*ರಾಖೀ ಹಬ್ಬ* :-
ಶ್ರಾವಣ ಮಾಸದ ಪೂರ್ಣಿಮಾ ದಿನ ಆಚರಿಸುವ ಆಚರಣೆ.
. *'ವಾಮನನೇ ತ್ರಿವಿಕ್ರಮನಾಗಿ ನಿಗ್ರಹಿಸಲ್ಪಟ್ಟರೂ ಧಮ೯ವನ್ನು ಬಿಡದ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ಭಗವಂತ ಒಲಿದಲ್ಲಿ ನಾ ನಲಿವೆ ಎಂದು ತೋರಿಸಿದಳು.*ಆ ದಿನ ಶ್ರಾವಣ ಹುಣ್ಣಿಮೆಯಾಗಿತ್ತು.'
. ಭವಿಷ್ಯೋತ್ತರ ಪುರಾಣದಲ್ಲಿ ಹೇಳಿರುವಂತೆ ರಕ್ಷಾಬಂಧನವು ಮೂಲತಃ ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರು ಆಚರಿಸುತ್ತಿದ್ದರು. ರಾಖಿಯ ಒಂದು ಹೊಸ ಪದ್ಧತಿಯು ಇತಿಹಾಸಕಾಲದಿಂದ ಪ್ರಾರಂಭವಾಯಿತು. ಎಂದು ಸಮಾಜಕ್ಕೆ ಇದರ ಮಹಿಮೆಯ ಅರಿವುಂಟಾಯಿತೋ ಅಂದಿನಿಂದ ಇದು ಸಾವ೯ತ್ರಿಕವಾಗಿ ಚಾಲ್ತಿಯಲ್ಲಿ ಬಂತು.
ಇದರ ಮಹತ್ತ್ವವೇನು?ರಾಖಿಯನ್ನು ಸಹೋದರಿಯು ಸಹೋದರನ ಕೈಗೆ ಕಟ್ಟುವುದಿರುತ್ತದೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು. ತನ್ನ ತವರು ಚೆನ್ನಾಗಿರಬೇಕೆಂಬ ಹಂಬಲ ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ ಯಾರಾದರೊಬ್ಬ ತರುಣನು/ಪುರುಷನು ಯಾರಾದರೊಬ್ಬ ತರುಣಿಯಿಂದ/ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ; ಇದರಿಂದ ತರುಣಿಯ ಕಡೆಗೆ/ಸ್ತ್ರೀಯರ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.
ರಾಖಿಯನ್ನು ಕಟ್ಟುವುದು
ಅಕ್ಕಿ, ಬಂಗಾರ ಮತ್ತು ಬಿಳಿಸಾಸಿವೆಗಳನ್ನು ಒಂದುಗೂಡಿಸಿ ಸೆರಗಿನಲ್ಲಿ ಕಟ್ಟಿದರೆ ರಕ್ಷಾ ಅರ್ಥಾತ್ ರಾಖಿಯು ತಯಾರಾಗುತ್ತದೆ.(ಇಂದು ಹಲವು ಜಾತಿಯಲ್ಲಿ ವಿವಾಹ ಕಾಲದಲ್ಲಿ ವರನಗೆ ಮತ್ತು ವಿಶೇಷವಾಗಿ ವಧೂವಿಗೆ ಬಲಗಡೆ ಸೊಂಟದಲ್ಲಿ ಇದನ್ನು ಕಟ್ಟುತ್ತಾರೆ)*ಪ್ರಮಾಣ ಶ್ಲೋಕ:-*
*ಏನ ಬದ್ಧೋ ಬಲೀ ರಾಜಾ* *ದಾನವೇಂದ್ರೋ ಮಹಾಬಲಃ|*
*ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ||*ಅರ್ಥ: ಮಹಾಬಲಿ ಮತ್ತು ದಾನವೇಂದ್ರನಾದ ಬಲಿರಾಜನು ಯಾವುದರಿಂದ ಬದ್ಧನಾದನೋ, ಆ ರಾಖಿಯಿಂದ ನಾನು ನಿನ್ನನ್ನೂ ಕಟ್ಟುತ್ತೇನೆ. ಎಲೈ ರಾಖಿಯೇ, ನೀನು ವಿಚಲಿತಳಾಗಬೇಡ,ವಿಚಲಿತಳಾಗಬೇಡ.
ಪ್ರಾರ್ಥನೆ:-
ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಇಬ್ಬರೂ 'ರಾಷ್ಟ್ರ,ಕೌಟುಂಬಿಕ ಹಾಗೂ ಸಮಾಜದ ಧರ್ಮರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ', ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡಬೇಕು.
ರಾಖಿಯು ಹೇಗಿರಬೇಕು ?
ರಾಖಿಯಿಂದ ಪಸರಿಸುವ ಲಹರಿಗಳು ಸಹೋದರ ಸಹೋದರಿ ಇಬ್ಬರಿಗೂ ಲಾಭದಾಯಕವಾಗಿವೆ. ಆದುದರಿಂದ ಚಿತ್ರ-ವಿಚಿತ್ರ ರಾಖಿಗಳನ್ನು ಉಪಯೋಗಿಸುವುದಕ್ಕಿಂತ ಒಳ್ಳೆಯ ರೇಷ್ಮೆ ಅಥವಾ ಹತ್ತಿಯಿಂದ ಮಾಡಿದ, ಆಕರ್ಷಿಸುವ ಸಾಮರ್ಥ್ಯವುಳ್ಳ,ಹಳದಿ,ಕೆಂಪು ಅಥವಾ ಬಿಳಿ ಬಣ್ಣದ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದರೆ ಆ ರಾಖಿಯ ತ್ರಿಗುಣಗಳು (ಸತ್ತ್ವ, ರಜ, ತಮ) ಧರಿಸಿದವರ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ರಾಕಿ ಕಟ್ಟುವ ಮುಂಚೆ
ಮಣೆಯ ಸುತ್ತಲೂ ರಂಗೋಲಿಯನ್ನು ಬಿಡಿಸಿ ಪೂವಾ೯ಭಿಮುಖವಾಗಿ ಅಣ್ಣನನ್ನು ಕುಳ್ಳಿರಿಸಿ ಹಣೆಗೆ ಕುಂಕುಮವಿಟ್ಟು ಉತ್ತರಾಭಿಮುಖವಾಗಿ ನಿಂತು ಇಲ್ಲವೇ ಕುಳಿತು ಮೇಲಿನ ಶ್ಲೋಕವನ್ನು ಹೇಳುತ್ತಾ ತಂಗಿಯು ರಾಕಿಯನ್ನು ಕಟ್ಟಬೇಕು. ಇದೇ ಇದರ ಹಿಂದಿನ ಉದ್ದೇಶ.