*🌷 *🌷ಪಿತೃಗಣಗಳು-ಪರಿಚಯ * *|| ಸಂಚಿಕೆ-2 ||* *🌷 ಪಿತೃಗ-ಪರಿಚಯ*

1 0 0
                                    

*🌷ಪಿತೃಗಣಗಳು-ಪರಿಚಯ*🌷
              *|| ಸಂಚಿಕೆ-3 ||*

ಪಿತೃಗಳು ಏಳುಗಣದವರು  ಇರುತ್ತಾರೆ ವೈರಾಜ ,ಅಗ್ನಿಷ್ವಾತ್ತ ,ಬರ್ಹಿಷದ ,ಹೆಸರುಳ್ಳ ಮೂರುಗಣದ ಪಿತೃಗಳು ಸೂಕ್ಷ್ಮ ದೇಹವುಳ್ಳವರು . ಸುಕಾಲ ,ಅಂಗಿರಸ ,ಸುಸ್ವಧಾ ,ಮತ್ತು ಸೋಮಪ ಹೆಸರುಳ್ಳ ನಾಲ್ಕುಗಣದ ಪಿತೃಗಳು ಸ್ಥೂಲದೇಹ.ವುಳ್ಳವರು .

ವೈರಾಜ ಹೆಸರಿನ ಪಿತೃಗಳು ಮೊದಲಗಣದವರು ಇವರು ವಿರಾಜ ಎಂಬ ಪ್ರಜಾಪತಿಯ ಮಾನಸಪುತ್ರರು ಇವರಿಗೆ ಮೇನಾ ಎಂಬ ಮಾನಸಕನ್ಯೆ ಹುಟ್ಟಿದಳು ಇವಳು ಹೀಮವಂತನಿಗೆ ಪತ್ನಿಯಾದಳು ಇವಳ ಮಗನೇ ಮೈನಾಕ .ಮೇನೆಯಲ್ಲಿ ಹೀಮವಂತನಿಂದ ಅಪರ್ಣಾ ,ಏಕಪರ್ಣಾ , ಮತ್ತು ಏಕಪಾಟಲಾ ಎಂಬ ಮೂರು ಕನ್ಯೆಯರು ಜನಿಸಿದರು ಈ ಮೂವರು ಕನ್ಯೆಯರು ದೇವದಾನವರಿಂದ ಅಸಾಧ್ಯವಾದ ಕಠಿಣ ತಪಸ್ಸನ್ನು ಆಚರಿಸುತ್ತಿದ್ದರು . ಏಕಪರ್ಣಿಯು ಒಂದೇ  ಒಂದು ಎಲೆಯನ್ನು ತಿಂದು ತಪಸ್ಸು ಮಾಡುತಿದ್ದಳು  ಏಕಪಾಟಲೆಯು ಒಂದೇ  ಪುಷ್ಪವನ್ನು  ತಿಂದು ತಪಸ್ಸು ಮಾಡುತ್ತಿದ್ದಳು . ಅಪರ್ಣೆಯು ಉಪವಾಸದಿಂದ ತಪಸ್ಸು ಮಾಡುತ್ತಿದ್ದಳು .ಇವಳನ್ನು ನೋಡಿ. ತಾಯಿಯು ದುಃಖದಿಂದ ಉಮಾ ಎಂದು ತಡೆದಳು *ಉ=ಎಲೆ ಮಗಳೇ,ಮಾ= ತಪಸ್ಸು ಮಾಡಬೇಡ .* ಈ ರೀತಿಯಾಗಿ ಅವಳನ್ನು ಸಂಭೋದಿಸಿದ ಪ್ರಯುಕ್ತ ಅಪರ್ಣೆಗೆ ಉಮಾ ಎಂದು ಹೆಸರೀಡಲಾಯಿತು ಈ ಮೂವರು ಪುತ್ರಿಯರಲ್ಲಿ ಉಮಾದೇವಿ ಶ್ರೇಷ್ಠಳು ಇವಳು  ರುದ್ರ (ಶಿವ) ದೇವರಿಗೆ ಪತ್ನಿಯಾದಳು ಏಕಪರ್ಣಿಯು ದೇವಳರಪತ್ನಿಯಾದಳು  ಏಕಪಾಟಲೆಯು ಜೈಗಿಷವ್ಯರ ಪತ್ನಿಯಾದಳು .

