🌹ಓಂ ನಮಃ ಶಿವಾಯ 🌹
ಧಾರೆ ಎರೆಯುವ ಮುನ್ನ ಗಂಡಿನ ಪಾದ ಯಾಕೆ ಅತ್ತೆ ಮಾವ ತೊರೆಯುತ್ತಾರೆ..?*ಅಳಿಯನಲ್ಲಿ ಸುಶೀಲ, ಸುಶಿಕ್ಷಿತ ಸದ್ಗುಣಗಳನ್ನು ಹೊಂದಿರುವುದನ್ನು ಕಂಡು, ಅವನಲ್ಲಿ ವಿಷ್ಣುವಿನ ಸನ್ನಿಧಾನವನ್ನು ನೆನೆದು, ತನ್ನ ಮಗಳಲ್ಲಿನ ಮಹಾಲಕ್ಷ್ಮಿಯನ್ನು, ಧರ್ಮ, ಅರ್ಥಾದಿ ಪುರುಷಾರ್ಥಗಳನ್ನು ಸಾಧಿಸಲು + ಕನ್ಯೆಗೆ ಬೇಕಾದ ಅತಿಮುಖ್ಯ ಸಂಸ್ಕಾರವಾದ "ಪಾಣಿಗ್ರಹಣ"(ಅಂದರೆ ಇನ್ನು ಮುಂದಿನ ಆಕೆಯ ಸಂಪೂರ್ಣ ಲೌಕಿಕ+ಆಧ್ಯಾತ್ಮಿಕ ಹೊಣೆಗಾರಿಕೆಯನ್ನು ಹೊರುವ) ಇದಕ್ಕೆ ಬೇಕಾದ ಧರ್ಮಾಸಕ್ತನಾದ ಅಳಿಯ, ಹಾಗೂ ಇಬ್ಬರೂ ಮಾಡುವ ಮುಂದಿನ ಎಲ್ಲಾ ಧಾರ್ಮಿಕ ಕೆಲಸಗಳಿಂದ ತಂದೆ ತಾಯಿಗಳಿಗೂ ಸದ್ಗತಿ ಉಂಟಾಗಲಿ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿ.. ಯೋಗ್ಯನಾದ (ಕೇವಲ ಲಕ್ಷ ದುಡಿಯುವುದೊಂದೇ ಅಲ್ಲ) ಸುಸಂಸ್ಕೃತ ಆಧ್ಯಾತ್ಮಿಕ ಲಕ್ಷ್ಯವುಳ್ಳ ವರನಿಗೆ, ತನ್ನ ಮಗಳ ಸಕಲವಿಧವಾದ ಉನ್ನತಿಗಾಗಿ ಪ್ರಾರ್ಥಿಸಿ, ಸಜ್ಜನಿರಿಗೆ/ದಾನ ಸ್ವೀಕರಿಸುವವರಿಗೆ ಕೊಡುವ ಗೌರವದ ಸಂಕೇತ..
ಇದು ಮದುವೆಯ ಸಂದರ್ಭದ ಪಾದಪೂಜೆಯ ಅರ್ಥ..೧) ವರ ತತ್ಸಮಾನ ಶುದ್ಧ ಚಾರಿತ್ರಿಕ+ವಿದ್ಯಾವಿನಯ ಸಂಪನ್ನನಾದ ಧಾರ್ಮಿಕನಾಗಿರಬೇಕು.
೨) ವಧುವೂ ಸಹ ಸುಶೀಲೆ, ಸುಜನೆ, ಸುವಿದ್ಯಾಧರೆ, ಸಹನ ಸಂಪನ್ನೆಯಾಗಿ.೩) ಇಬ್ಬರೂ ಹಿರಿಯರ ಸೇವೆ ಮಾಡುತ್ತ, ಕಿರಿಯರಿಗೆ ಧಾರ್ಮಿಕ ಮಾರ್ಗದರ್ಶನ ನೀಡುತ್ತ, ಚತುರಾಶ್ರಮ+ವರ್ಣಗಳ ತಕ್ಕಂತೆ ಧರ್ಮದಿಂದ ದುಡಿಯುವ ಅಸಾಧಾರಣ ಸಂಸ್ಕಾರ ಅದು "ಮದವೆ" ಎಂಬ ಘಟ್ಟ.. ಇದನ್ನು ಸಾರ್ಥಕ ಮಾಡಿಕೊಂಡು ನಡೆಯುವ ಹೊಣೆ ನಮ್ಮ ಜೀವನದ ಗುರಿಯಾದರೆ ಉತ್ತಮ..
೪) ಎಲ್ಲಾ ಸಂಪ್ರದಾಯದಲ್ಲಿ ಇದು ಕಾಣದು, ಕೆಲವೊಂದು ನೋಡಿ ಅಳವಡಿಸಿದ ಪದ್ಧತಿ.. ಇದರ ಹಂದರ ತಿಳಿದು ನಡೆದರೆ ಈಗಿನ ವೈಪರೀತ್ಯಗಳನ್ನು ತಡೆದು ನಮ್ಮ ಸಂಸ್ಕೃತಿಗಳನ್ನು ಅವಲಂಬಿಸಿ ನಡೆಯುವ ಅವಕಾಶವನ್ನು ಕಾಪಿಡಬಹುದು!!!
🙏🙏🙏🙏🙏🙏🙏🙏🙏
