ಪುರಂದರದಾಸರು

1 0 0
                                    

: 🙏🙏ಹರೇಕೃಷ್ಣ🙏🙏

ಅಚ್ಯುತಾನಂತ ಗೋವಿಂದ, ಹರಿ, ಸಚ್ಚಿದಾನಂದ ಸ್ವರೂಪ ಮುಕುಂದ ||ಪ||

ಕೇಶವ ಕೃಷ್ಣ ಮುಕುಂದ, ಹರಿ, ವಾಸುದೇವ ಗುರು ಜಗದಾದಿವಂದ್ಯ
ಯಶೋದೆಯ ಸುಕೃತದ ಕಂದ, ಸ್ವಾಮಿ, ಶೇಷ ಶಯನ ಭಕ್ತ ಹೃದಯಾನಂದ

ನಾರಾಯಣ ನಿನ್ನ ನಾಮವೆನ್ನ, ನಾಲಿಗೆ ಮೇಲಿರಬೇಕೆಂಬ ನೇಮ
ನಾನು ಬೇಡುವೆ ನಿನ್ನ ನಾಮ, ಪ್ರಾಣ, ಪಯಣ ಸಮಯಕೊದಗಲಿ ಗುಣಧಾಮ

ಮಾಧವ ಮಂಗಳಗಾತ್ರ, ಸ್ವಾಮಿ, ಯಾದವ ಕೈಲಾಸ ವಾಸನ ಮಿತ್ರ
ಮಹಿಮೆ ಕೇಳಿದರೆ ವಿಚಿತ್ರ, ನಿನ್ನ, ಮನ ಮೆಚ್ಚಲಿ ಸತ್ಯಭಾಮಾಕಳತ್ರ

ಗೋವಿಂದ ಗೋಪಾಲ ಬಾಲ, ಸೋಳ ಸಾಸಿರ ಗೋಪೇರ ಆನಂದ ಲೀಲಾ
ನೀಲ ಮಣಿ ಮುಕ್ತಾಮಾಲ, ನಿಮ್ಮನೇನೆಂದು ಕರೆಯಲಿ ಸುಗ್ರೀವ ಪಾಲ

ವಿಷ್ಣು ಚಕ್ರವು ಬಂದು ಸುತ್ತಿ, ಮೂರು ಸೃಷ್ಟಿಯನೆಲ್ಲ ತಿರುಗಿ ಬೆನ್ನಟ್ಟಿ
ಕೃಷ್ಣ ಸಲಹೆಂದು ಮೊರೆಯಿಟ್ಟ, ಮುನಿ ಶ್ರೇಷ್ಟಗಿಷ್ಟರ ಮೇಲೆ ಅಭಯವ ಕೊಟ್ಟೆ

ಮಧುಸೂದನ ಮಾರಜನಕ, ಮದಗಜ ಸೀಳಿ ಮಲ್ಲರ ಗೆಲಿದೆ ತವಕ
ಒದಗಿ ಕಂಸನ ಕೊಂದ ಬಳಿಕ, ನೀ, ಮುದುಕಗೆ ಪಟ್ಟವ ಕಟ್ಟಿದ್ಯೋ ಧನಿಕ

ತ್ರಿವಿಕ್ರಮ ತ್ರೈಲೋಕ್ಯನಾಥ, ದೇವ, ತ್ರಿಪುರದ ಸತಿಯರ ವ್ರತಕೆ ವಿಘಾತ
ಯದುವಂಶ ಪಾಂಡವ ಪ್ರೀತ, ಎನ್ನ, ಹೃದಯದೊಳಡಗಿರೊ ಶ್ರೀ ಜಗನ್ನಾಥ

ವಾಮನ ರೂಪಿಲಿ ಬಂದು, ಬಲಿಯ ದಾನವ ಬೇಡಲು ಉಚಿತವು ಎಂದು
ಧಾರೆಯನೆರೆಯಲು ಅಂದು, ಬೆಳೆದು ಧಾರಿಣಿಯೆಲ್ಲವನಳೆದ್ಯೊ ನೀನಂದು

ಶ್ರೀಧರ ಶೃಂಗಾರ ಹಾರ, ದಿವ್ಯ, ಶ್ರೀವತ್ಸಲಾಂಛನ ಶ್ರೀ ರಘುವೀರ
ವಾರಿಧಿ ಸಮ ಗಂಭೀರ, ಧೀರ, ಕ್ರೂರ ರಕ್ಕಸರನೆಲ್ಲರ ಸಂಹಾರ

ಹೃಷಿಕೇಶ ವೃಂದಾವನದಲಿ, ನೀ, ಹರುಷದಿ ಕೊಳಲನೂದುತ ಯಮುನೆಯಲಿ
ಸತಿಯರ ಸಮ್ಮೇಳದಲಿ, ನೀ, ಧರಿಸಿದ್ಯೊ ಮಂದಾರ ಮಾಲೆ ಕೊರಳಲ್ಲಿ

ಪದ್ಮನಾಭ ಕೇಳೊ ಘನ್ನ, ಪಾದ, ಪದ್ಮವ ತೋರಿಸೊ ಬೇಗನೆ ನಿನ್ನ
ಮುದ್ದು ಮುಖವ ತೋರಿಯೆನ್ನ, ಬೇಗ, ಉದ್ಧಾರ ಮಾಡೆಂದು ಬೇಡುವೆ ನಿನ್ನ

ದಾಮೋದರ ಗುಣಧಾಮ, ಸ್ವಾಮಿ, ದಾನವಾಂತಕ ಯದುಕುಲ ಸಾರ್ವಭೌಮ
ನೀಲಮೇಘನಿಭಶ್ಯಾಮ, ಕೃಷ್ಣ, ನೀಳಾಪತಿಯೆಂಬ ಬಹು ಪುಣ್ಯನಾಮ

ಸಂಕರ್ಷಣ ದನುಜಹರಣ, ದೇವ, ಪಂಕಜಮುಖಿ ದ್ರೌಪದಿ ಮೇಲೆ ಕರುಣ
ಕುಂಕುಮಾಂಕಿತ ರೇಖಾ ಚರಣ, ನಿಜ, ಕಂಕಣ ಕೇಯೂರ ಕೌಸ್ತುಭಾಭರಣ

ವಾಸುದೇವ ಕೇಳೊ ನಿನ್ನ, ದಿವ್ಯ, ಸಾಸಿರ ನಾಮವ ನೆನೆವನೆ ಧನ್ಯ
ಬೇಸರದೆ ಸಲಹಬೇಕೆನ್ನ ತುಸ ಘಾಸಿಯ ಮಾಡದೆ ಕರುಣಾ ಸಂಪನ್ನ

ದಾಸ ಸಾಹಿತ್ಯWhere stories live. Discover now