*ಮುಂದಿನಸಂಚಿಕಯಲ್ಲಿ ಅಗ್ನಿಷ್ವಾತ್ತ  ಎಂಬ ಎರಡನೆ ಪಿತೃಗಣದವರ ಬಗ್ಗೆ ತಿಳಿದುಕೊಳ್ಳೋಣ .*

        *||

*🌷ಪಿತೃಗಣಗಳು-ಪರಿಚಯ🌷*
              *|| ಸಂಚಿಕೆ-4 ||*

*ಅಗ್ನಿಷ್ವಾತ್ತ*  ಎಂಬ ಹೆಸರಿನ ಪಿತೃಗಳು ಎರಡನೆಯ. ಗಣದವರು . ಇವರು ಸೋಮಪದ ಎಂಬ ಲೋಕದಲ್ಲಿ ಇರುತ್ತಾರೆ . ಇವರು ಮರೀಚಿ ಋಷಿಗಳ ಮಕ್ಕಳು .ಇವರನ್ನು ದೇವತೆಗಳು ಪೂಜಿಸುತ್ತಾರೆ . ಇವರಿಗೆ ಅಚ್ಛೋದಾ  ಎಂಬ ಮಗಳುಹುಟ್ಟಿದಳು .ಇವಳು ನದಿ ದೇವತೆಯು .ಇವಳಿಂದ ಅಚ್ಛೋದಾ ಎಂಬ ಸರೋವರವು ನಿರ್ಮಾಣವಾಯಿತು . ಹುಟ್ಟಿದಾರಾಭ್ಯ ಇವಳು ತಂದೆಯನ್ನು ತಿಳಿದಿರಲಿಲ್ಲ .ಒಂದು ದಿನ ಆಕಾಶದಲ್ಲಿ ವಿಮಾನವೊಂದನ್ನು ನೋಡಿದಳು . ಆ ವಿಮಾನದಲ್ಲಿ ಅದ್ರಿಕಾ ಎಂಬ ಅಪ್ಸರಾ ಸ್ತ್ರಿಯು ಕುಳಿತಿದ್ದಳು ಅವಳ ಜೋತೆ ಉಪರಿಚರ ಎಂಬ ವಸುರಾಜ ಕುಳಿತಿದ್ದನು . ಹೀಗೆ ವಿಮಾನದಲ್ಲಿ ಕುಳಿತು ಹೋಗುತ್ತಿದ್ದ ವಸುರಾಜನನ್ನು ನೋಡಿ ಇವನೇ ನನ್ನ ತಂದೆ ಎಂದು ತಿಳಿದಳು .ಇನ್ನೊಬ್ಬ ಪುರುಷನನ್ನು ತನ್ನ ತಂದೆ ಎಂದು ತಿಳಿದ ಪ್ರಯುಕ್ತ ಯೋಗಭ್ರಷ್ಟಳಾಗಿ ಕೆಳಗೆ ಬಿದ್ದಳು .ಹೀಗೆ ಅವಳು ಕೆಳಗೆ ಬೀಳುತ್ತಿರುವಾಗ  ಅತಿಸೂಕ್ಷ್ಮವಾದ ಮೂರು ವಿಮಾನಗಳನ್ನು ನೋಡಿದಳು .ಆ ವಿಮಾನಗಳಲ್ಲಿ ಕುಳಿತಿರುವ ತನ್ನ ಪಿತೃಗಳನ್ನು ನೋಡಿ ನೋಡಿ ಕೂಡಲೇ ಕೈಯೆತ್ತಿ  ಸ್ವಾಮಿ ನನ್ನನ್ನು ರಕ್ಷಿಸಿರಿ ,ರಕ್ಷಿಸಿರಿ ಎಂದು ಬೇಡಿಕೊಂಡಳು  . ಅವರು ಮಗಳೇ ಹೆದರಬೇಡ ಎಂದು ಸಂತೈಸಿದರು . ಅವಳು ಆಕಾಶದಲ್ಲೇ ನಿಂತಳು . ನಂತರ ಇವರೇ ತನ್ನ ಪಿತೃಗಳು ಎಂದು ಖಾತ್ರಿಯಾಯಿತು . ಆ ಪಿತೃಗಳು ಮಗಳೇ ! ನೀನು ಆಜ್ಞಾನದಿಂದ ಒಬ್ಬ ಸಾಮನ್ಯಮನುಷ್ಯನನ್ನು ತಂದೆಯೆಂದು ಭಾವಿಸಿರುವ ಪ್ರಯುಕ್ತ .ನೀನು ಯೋಗಭ್ರಷ್ಟಳಾಗಿ ಬೀಳುತ್ತಿರುವಿ ಹೆದರಬೇಡ ನೀನು ವಸುರಾಜನಿಗೆ ಮಗಳಾಗಿ ಹುಟ್ಟುವಿ . ಈ ಅದ್ರಿಕೆಯು ಮೀನಾಗಿ ಹುಟ್ಟುಲಿದ್ದಾಳೆ . ಮೀನಿನ  ಹೊಟ್ಟೆಯಿಂದ ನೀನು ಹುಟ್ಟಿಬರುವಿ. ನಂತರ  ಭೂಮಿಯಲ್ಲಿ ಪರಾಶರ ಋಷಿಗಳನ್ನು ಹೊಂದಿ ಸಾಕ್ಷಾತ್ ಭಗವಂತನನ್ನು ವೇದವ್ಯಾಸ ರೂಪದಿಂದ ಮಗನನ್ನಾಗಿ ಪಡೆಯುವಿ ಮತ್ತು ಶಂತನು ಮಹಾರಾಜನನ್ನು ವಿವಾಹ ಮಾಡಿಕೊಂಡು ಚಿತ್ರಾಂಗದ ಮತ್ತು ವಿಚೀತ್ರವಿರ್ಯ ಎಂಬ ಇಬ್ಬರು ಮಕ್ಕಳನ್ನು ಪಡೆಯುವಿ .ನಂತರ ಶಂತನು ಮಹಾರಾಜನನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದು ಉತ್ತಮ ಲೋಕಹೊಂದಿದಳು .

ಪಕ್ಷಮಾಸದ ಚಿಂತನೆ* ನರಕಲೋಕ ಒಂದು ವಿಶ್ಲೇಷಣೆWhere stories live. Discover now