ಕಲ್ಲೂರು ಶ್ರೀಕರವಿಠ್ಠಲದಾಸರು.

1 0 0
                                    

ಭಾನುಕೋಟಿ ತೇಜ ಲಾವಣ್ಯ ಮೂರುತಿ ಶ್ರೀ ವೆಂಕಟೇಶನೆ ನಮೋ ನಮೋ ಶ್ರೀನಿವಾಸ ದಯಾನಿಧೆ...ಸ್ತುತಿರತ್ನ ಮಾಲಾ

ಈ ಹಾಡು ಕೇಳಿದ್ದಿರಾ?ಅಕಸ್ಮಾತ ಕೇಳಿದ್ದರೆ ಥಟ್ಟನೆ ಈ post ನಲ್ಲಿರುವ ರಾಯರ ಹಾಡು ಹಾಡ್ತಿರಿ.

ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಸ್ತೋತ್ರ ಪದ
ರಚನೆ : ಕಲ್ಲೂರು ಶ್ರೀಕರವಿಠ್ಠಲದಾಸರು.

ಪಾಹಿ ಪಾಹಿ ಸುಧೀಂದ್ರಜ!!ಪ!!
ಪಾಹಿ ಪಾಹಿ ನಮೊ! ಪಾಹಿ ಪಾಹಿ ನಮೊ!
ಪಾಹಿ ಶರಣರ ಸುರಭೂಜ!!ಅಪ!!
ಸಲ್ಹಾದನಣ್ಣ ಪ್ರಹ್ಲಾದನು ನೀನವೆ! ಬಾಹ್ಲೀಕ ದ್ವಾಪರ ಯುಗದೊಳು!!೧!!
ಭೂಪ ಕುಂತಿಜನಿಂದ ನೀ ಪಡೆಯುತವರ!ತಾಪಸಿಯೆನಿಸಿದೆ ಇಳೆಯಳು!!೨!!
ಶ್ರೀಪಾದರಾಜರ ನೀ ಪಡೆದೊಲುಮೇಯ!ಗೋಪಿಯ ಕಂದನ ಕುಣಿಸಿದೆ!!೩!!
ಮರಳಿ ಪರಿಮಳ ವಿರಚಿಸಿ ಧರೆಯೊಳು!ಮೆರೆಯುವ ಗುರುರಾಘವೇಂದ್ರಾರ್ಯ!!೪!!
ವಂದ್ಯಾಂಧರಿಗೆ ಸುಕಂದರಕ್ಷಿಗಳ!ಕುಂದದೆ ಕೊಡುತಿಪ್ಪಯತಿವರ!!೫!!
ವಾತಜಾತನ ಮಾತು ಮಾತಿಲಿ ನೀ ಗೆಲಿದೆ! ಭೂತನಾಥನೆ ಪರನೆಂಬರಾ!!೬!!
ಸ್ಬೀಕರಿಸುತ ಸೇವೆ ಮೂಕ ಬಧಿರರಿಗೆ!ಬೇಕಾದವರವಿತ್ತು ಪೊರೆಯುವೆ!!೭!!
ಚೂತರಸದಿ ಬಿದ್ದಪೋತನ ಸಲಹಿದಿ ಖ್ಯಾತನೆ ಬಿನ್ನಪ ಲಾಲಿಸೋ!!೮!!
ಎಲ್ಲಿ ಕರೆಯೆ ನೀನಲ್ಲಿ ಬಂದೊದಗುವೆ! ಬಲ್ಲಿದ ಮಹಿಮನೆ ಬಹುಬೇಗಾ!!೯!!
ಇನಕುಲೇಶನ ಪಾದವನಜಾರಾಧಕ ಯನ್ನ! ಮನದಭಿಲಾಷೆಯ ಸಲಿಸಯ್ಯಾ!!೧೦!!
