ದತ್ತಜಯಂತಿ

0 0 0
                                    

*ದತ್ತಜಯಂತಿ*⛳⛳⛳

ಅವಧೂತಾಯ ವಿದ್ಮಹೇ ಅತ್ರಿಪುತ್ರಾಯ ಧೀಮಹಿ ತನ್ನೋ ದತ್ತಃ ಪ್ರಚೋದಯಾತ್ 🙏 *ದತ್ತಜಯಂತಿ.*

ಶುಕ್ಲಪಕ್ಷದ ಚತುರ್ದಶಿಯಂದು ತ್ರಿಮೂರ್ತಿಗಳ ಅಂಶವಾದ ದತ್ತನು ಜನಿಸಿದ ದಿನವನ್ನು ದತ್ತಾತ್ರೇಯ ಜಯಂತಿಯನ್ನಾಗಿ ಆಚರಿಸಲಾಗುತ್ತದೆ.🙏

ದತ್ತಾತ್ರೇಯ ಎಂದೊಡನೆ  ಮೊದಲು ನೆನಪಾಗುವುದು ಇಡೀ ಸಮಷ್ಟಿಯನ್ನೇ ತನ್ನ ಗುರುವೆಂದು ಭಾವಿಸಿದ ಶ್ರೇಷ್ಠ ಅರಿವಿನ ಭಾವ.

‘ದತ್ತ’ ಮತ್ತು ‘ಆತ್ರೇಯ’ ಎರಡು ಪದಗಳು ಸೇರಿ ದತ್ತಾತ್ರೇಯ  ಆಗಿದೆ. ಅಂದರೆ ದತ್ತನು ಅತ್ರಿಯ ಮಗ ಆತ್ರೇಯ. ದತ್ತ ಎಂದರೆ ಕೊಡುವುದು ಎಂದರ್ಥ. ಇಲ್ಲಿ ತನ್ನನ್ನು ತಾನೇ ಅತ್ರಿ-ಅನಸೂಯೆಯರಿಗೆ ಕೊಟ್ಟುಕೊಂಡು ‘ದತ್ತ’ನಾದನು.  ಅತ್ರಿ ಒಬ್ಬ ಋಷಿ. ಈತ ಬ್ರಹ್ಮನ ಏಳು ಮಕ್ಕಳಲ್ಲಿ ಒಬ್ಬ. ಈ ಜಗತ್ತಿನ ಸೃಷ್ಟಿಗಾಗಿ ತಪಸ್ಸು ಮಾಡುತ್ತಿದ್ದವನು. ಈತನ ಹೆಂಡತಿ ಅನಸೂಯೆ ಮಹಾ ಪತಿವ್ರತೆ.

ಪ್ರತಿಷ್ಠಾನಗರ (ಈಗಿನ ಪೈಠಣ: ಮಹಾರಾಷ್ಟ್ರದಲ್ಲಿದೆ) ದಲ್ಲಿ ಇಂಥವಳೇ ಇನ್ನೊಬ್ಬ ಪತಿವ್ರತೆ ಇದ್ದಳು. ಅವಳ ಹೆಸರು ಸುಮತಿ. ಅವಳ ಗಂಡ ಕೌಶಿಕ. ಅವನು ತಪ್ಪುದಾರಿ ಹಿಡಿದ. ಸುಮತಿಯನ್ನು ಬಿಟ್ಟು ಹೊರಟುಹೋದ. ಅವನಿಗೆ ವಿಪರೀತ ಕಾಯಿಲೆ ಬಂದಿತು. ಮೈಯೆಲ್ಲಾ ಹುಣ್ಣಾಯಿತು. ಮತ್ತೆ ಸುಮತಿಯ ಬಳಿಗೇ ಬಂದ. ಅವಳು ತುಂಬ ಒಳ್ಳೆಯವಳು, ಕ್ಷಮಾಶೀಲೆ. ಅವನ ಹುಣ್ಣುಗಳನ್ನು ತೊಳೆದು ಔಷಧ ಹಾಕಿದಳು. ಒಳ್ಳೆಯ ಆಹಾರ ಕೊಟ್ಟಳು. ಅವನಿಗೆ ನಡೆಯಲು ಆಗುತ್ತಿರಲಿಲ್ಲ. ಒಂದು ಸಂಜೆ ಸುಮತಿ ಅವನನ್ನು ತನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರಟಿದ್ದಳು.

ಇದೇ ಸಮಯದಲ್ಲಿ ಆ ನಗರದಲ್ಲಿ ಒಂದು ಘಟನೆ ನಡೆದಿತ್ತು. ದೊಡ್ಡ ಅಪರಾಧ ಮಾಡಿದವನೊಬ್ಬನಿಗೆ ಮರಣದಂಡನೆ ವಿಧಿಸಿದ್ದರು. ಆದರೆ ಅವನು ತಪ್ಪಿಸಿ ಕೊಂಡುಬಿಟ್ಟನು. ಅವನನ್ನು ರಾಜಭಟರು ಹುಡುಕಿಕೊಂಡು ಹೊರಟರು. ಒಂದು ಕಡೆ ಅಪರಾಧಿಯಂತೆ ಕಂಡ ಒಬ್ಬನನ್ನು ಹಿಡಿದು ತಂದರು. ರಾಜನು ವಿಚಾರ ಮಾಡದೆ ಅವನನ್ನು ಶೂಲಕ್ಕೆ ಏರಿಸುವಂತೆ ಅಪ್ಪಣೆ ಮಾಡಿದನು. ರಾಜಭಟರು ಕೂಡಲೇ ಅವನನ್ನು ಶೂಲಕ್ಕೆ ಹಾಕಿದರು. ಹೀಗೆ ಶಿಕ್ಷೆಗೆ ಒಳಗಾದವನು ನಿಜವಾಗಿ ಅಪರಾಧ ಮಾಡಿದವನಲ್ಲ, ಮಾಂಡವ್ಯನೆಂಭ ಋಷಿ. ಅವನು ತನ್ನ ಯೋಗಮಹಿಮೆಯಿಂದ ಶೂಲದ ಮೇಲಿದ್ದರೂ ಮರಣಕ್ಕೆ ತುತ್ತಾಗದೆ ನೇತಾಡುತ್ತಿದ್ದನು.

ಅದೇ ಮಾರ್ಗದಲ್ಲಿ ಪತಿಯನ್ನು  ಹೊತ್ತ ಸುಮತಿ ಬರುತ್ತಿದ್ದಳು. ಆಗ ಕತ್ತಲೋ ಕತ್ತಲೆ. ಒಬ್ಬರ ಮುಖ ಒಬ್ಬರಿಗೆ ಕಾಣಿಸದು. ಆಕೆ ಈ ಕತ್ತಲಲ್ಲಿ ನಡೆಯುತ್ತಿರುವಾಗ ಕೌಶಿಕನ ಕಾಲು ಶೂಲಕ್ಕೆ ತಾಗಿತು. ಅದರಿಂದ ಮಾಂಡವ್ಯನಿಗೆ ತುಂಬಾ ನೋವಾಯಿತು. ಋಷಿಗೆ ಕೋಪ ಬಂತು. ಅವನು ಕೂಡಲೇ “ಈ ಶೂಲಕ್ಕೆ ಕಾಲು ತಾಗಿಸಿದವನು ಸೂರ್ಯ ಹುಟ್ಟಿದೊಡನೆ ಸಾಯಲಿ” ಎಂದು ಶಾಪ ಕೊಟ್ಟನು.

ಆಚರಣೆ ಮಹತ್ವ ಮತ್ತು ಸಂಸ್ಕೃತಿಯ ವೈವಿಧ್ಯತೆWhere stories live. Discover now