ನರಕಲೋಕ

1 0 0
                                    

*ಪಕ್ಷಮಾಸದ ಚಿಂತನೆ*

ಮಹಾಲಯ ಪಕ್ಷ ಬಂದಿದೆ. ಪಿತೃದೇವತೆಗಳನ್ನು ಸ್ಮರಿಸುವ, ಅವರನ್ನು ತೃಪ್ತಿಪಡಿಸುವ ಕಾಲ.. ಈ ಪಕ್ಷದಲ್ಲಿ ಶ್ರೀ ವಿಜಯದಾಸಾರ್ಯ ವಿರಚಿತ ಪೈತೃಕ ಸುಳಾದಿಯ, ಹಾಗೂ ಶ್ರೀ ಮಾನವೀ ಪ್ರಭುಗಳ ಶ್ರೀಮದ್ಹರಿಕಥಾಮೃತ ಸಾರದ ಪಿತೃಗಣಸಂಧಿಯ ಪಾರಾಯಣ ಮಾಡೋಣ.

ಇವತ್ತಿನಿಂದ ಎರಡು ವರ್ಷ ಹಿಂದೆ post ಮಾಡಿದಂತಹ ಪಕ್ಷಮಾಸದ ಚಿಂತನೆಯ ಲೇಖನಗಳನ್ನು ಮತ್ತೊಮ್ಮೆ post ಮಾಡುತ್ತಿದ್ದೇನೆ....

ಎಲ್ಲ ಪಿತೃದೇವತೆಗಳ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಷಣ್ಣವತಿ ನಾಮಕ ಪರಮಾತ್ಮನು ಅನುಗ್ರಹ ಮಾಡಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತಾ....

*Part -1*

*ನರಕಲೋಕ ಒಂದು ವಿಶ್ಲೇಷಣೆ*

ಅನಾದಿಕಾಲದಿಂದ ಜೀವನು ಶಾಶ್ವತನಾದವನು. ಪ್ರಳಯಕಾಲದಲ್ಲಿ ಪರಮಾತ್ಮನ ಉದರದಲ್ಲಿರುವ ಜೀವ ಅವನ ಕರ್ಮಾನುಸಾರವಾಗಿ ದೇಹವನ್ನು ಪಡೆದು ಸಂಸಾರಕ್ಕೆ ಬರುತ್ತಾನೆ ಅನ್ನೋದು ಗೊತ್ತಿರುವ ವಿಷಯವೇ.

ಜೀವರಲ್ಲಿ ಮೂರು ವಿಧ
*ಸಾತ್ವಿಕ ಜೀವರು*
*ರಾಜಸ ಜೀವರು*
*ತಾಮಸ ಜೀವರು*

*ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ/*
*ನಿಭದ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಮ್//* ಎನ್ನುವ ಗೀತೆಯ ವಾಕ್ಯದಂತೆ

ಪ್ರಕೃತಿಯಿಂದ ಉಂಟಾದ ಸತ್ವ, ರಜಸ್ಸು, ತಮಸ್ಸು ಎನ್ನುವ ಮೂರು ಗುಣಗಳು, ಇವುಗಳ ಅಭಿಮಾನಿದೇವತೆಗಳು ದೇಹದಲ್ಲಿರುವಂತಹಾ, ಸ್ವರೂಪತಃ ನಾಶವಿಲ್ಲದಂತಹಾ ಜೀವನನ್ನು ಬಂಧಿಸಿರ್ತವೆ..

*ಸತ್ವ ಗುಣದವರು* - ಶ್ರೀದೇವಿಯರು ಸತ್ವಾಭಿಮಾನಿ ದೇವತೆ - ಜೀವನಿಗೆ ಶುದ್ಧವಾದ ತತ್ವಜ್ಞಾನವನ್ನು ನೀಡುವಳು.. ಸತ್ವ ಗುಣದವರು ಅಹಂಕಾರಾದಿಗಳಿಲ್ಲದೆ, ರೋಗ ರುಜಿನಗಳಿಲ್ಲದೆ, ಎಲ್ಲ ಅವಸ್ಥೆಗಳಲ್ಲಿಯೂ ತಟಸ್ಥರಾಗಿ, ಪರಮಾತ್ಮನ ಕುರಿತಾದ ನೈಜ ಜ್ಞಾನವನ್ನು ಹೊಂದಿದವರಾಗಿ, ಕಾರ್ಯಾ ಕಾರ್ಯಗಳನ್ನು, ಬಂಧಮೋಕ್ಷಗಳನ್ನು ಸರಿಯಾಗಿ ತಿಳಿದಿರುತ್ತಾರೆ. ಇವರು ಅಪರೋಕ್ಷಜ್ಞಾನದಿಂದಲೆ ಜನೋಲೋಕ, ತಪೋಲೋಕ ಇತ್ಯಾದಿ ಲೋಕಗಳನ್ನು ಹೊಂದುತ್ತಾರೆ...

*ರಜೋಗುಣದವರು* - ಭೂದೇವಿಯರು ಅಭಿಮಾನಿ ದೇವತೆ - ಈ ರಜೋಗುಣದ ಜೀವನು ಭೂದೇವಿಯರ ಪ್ರಭಾವದಿಂದ ಸೃಷ್ಟ್ಯಾದಿ ರೂಪ ರಂಜನೆಯನ್ನು ಮಾಡುವುದರಿಂದ ಕರ್ಮಗಳನ್ನು ಮಾಡುವುದರಲ್ಲಿ ನಿತ್ಯ ಆಸಕ್ತನಾಗಿರ್ತಾನೆ. ಕರ್ಮದ ಫಲಾಸಕ್ತಿ , ಹಿಂಸೆಯನ್ನು ಮಾಡುತ್ತಾ, ಅಶುಚಿಯಾಗಿ, ಧರ್ಮಾಧರ್ಮಗಳನ್ನು, ಕಾರ್ಯಾಕಾರ್ಯಗಳನ್ನು ಬೇರೇ ರೀತಿಯಲ್ಲಿ (ಸಾತ್ವಿಕರಂತೆ ಸರಿಯಾದ ರೀತಿಯಲ್ಲಿ ತಿಳಿಯದೆ) ತಿಳಿಯುತ್ತಾರೆ. ಇವರು ತಾವು ಮಾಡುವ ಕಾಮ್ಯ ಕರ್ಮಗಳಿಂದ ಸ್ವರ್ಗಾದಿ ಲೋಕಗಳನ್ನು ಹೊಂದುವರು..

ಪಕ್ಷಮಾಸದ ಚಿಂತನೆ* ನರಕಲೋಕ ಒಂದು ವಿಶ್ಲೇಷಣೆWhere stories live. Discover now