ಒಂದರಿಯದ ಬಲು ಮಂದಮತಿಯು ನಾನು! ತಂದೆ ಯನ್ನಪರಾಧ ಕ್ಷಮಿಸಯ್ಯಾ!!೧೧!!
ದಂಡ ಕಾಷಾಯ ಕಮಂಡಲ ಭೂಷಿತ! ಮಂಡೆಯ ಬಾಗಿ ನಾ ನಮಿಸುವೆ!!೧೨!!
ಮಾತು ಮಾತಿಗೆ ನೆನೆವಾತುರ ಕೊಡು ನಿನ್ನ! ವಾತಾಜ ಸುಮತಾಬ್ಧಿ ಚಂದಿರ!!೧೩!!
ಸಂತತ ನಿನ್ನನು ಚಿಂತಿಪರಿಗೆ ಬಹು! ಚಿಂತೆಕಳೆವ ಮಂತ್ರಮಂದಿರಾ!!೧೪!!
ತಾಪಸರೊಡೆಯ ಹೃತ್ತಾಪ ನಿವಾರಿಸೊ! ನಾ ಪಾದ ಪಿಡಿವೆ ಕೃಪಾಕರ!!೧೫!!
ಕಂಡವರನು ಬೇಡಿ ಬೆಂಡಾದ ತವಪಾದ! ಪುಂಡರಿಕದಿ ಮನನಿಲ್ಲಿಸಯ್ಯಾ!!೧೬!!
ಮುಂದಾರಿಗಾಣನೆ ನೊಂದೆನೊ ತವಪಾದ! ಸಂದರುಶನವನು ನೀಡಯ್ಯಾ!!೧೭!!
ಶರಗೊಡ್ಡಿ ಬೇಡುವೆ ಪರಿಮಾಳಾರ್ಯನೆ ನಿನ್ನ! ಕರುಣ ಬಾರದೆ ಇನ್ನು ಎನ್ನೊಳು!!೧೮!!
ನಿನ್ನನೆ ನಂಬಿನ್ನು ಅನ್ಯರಿಗಾಲ್ಪರಿಯೆ! ಎನ್ನ ಮನವ ನೀನರಿಯೆಯಾ!!೧೯!!
ಮೋದದಿ ದಾಸರ ಪಾದಧೂಳಿಯೊಳು!ಸಾದುವರಿಯ ಹೊರಳಾಡಿಸೊ!!೨೦!!
ತುಂಗಾತಟದ ಯತಿಪುಂಗವ ಹೃದ! ಯಾಂತರಂಗದಲ್ಲಿಪ್ಪನ ತೋರಯ್ಯ!!೨೧!
ಕರಕರಿಗಾರದೆ ಮೊರೆಹೊಕ್ಕೆ ಎನ್ನನು! ಮರೆಯುವುದುಚಿತವೆ ಗುರುವರಾ!!೨೨!!
ಜನನಿ ಜನಕ ನೀನೆ ವಿನಯದಿ ಬೇಡುವೆ! ಘನಮಹಿಮನೆ ದಯವಿರಲಯ್ಯಾ!!೨೩!!
ಕೂಸಿನ ಜನನಿ ನಿರಾಸೆಗೊಳಿಪಳೆ! ದೋಷದೂರನೆ ಆಸೆ ಪೂರ್ತಿಸೊ!!೨೪!!
ಅನ್ಯರ ಭಜಿಸದೆ ನಿನ್ನನೆ ಭಜಿಸುವೆ! ಮನ್ನಿಸದಿರುವರೆ ಗುರುವರ!!೨೫!!
ಕುಂಬಣಿಯೋಳು ನಿನ್ನ ನಂಬಿದ ಜನ ಬಲು! ಸಂಭ್ರಮದೊಳಗಿರುತಿಹರಯ್ಯಾ!!೨೬!!
ಏಕಮನದಿ ನಮ್ಮ ಶ್ರೀಕರವಿಠಲನ್ನ ! ಲೋಕದೊಳ್ ಪರನೆಂದು ಸಾರಿದ.

ದಾಸ ಸಾಹಿತ್ಯWhere stories live. Discover now