🙏🙏🙏🙏🙏
*ನಮಸ್ಕಾರದ ಪ್ರಾಮುಖ್ಯತೆ*ಮಹಾಭಾರತದ ಯುದ್ಧ ನಡೆಯುತ್ತಿತ್ತು -
ಒಂದು ದಿನ, ದುರ್ಯೋಧನನ ವ್ಯಂಗ್ಯ ವಿಡಂಬನೆಯಿಂದ ನೊಂದ ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .*"ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"*
ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -
ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ -
ಶ್ರೀ ಕೃಷ್ಣ ದ್ರೌಪತಿಗೆ, ಈಗ ನನ್ನೊಂದಿಗೆ ಬಾ -ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮನ ಶಿಬಿರವನ್ನು ತಲಿಪಿದನು -
ಶಿಬಿರದ ಹೊರಗೆ ನಿಂತು ದ್ರೌಪತಿಗೆ – *“ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.”* ಎಂದು ಹೇಳಿದರು
ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ - *"ಅಖಂಡ ಸೌಭಾಗ್ಯವತಿ ಭವ"* ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!
*"ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿನ್ನನ್ನು ಇಲ್ಲಿಗೆ ಕರೆತಂದಿದ್ದಾರಾ"?*
ಆಗ ದ್ರೌಪದಿ ಹೀಗೆ ಹೇಳಿದಳು -
*"ಹೌದು,ಅವರು ಕೋಣೆಯ ಹೊರಗೆ ನಿಂತಿದ್ದಾರೆ"* ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. *"ನನ್ನ ಒಂದು ವಚನವನ್ನು ನನ್ನ ಇನ್ನೊಂದು ವಚನದಿಂದ ಮುರಿದು ಹಾಕಲು ಶ್ರೀ ಕೃಷ್ಣನಿಂದ ಮಾತ್ರ ಸಾಧ್ಯ"* ಭೀಷ್ಮ ಪಿತಾಮಹ ಹೀಗೆ ಹೇಳಿದನು.ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು -
"ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದ್ದಕ್ಕೇ, ನಿನ್ನ ಪತಿಯಂದಿರಿಗೆ ಜೀವನ ಸಿಕ್ಕಿದೆ".
*"ಇನ್ನು ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇತ್ಯಾದಿ ಹಿರಿಯರಿಗೆ ಪ್ರತಿದಿನ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಷ್ಯಾಸನಾದಿಗಳ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ"*
ಅಂದರೆ ,
ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -