ಶ್ರೀ ಗುರು ರಾಘವೇಂದ್ರ ಸ್ವಾಮಿ

15 0 0
                                    

*|ನಂಬಿ ಕೆಟ್ಟವರಿಲ್ಲವೋ ಈ ಗುರುಗಳ*|
🙏🙏🙏🙏🙏
*ಶ್ರೀ ಗುರುರಾಜರ ಆಕಾರ, ಕಾರ್ಯ, ಜ್ಞಾನ, ಮತ್ತು ಅವರ ಹೆಸರು ಎಲ್ಲವು ಪರಮ ಪಾವನವಾದುದ್ದು..*
*ಅವರ ದೇಹಲಕ್ಷಣಗಳು ದೇವಾಂಶ ಸಂಭೂತರೆಂದು ಸೂಚಿಸುತ್ತಾ ಇತ್ತು..*
*ನಮ್ಮ ರಾಯರು ಹೇಗೆ ಇದ್ದರು ಅವರ ದೇಹ ಸೊಬಗಿನ ವರ್ಣನೆ.*
(ನನ್ನ ಅಲ್ಪಮತಿಗೆ ಬಂದಿದ್ದು ಮತ್ತು ಯೋಗ್ಯತೆ ಮೀರಿದ ಕಾರ್ಯ..)

