*💐ಪೂರ್ವ ಜನ್ಮದ ಸುಕೃತಗಳು* 💐
ಆಯುಃ ,ಕರ್ಮ ಚ, ವಿತ್ತಂಚ , ವಿದ್ಯಾ ,ನಿಧನಮೇವ ಚ|
ಪಂಚೈತಾನಿ ಹಿ ಸೃಜ್ಯಂತೆ
ಗರ್ಭಸ್ಥಸ್ಯೈವ ದೇಹಿನಃ.(೧)ಆಯುಷ್ಯ,
(೨)ಹಿಂದಿನ ಜನ್ಮದಿಂದ ಬರುವ ಕರ್ಮಫಲ,
(೩)ಹಣ,
(೪)ಗಳಿಸಬಹುದಾದ ವಿದ್ಯೆ
(೫) ಮರಣ.
ಈ ಐದು ವಿಷಯಗಳು ಶಿಶು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಣಯವಾಗಿರುತ್ತದೆ.,ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ-ಪುಣ್ಯಗಳಿಗೆ ಅನುಗುಣವಾಗಿ ನೀಚ- ಉಚ್ಚ , ಬಡವ- ಬಲ್ಲಿದ, ಸಾಕ್ಷರ- ನಿರಕ್ಷರ, ರೋಗಿ ನಿರೋಗಿ ಜನ್ಮ ಬರುವದೆಂದು ನಂಬಲಾಗುತ್ತದೆ.
ಅದರ ವಿವರವನ್ನು ಈ ಸುಭಾಷಿತದಲ್ಲಿ ಕಾಣ ಬಹುದು.*ಮೊದಲನೆಯದಾಗಿ ಆಯುಷ್ಯ.*
ಇಂಥ ವ್ಯಕ್ತಿಗೆ ಇಷ್ಟೇ ಆಯುಷ್ಯ ,
ಇಂಥಲ್ಲಿ ಹೀಗೇ ಮರಣ ಎಂದು ಗರ್ಭದಲ್ಲಿರುವಾಗಲೇ
ಬರೆಯಲ್ಪಡುತ್ತದೆ.
ಈ ಹಣೆಬರಹವನ್ನು ತಪ್ಪಿಸಲು ಹರಿಹರ ಬ್ರಹ್ಮರಿಂದಲೂ ಸಾಧ್ಯವಿಲ್ಲ.*ಕರ್ಮ*
ಎಂದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯ ಕರ್ಮಗಳು .ಇವು ನೆರಳಿನಂತೆ ಮುಂದಿನ ಜನ್ಮದಲ್ಲಿ ನಮ್ಮನ್ನು ಹಿಂಬಾಲಿಸುತ್ತವೆ.
ಕರು ಸಾವಿರಾರು ಹಸುಗಳಲ್ಲಿ ತನ್ನ ತಾಯಿಯನ್ನೇ ಹುಡುಕಿಕೊಂಡು ಹೋಗುವಂತೆ ಪೂರ್ವಾರ್ಜಿತ ಕರ್ಮಗಳು ನಮ್ಮನು ಬೆಂಬೆತ್ತಿ ಬರುತ್ತವೆ.*ಹಣ*
ಲಕ್ಷ್ಮಿ ಚಂಚಲೆ. ಎಲ್ಲೂ ಕಾಲೂರಿ ನಿಂತವಳಲ್ಲ. ಒಮ್ಮೆ ಏರಿಸುತ್ತಾಳೆ. ದಿಢೀರನೆ ಕೆಡವುತ್ತಾಳೆ. ತಮ್ಮ ಜೀವನದಲ್ಲಿ ಅನೇಕ ಜನ ಕೃಷಿ,ವಾಣಿಜ್ಯೋದ್ಯಮ ,ಕೈಗಾರಿಕೆ ಮುಂತಾದುವುಗಳ ಮೂಲಕ ಶ್ರೀಮಂತರಾಗಲು ಹೊರಟು ಭಾರೀ ಸೋಲುಂಡವರನ್ನು ಕಾಣುತ್ತೇವೆ.
