ವ್ರತದ ಚಟ್ನಿಪುಡಿ .1 ಪಾವು ಕಡ್ಲೇಕಾಯಿಬೀಜ .
1/2 ಪಾವು ಪುಟಾಣಿ ( ಹುರಗಡ್ಲೆ )
1/4 ಪಾರು ಬಿಳಿ ಎಳ್ಳು ಅಥವ ನೈಲಾನ್ ಎಳ್ಳು .
1 ಟೇಬಲ್ ಸ್ಪೂನ್ ಕಾಳು ಮೆಣಸು .
1 ಟೇಬಲ್ ಸ್ಪೂನ್ ಜೀರಿಗೆ .
1/2 ಕಪ್ ವಣಕೊಬ್ಬರೀ ತುರಿ .
1/2 ಟೇಬಲ್ ಸ್ಪೂನ್ ಆಮ್ಚೂರು ಪೌಡರು .
ರುಚಿಗೆ ತಕ್ಕಷ್ಟು ಉಪ್ಪು .
ಮಾಡುವ ವಿಧಾನ --- ಉಪ್ಪು ಆಮ್ಚೂರು ಪುಡಿ ಬಿಟ್ಟು ಎಲ್ಲ ಪದಾರ್ಥಗಳು ಮೀಡಿಯಂ ಉರಿಯಲ್ಲಿ ಬೇರೆ ಬೇರೆ ಕೆಂಪಗೆ ಹುರಿದು ಇಡಿ . ಸೀದು ಹೋಗದೇ ಹುರಿಯಿರಿ .ವಣಕೊಬ್ಬರೀ ತುರಿ ಸ್ವಲ್ಪ ಸವರನ್ ಬಣ್ಣಕ್ಕೆ ಹುರಿದು ಇಡಿ .
ಆರಿದ ಮೇಲೆ ಎಲ್ಲ ಮಿಕ್ಸಿ ಜಾರ್ಗೆ ಹಾಕಿ ಉಪ್ಪು ಆಮ್ಚೂರು ಪುಡಿ ಹಾಕಿ ಪುಡಿ ಮಾಡಿ . ಚಟ್ನಿಪುಡಿ ಹದಕ್ಕೆ ಪುಡಿ ಮಾಡಿ ಇಡಿ . ರುಚಿ ಶುಚಿಯಾದ ವ್ರತದ ಚಟ್ನಿಪುಡಿ ರೆಡಿ .
ಇದು ಅನ್ನದ ಜತೆ ತುಪ್ಪಹಾಕಿ ಕಲಿಸಿ ಊಟ ಮಾಡಿದರೇ ಸಕತ್ ಆಗಿ ಇರುತ್ತದೆ .
ಇಡ್ಲಿ ದೋಸೆ ಚಪಾತಿ ರೊಟ್ಟಿ ಜತೆ ಕೂಡ ತುಂಬಾ ಚೆನ್ನಾಗಿರತ್ತೆ . ಸ್ವಲ್ಪ ಮೊಸರು ಹಾಕಿ ಕಲಿಸಿದರೇ ಚಪಾತಿ ರೊಟ್ಟಿ ಇಡ್ಲಿ ದೋಸೆ ಜತೆಗೆ ಚೆನ್ನಾಗಿರುತ್ತದೆ .
ಉತ್ತರಾದಿ ಮಠದವರು ವಣಕೊಬ್ಬರಿ ಬಳಸದಿದ್ದರೇ ಅದು ಬಿಟ್ಟುಬಿಡಿ .ವ್ರತದ ಮಸಾಲೆ ಪುಡಿ .
all in all .1 ಪಾವು ಕಡ್ಲೇಬೇಳೆ .
1 ಪಾವು ಉದ್ದಿನಬೇಳೆ .
ಒಂಬು ಬಟ್ಲು ವಣ ಕೊಬ್ಬರೀ ತುರಿ . ( ಉತ್ತರಾದಿ ಮಠದವರು ಕೊಬ್ಬರಿ ತೊಗೊಳ್ಳುವುದಿಲ್ಲ ಅವರಿಗೆ ಬೇಡ ) .
2 ಟೇಬಲ್ ಸ್ಪೂನ್ ಕಾಳು ಮೆಣಸು .
2 ಟೇಬಲ್ ಸ್ಪೂನ್ ಜೀರಿಗೆ .
1/2 ಪಾವು ಬಿಳಿಎಳ್ಳು .
ಮಾಡುವ ವಿಧಾನ --- ವಣ ಕೊಬ್ಬರಿ ಬಿಟ್ಟು ಎಲ್ಲಾ ಪದಾರ್ಥಗಳು ಮೀಡಿಯಂ ಉರಿಯಲ್ಲಿ ಕೆಂಪಗೆ ಹುರಿದು ಇಡಿ . ವಣಕೊಬ್ಬರಿ ತುರಿ ಸವರನ್ ಬಣ್ಣಕ್ಕೆ ಹುರಿದು ಇಡಿ .
ಆರಿದ ಮೇಲೆ ಎಲ್ಲಾ ಸೇರಿಸಿ ಮಿಕ್ಸಿಯಲ್ಲಿ ಪುಡಿಮಾಡಿ ಡಬ್ಬದಲ್ಲಿ ತುಂಬಿ ಇಡಿ .
ವ್ರತದ ಎಲ್ಲಾ ತಿಂಡಿಗಳು ಅಡಿಗೆಗಳಿಗೆ ಈ ಮಸಾಲ ಪುಡಿ ಹಾಕಿ ರುಚಿಗೆ ತಕ್ಕಷ್ಟು ಆಮ್ಚೂರುಪುಡಿ ಉಪ್ಪು ಹಾಕಿದರೇ ತುಂಬಾ ರುಚಿಯಾಗಿರುತ್ತದೆ . ಎಲ್ಲದಕ್ಕು ತುಪ್ಪದ ವಗ್ಗರಣೆ ರುಚಿ . ಆರೋಗ್ಯಕ್ಕೂ ಒಳ್ಳೆಯದು .
[: *ಮೆಣಸು ಜೀರ್ಗೆ ... ಉರಿಯುತ್ತೆ ಕಂಡ್ರಿ, ಕುರು ಆಗುತ್ತೆ*
ವ್ರತ ಮಾಡಲು ಹಿಂದೇಟು ಹಾಕುವವರು ಕೊಡುವ ಪ್ರಧಾನ ಉತ್ತರವಿದು.
_ವ್ರತ ಮಾಡಬೇಕು, ಮಾಡಿದರೆ ಒಳ್ಳೆಯದು, ಬಿಟ್ಟರೆ ಕೆಟ್ಟದ್ದು ಎಲ್ಲಾ ಗೊತ್ತು ನಮಗೆ ಆದರೆ ಪ್ರಕೃತಿ/ದೇಹ ತಡಿಯಬೇಕಲ್ಲ ... ಈ ಜನ್ಮಕ್ಕೆ ಇಷ್ಟೆ ಯೋಗ ಅಂದುಕೊಂಡು ದೇವರ ಮೇಲೆ ಭಾರ ಹಾಕಿದ್ದೇನೆ, ಮುಂದಿನ ಜನ್ಮ ಇದ್ದೆ ಇರುತ್ತಲ್ಲ ಹೇಗಿದ್ರು, ಆಗ ನೋಡೋಣ_ ......
ಅಂಥ ಹೇಳೋ ಜನರೇ ಅಧಿಕ.