*ಪುಟಕ್ಕೆ ಹಾಕಿದ ಬಂಗಾರದ ಬಣ್ಣದಂತಹ ಮೈ ಬಣ್ಣ.*
*ಪರಮ ಶಾಂತವಾದ ಸುಂದರ ಮುಖ.*
*ಆ ಮೊಗದಲ್ಲಿ ಬಹು ವಿಶೇಷವಾದ ಕಾಂತಿ ತೇಜಸ್ಸು.*.
*ಆ ತೇಜಸ್ಸು ಅವರಿಗೆ ಬಂದಿದ್ದು ರಮೆಯ ಅರಸನಾದ ಆ ಶ್ರೀ ರಾಮಚಂದ್ರನು ಅವರಿಗೆ ಒಲಿದು ಅವರ ಹೃದಯಮಂದಿರದಲ್ಲಿ ನಿಂತಿರುವದು.*
*ಸೂರ್ಯನಂತೆ ಹೊಳೆಯುವ ಅವರ ವಿಶಾಲ ನೇತ್ರಗಳು.*
*ಸದಾ ಕಾಲ ಕರ್ಣಗಳಲ್ಲಿ ಒಪ್ಪುವ ಶ್ರೀ ಹರಿಗೆ ಅರ್ಪಿಸಿದ ತುಲಸಿದಳ.*
*ಕೊರಳಲ್ಲಿ ತುಲಸಿಮಣಿಯ ಮಾಲೆ.*
*ನೀಳವಾದ ಮೂಗು.*
*ಹಣೆಯಲ್ಲಿ ಊರ್ದ್ವ ಪುಂಡ್ರ ಧಾರಣೆ..*
*ಕಮಲಾಕ್ಷ ,ತುಳಸಿಮಾಲೆ ಮತ್ತು ದ್ವಾದಶ ನಾಮಗಳಿಂದ ಒಪ್ಪುವ ಮುದ್ರೆ, ನಾಮಗಳು ಅವರ ಕಂಠ ಮತ್ತು ವಕ್ಷ ಸ್ಥಳ.*
*ಕಾಷಾಯ ವಸ್ತ್ರಗಳನ್ನು ಧರಿಸಿ ಕೈಯಲ್ಲಿ ದಂಡ ಕಮಂಡಲುವನ್ನು ಹಿಡಿದು ದಿವ್ಯವಾದ ಪಾದುಕೆಗಳನ್ನು ಧರಿಸಿ ಬರುವ ಗುರುಗಳ ರೂಪವನ್ನು ವರ್ಣಿಸಲು ಅಸಾಧ್ಯ.*
*ಅಜಾನುಬಾಹು..*
*ಅವರ ಪಾದಗಳು ಸಕಲ ತೀರ್ಥ ಯಾತ್ರೆಗಳನ್ನು ಮಾಡಿ ಪರಮ ಪಾವನವಾದ ಪಾದಗಳು.*
*ಅವರ ದರುಶನವೇ ನೋಡುವರಿಗೆ ಅವರ ಮನದಲ್ಲಿ ಭಕ್ತಿ ಯನ್ನು ಹುಟ್ಟಿಸುತ್ತದೆ.*
*ಇಂತಹ ಶ್ರೀಗಳ ಪಾದಾರವಿಂದವನ್ನು ಹೊಂದಿದರೆ ಅಂದರೆ ಆಶ್ರಯ ಮಾಡಿದರೆ ನಮ್ಮ ಕಷ್ಟ ಕಾರ್ಪಣ್ಯ ಕಳೆದು ನಮ್ಮ ಉದ್ದಾರ ಕಲ್ಯಾಣವಾಗುವದು ಎಂದು ಜನರು ಅಂದಿನಿಂದ ಇಂದಿನವರೆಗೂ ನಂಬಿ ನಿರಂತರ ಭಜನೆ ಮಾಡುತ್ತಾ ಇದ್ದಾರೆ.*
*ಇಂತಹ ಗುರುಗಳ ಪಾದಕ್ಕೆ ಶಿರ ಸಾಷ್ಟಾಂಗ ವಾಗಿ ನಾವು ಬಿದ್ದು ನಮ್ಮ ಉದ್ಧಾರಕ್ಕಾಗಿ ಬೇಡಿಕೊಳ್ಳೊಣ.*
*ಮಾತೃ ಹೃದಯದ ಕರುಣಾ ಮೂರ್ತಿ ನಮ್ಮ ರಾಯರು.*
*ಹಡೆದ ತಾಯಿ ತಂದೆಗಳು ಆದರು ಕೋಪಿಸಿಕೊಳ್ಳುವುದು ಸಹಜ.*
*ನಮ್ಮ ರಾಯರು ಕೋಪಗೊಳ್ಳುವದೇ ಇಲ್ಲ.*
*ಕರುಣಾಶಾಲಿಗಳಾದ ಆ ರಾಯರ ದರ್ಶನ ನಿರಂತರವಾಗಿ ನಮಗೆ ನಿತ್ಯ ಸಿಗಲಿ.*
*ನಮ್ಮಂತಹ ಮಂದಭಾಗ್ಯರ ಉದ್ಧಾರಕ್ಕಾಗಿ ೪೦೦ವರುಷಗಳ ಹಿಂದೆ ಅವರ ಅವತಾರ.*
ಶ್ರೀ ರಾಯರ ಅಂತರ್ಯಾಮಿಯಾದ ಶ್ರೀ ಮಧ್ವ, ಮಾಧವರ ಪಾದಕ್ಕೆ ಈ ಲೇಖನ ಪುಷ್ಪ ಸಮರ್ಪಣೆ ಮಾಡುತ್ತಾ
🙏ಶ್ರೀ ಕೃಷ್ಣಾರ್ಪಣಮಸ್ತು🙏
*ವಾರಿಜಾಕ್ಷಿ ಮಣಿಯು ತುಲಸಿ ಸಾರ ಮಾಲೆಯ ಧರಿಸಿ*|
*ಯತಿವರ*
*ತೋರುತ್ತಿಪ್ಪನು ಬಾಲ ಸೂರ್ಯನ ತೆರದಿ ಲೋಕದಲಿ|*
*ಚಾರುತರ ಕೌಪೀನ ಪಾದುಕಧಾರಿ ದಂಡ*| *ಕಮಂಡಲಾಂಚಿತ ಸಾರ ದ್ವಾದಶ ಪುಂಡ್ರ ಮುದ್ರೆ ಗಳಿಂದ ಚಿಹ್ನಿತನು*||
🙏ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಳುವೇ🙏

ದಾಸ ಸಾಹಿತ್ಯWhere stories live. Discover now