ಆತ ಪಡೆದದ್ದು ಉಣ್ಣಬೇಕೆ ಹೊರತು ದುಡಿದದ್ದಲ್ಲ.ಇದನ್ನೇ .ಕವಿವಾಣಿ ಹೇಳುವುದು"ಸಿರಿಯದು ನೀರಿನ ತೆರೆಯಂತೆ;
ಜೀವನ ಮಿಂಚಿನ ಸೆಳಕಂತೆ
ಅರಿತಿದ ನಡೆ ನೀ ನಿನ್ನಂತೆ
ಅಳಿದೂ ಉಳಿಯುವ ತೆರನಂತೆ"
ಎಂದು ನಮ್ಮನ್ನು ಎಚ್ಚರಿಸಿದೆ.*ಶುಚೀನಾಂ ಶ್ರೀಮತಾಂ ಗೇಹೆ ಯೋಗಭ್ರಷ್ಟೋ ಅಭಿಜಾಯತೇ*
ಅಂದರೆ
"ಯೋಗಿಯಾಗ ಹೊರಟು ಪೂರ್ಣ ಸಿದ್ಧಿ ಪಡೆಯಲಾಗದೇ ಮಡಿದವನು ಮುಂದಿನ ಜನ್ಮದಲ್ಲಿ ಶ್ರೀಮಂತರ ಮನೆಯಲ್ಲಿ ಜನಿಸುತ್ತಾನೆ"
ಎಂದು ಗೀತೆ ಸಾರುತ್ತದೆ.*ವಿದ್ಯೆ*
ಹಿಂದಿನ ಜನ್ಮದಲ್ಲಿ ದೊಡ್ಡ ವಿದ್ಯಾವಂತನಾಗಲು ಹೊರಟು ಅಲ್ಲಿ
ಸಫಲತೆ ಯನ್ನು ಪಡೆಯದೇ ಹೋದವನು , ಆ ಸಂಸ್ಕಾರ ಬಲ ದಿಂದ ಮುಂದಿನ ಜನ್ಮದಲ್ಲಿ ಹುಟ್ಟಿನಿಂದಲೇ ಪ್ರತಿಭಾವಂತನಾಗಿ ಜನಿಸುತ್ತಾನೆ. ಒಂದೇ ತರಗತಿಯಲ್ಲಿ ಓದುವ ಮಕ್ಕಳಲ್ಲಿ ಅಜ-ಗಜಾಂತರವಿರುವುದನ್ನು ಕಾಣುತ್ತೇವೆ. ಅದಕ್ಕೆ ಪೂರ್ವ ಜನ್ಮದ
ಸಂಸ್ಕಾರ ಹಾಗೂ ಅದರ ಅಭಾವವೇ ಕಾರಣ.*ಮರಣ*
ಮರಣವೂ ಅಷ್ಟೆ.ಇಂಥವನಿಗೆ ಹೀಗೆ , ಇಂತಲ್ಲಿ ಮರಣವೆಂಬುದು ಮೊದಲೇ ಬರೆದಿರುತ್ತದೆ.ಆದ್ದರಿಂದ ಮುಂದೆ ಒಳ್ಳೆಯ ಜನ್ಮ ,ದೀರ್ಘ ಆಯುಷ್ಯ ,ಆರೋಗ್ಯ , ವಿದ್ಯೆ , ವಿತ್ತ,(ಹಣ)ಎಲ್ಲವೂ ಬೇಕೆಂದು ಬಯಸುವವರು ಈ ಜನ್ಮದಲ್ಲೇ ಎಚ್ಚೆತ್ತು ಒಳ್ಳೆಯ ಕಾರ್ಯದಲ್ಲಿ ನಿರತರಾಗುವುದು ಒಳಿತು.
🌹ಓಂ ತತ್ಸತ್🌹
