಯರು ನುಡಿದಂತೆ ಶ್ರೀರಘುನಾಥರಾಯರ ದಂಪತಿಗಳಿಗೆ ಸುಪುತ್ರ ಜನನವಾಯಿತು.
ಈ ವಿಷಯವು ಸ್ವತಃ ಶ್ರೀ ಗುರುಗೋವಿಂದದಾಸರೇ ತಾವು ರಚಿಸಿರುವ ಆ ನಮಿಪೆ ಮಾತೆ ಪಿತರರ್ಗೆ ಎಂಬ ಕೃತಿಯಲ್ಲಿ ನಿರೂಪಿಸಿದಾರೆ
ಶಿರಿ ರಂಗನಾಥಾಖ್ಯ | ವರ ಕುವರಗೀಯತ್ತ
ವರಲಗ್ನ ಜರುಗಿಸಿರೆ | ದಾಂಪತ್ಯ ಸುಖದೊಳಗೆ
*ಇರುತಿರಲು ಇಭರಾಮ | ಪುರ ಮುನಿಸುತರ ಬರವಾಯ್ತು ಚಿಕ್ಕಮಗಳೂರಿಗೆ |*
ವರ ಮುನಿಯನುಗ್ರಹದ | ಲೋರ್ವ ಸುತನುದಾಯವನೆ
ನೆರೆತಿಳುಪಿ ಪೊರಮೂಡಲು | ಸತಿಯ ಲಕ್ಷ್ಮೀ ಬಾಯಿ
ವರಕುವನಂ ಪ್ರಸವಿಸುತ | ಪತಿಯೊಡನೆ ಸಂತಸದಿ ಕಾಲ ಕಳೆಯುತಿರಲು ||ಶ್ರೀ ಅಹೋಬಲಾಚಾರ್ಯರ ಪರಮಾನುಗ್ರಹದಿಂದ ಶ್ರೀರಘುನಾಥರಾಯರ ದಂಪತಿಗಳಿಗೆ ಜನಿಸಿದ ಸುಪುತ್ರ ಗೋವಿಂದ ರಾಯರು ಮುಂದೆ ತಂದೆ ಮುದ್ದುಮೋಹನ ದಾಸರಲ್ಲಿ ದಾಸ ದೀಕ್ಷೆ ಸ್ವೀಕರಿಸಿ ಶ್ರೀ ಗುರುಗೋವಿಂದದಾಸರೆಂದು ಜಗನ್ಮಾನ್ಯರಾದರು.
ಶ್ರೀ ಗುರುಗೋವಿಂದದಾಸರು ಹಲವು ದೇವರ ನಾಮಗಳು ,ಹರಿಭಕ್ತ ವಿಜಯ,ಶ್ರೀ ವಾದಿರಾಜ ಋಜುತ್ವಪ್ರಕಾಶಿಕಾ,ಪಂಚೀಕರಣ, ಸ್ವಪ್ನ ವೃಂದಾವನಾಖ್ಯಾನ ಕನ್ನಡಾನುವಾದ,ಶ್ರೀ ಸುಂದರಕಾಂಡ ರಾಮಾಯಣ, ಮನುಸ್ಮೃತಿ, ಷೋಡಶೀ - ಚತುರ್ದ , ಶೀ - ಆಧ್ಯಾತ್ಮರಸರಂಜನಿಗೆ ಕನ್ನಡ ಗದ್ಯಾನುವಾದ,ಐತರೇಯ - ಈಶಾವಾಸ್ಯ - ತಲಾವಕಾರ- ತೈತ್ತಿರೀಯ - ಮಾಂಡೂಕ - ಅಥರ್ವಣ - ಷಟ್ಪ್ರಶ್ನ - ಕಾಠಕ - ಛಾ೦ದೋಗ್ಯ - ಬೃಹದಾರಣ್ಯಕ ಎಂದು ಖ್ಯಾತವಾಗಿರುವ ಹತ್ತು ಉಪನಿಷತ್ತುಗಳನ್ನು ಸರಳ ಕನ್ನಡ ಪದ್ಯಾನುವಾದವನ್ನು ಮಾಡಿ ಸಾರಸ್ವತಲೋಕಕೆ ವಿಶೇಷ ಕೊಡುಗೆ ನೀಡಿದ್ದಾರೆ.
*ಶ್ರೀ ಇಭರಾಮಪುರಾಧೀಶ*
*ವಿಷ್ಣುತೀರ್ಥಾಚಾರ್ಯ ಇಭರಾಮಪುರ*

YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...