ಪೂಜಾ ಪದ್ದತಿಃ

0 0 0
                                    

ಮಹಾ ವಿಷ್ಣು ಪೂಜಾ ಪದ್ಧತಿ

ಮಹಾವಿಷ್ಣು ಎಂದರೆ ಕಾಯುವವನು , ರಕ್ಷಿಸುವವನು ಎಂದು ಅರ್ಥ . ಸುದರ್ಶನ ಚಕ್ರವು ವಿಷ್ಣುವಿನ ಪ್ರಮುಖವಾದ ಆಯುಧವಾಗಿದೆ .

ಹಿನ್ನೆಲೆ :

ಮಹಾವಿಷ್ಣು ಎಂದರೆ ಕಾಯುವವನು , ರಕ್ಷಿಸುವವನು ಎಂದು ಅರ್ಥ . ಸುದರ್ಶನ ಚಕ್ರವು ವಿಷ್ಣುವಿನ ಪ್ರಮುಖವಾದ ಆಯುಧವಾಗಿದೆ . ಮಹಾವಿಷ್ಣುವನ್ನು ನಾರಾಯಣ , ಹರಿ , ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ . ತ್ರಿಮೂರ್ತಿಗಳಲ್ಲಿ ಒಬ್ಬನಾದಂತಹ ವಿಷ್ಣುವು ಸಕಲ ಲೋಕಗಳ ಸ್ಥಿತಿಕರ್ತನಾಗಿರುತ್ತಾನೆ . ಈತನನ್ನು ಪೂಜೆ ಮಾಡುವುದರಿಂದ ದೇಹ , ಮನಸ್ಸು , ಆತ್ಮಗಳಿಗೆ ಆನಂದವನ್ನು ಕೊಡುತ್ತಾನೆ . ವೈಯಕ್ತಿಕ ಮತ್ತು ವ್ಯಾವಹಾರಿಕ ಜೀವನವನ್ನು ನಡೆಸುವಂತೆ ಅನುಗ್ರಹಿಸುತ್ತಾನೆ . ಎಲ್ಲಾ ತರವಾದ ತೊಂದರೆಗಳನ್ನು ಎದುರಿಸುವ ಶಕ್ತಿಯನ್ನು , ಧೈರ್ಯವನ್ನು ನೀಡುತ್ತಾನೆ . ಜ್ಞಾನ , ಐಶ್ವರ್ಯ , ಶಕ್ತಿ , ವೀರ್ಯ , ತೇಜಸ್ಸು , ಬಲ ಇವುಗಳು ವಿಷ್ಣುವಿನ ಪ್ರಮುಖ ಕೀರ್ತಿಗಳಾಗಿರುತ್ತವೆ . ಬುಧಗ್ರಹದ ಅಧಿದೇವತೆ ಹಾಗೂ ಪ್ರತ್ಯಧಿದೇವತೆ ಭಗವಂತನಾದ ಮಹಾವಿಷ್ಣುವೇ ಆಗಿರುತ್ತಾನೆ . ಆದುದರಿಂದ ಬುಧುವಾರದಂದು ವಿಷ್ಣುವನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳೂ ಕೂಡ ಸಿದ್ಧಿಸುತ್ತವೆ . ಈತನನ್ನು ತುಳಸಿ ಹಾಗೂ ಕಮಲದ ಹೂವುಗಳಿಂದ ಪೂಜಿಸಿದರೆ ಮನಸ್ಸಿನ ಕಾಮನೆಗಳು ಈಡೇರುತ್ತವೆ ಎಂದು ಪ್ರತೀತಿ ಮತ್ತು ವಿಷ್ಣುಸಹಸ್ರನಾಮ ಪಾರಾಯಣವನ್ನು ಮಾಡುವುದರಿಂದ ಸಕಲ ವಿಧವಾದ ಪಾಪಗಳು ಪರಿಹಾರವಾಗುತ್ತವೆ

ಪೂಜಾ ಸಮಯ :

ಈ ಪೂಜೆಗೆ ಬೇಕಾಗುವ ಸಮಯ 15 ರಿಂದ 20 ನಿಮಿಷಗ ಮಹಾ ವಿಷ್ಣುವಿನ ಪೂಜೆಯನ್ನು ಬುಧುವಾರದಂದು ಆಚರಿಸಲಾಗುತ್ತದೆ . ಗುರುವಾರದಂದು ಕೂಡ ಈ ಪೂಜೆಯನ್ನು ಆಚರಿಸಬಹುದಾಗಿದೆ

ಪೂಜಾ ಬೇಕಾದ ಸಾಮಗ್ರಿಗಳು :

ವಿಷ್ಣುವಿನ ವಿಗ್ರಹ - 1

ಅರಶಿನ

ಕುಂಕುಮ

* ಅಕ್ಷತೆ

* ಹೂವು

ಹಣ್ಣುಗಳು

# ವೀಳ್ಯದೆಲೆ ಅಡಿಕೆ

* ಊದಿನ ಕಡ್ಡಿ - 2 ರಿಂದ 5

# ಕರ್ಪೂರ - 2 ರಿಂದ 5

ದೀಪಗಳು - 1 ರಿಂದ 2

ಗಂಧ

ಆರತಿ - 1

# ಘಂಟೆ - 1

ಪಂಚಪಾತ್ರೆ , ಉದ್ಧರಣೆ - 1 ಜೊತೆ

ಆಚರಣೆ ಮಹತ್ವ ಮತ್ತು ಸಂಸ್ಕೃತಿಯ ವೈವಿಧ್ಯತೆWhere stories live. Discover now