*🌹🕉🌹*
*
🌹🕉🌹
ಭಕ್ತಿ ಎನ್ನುವುದು ಒಂದು ಸಂಸ್ಕೃತ ಶಬ್ದ.ಭಕ್ತಿ ಎನ್ನುವ ಶಬ್ದಕ್ಕೆ ಶಬ್ದಕೋಶದಲ್ಲಿರುವ ಅರ್ಥಗಳು:-
1. *ದೇವರು, ಗುರು ಮತ್ತು ಹಿರಿಯವರಲ್ಲಿ ಇರುವ ಗೌರವಬುದ್ಧಿ;*
2. ಭಾಗವಹಿಸಿವುದು;
3. ರಚನೆ, ಜೋಡನೆ;
4. ಸೇವೆ, ಆರಾಧನೆ, ಉಪಾಸನೆ, ಪೂಜೆ;
5. ಶ್ರದ್ಧೆ, ವಿಶ್ವಾಸ, ನಿಷ್ಠೆ;ಮುಕ್ತಿಗೆ ಭಕ್ತಿಯೇ ಮೂಲ.
ಪುರಾಣಗಳಲ್ಲಿ ಮೇರು ಕೃತಿಯೆನಿಸಿದ ಶ್ರೀಮದ್ಭಾಗವತವು ನವವಿಧ ಭಕ್ತಿಯನ್ನು ಉಲ್ಲೇಖಿಸುತ್ತದೆ.*"ಶ್ರವಣಂ ಕೀರ್ತನಂ ವಿಷ್ಣೋ: ಸ್ಮರಣಂ ಪಾದಸೇವನಂ|*
*ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್|*
*ಇತಿ ಪುಂಸಾರ್ಪಿತಾ ವಿಷ್ಣೋ ಭಕ್ತಿಶ್ಚೇನ್ನವಲಕ್ಷಣಾ||"*ಜಗದೊಡೆಯ ಜಗದ್ರಕ್ಷಕ ವಿಷ್ಣುವಿನ ನಾಮಗುಣಲೀಲಾ ಕಥನಗಳ ಶ್ರವಣ, ಕೀರ್ತನ, ಹಾಗೂ ಭಗವಂತನ ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ, ಆತ್ಮನಿವೇದನೆ, ಇವುಗಳೇ ಆ ನವವಿಧ ಭಕ್ತಿ.
ಭಕ್ತಿಯಲ್ಲಿಯೂ ಎರಡು ವಿಧ:-
1. *ಯಥಾರ್ಥ/ಸತ್ಯ ಭಕ್ತಿ.*
2. *ದರ್ಶನ/ತೋರಿಕೆಯ ಭಕ್ತಿ.*ಭಗವಂತನಿಗೆ ಮಾಡಬೇಕಾಗಿರುವುದು ಯಥಾರ್ಥ/ಸತ್ಯ ಭಕ್ತಿಯೇ ಹೊರತು ದರ್ಶನ/ತೋರಿಕೆಯ ಭಕ್ತಿ ಅಲ್ಲ.
ಹಿರಿಯವರಲ್ಲಿಯೂ ಎರಡು ವಿಧ:-
1. ವಯೋವೃದ್ಧ.
2. ಜ್ಞಾನವೃದ್ಧ.ಇಲ್ಲಿ ಜ್ಞಾನ ಎಂದರೆ ಆಧ್ಯಾತ್ಮಿಕ ಜ್ಞಾನ (ವೇದಜ್ಞಾನ, ಭಗವಂತನ ಅರಿವು) ಹೊರತು ಸಾಮಾನ್ಯ ಜ್ಞಾನವಲ್ಲ.
(ಈಗಿನ ವಿದ್ಯಾಲಯದಿಂದ ಪಡೆಯುವುದು ಸಾಮಾನ್ಯ ಜ್ಞಾನ.)ತೋರಿಕೆಯ ಭಕ್ತಿಯನ್ನು ದೇವರು, ಗುರುಗಳು, ಹಿರಿಯವರನ್ನು ಬಿಟ್ಟು ಬೇರೆಯವರಿಗೆ ಅಂದರೆ ಧನವಂತನಿಗೆ, ಗೌರವಕ್ಕೆ ಅರ್ಹನಲ್ಲವನಿಗೆ, .... ಮಾಡುವುದರಲ್ಲಿ ತಪ್ಪಿಲ್ಲ.
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
*ಇಂದಿನಿಂದಾದರೂ ನಿನ್ನ ಭಕುತಿಯ ನೀಡೋ*
ಇವತ್ತು ನಮ್ಮ ಸ್ಥಿತಿ ಹೇಗಿದೆ ಯಾರು ಎಲ್ಲಿ ಇದ್ದಾರೋ ಇಲ್ವೋ ? ಕಣ್ಣಾರೆ ಇವತ್ತು ನೋಡಿದ ಮನುಷ್ಯ ನಾಳೆಗೆ ಕಾಣದೇ ಹೋಗುವಂತಾಗಿದೆ ಜಗತ್ತು. ಕಷ್ಟಕ್ಕೆ ಸಹಾಯಕ್ಕೆ ಆಗದ ಜೀವನ ಆಗಿದೆ. ಜಗತ್ತೇ ಒದ್ದಾಡ್ತಿದೆ. ಈ ಸಮಯದಲ್ಲಿ ಅದನ್ನು ಕಮ್ಮಿ ಮಾಡೋದು ವೈಷ್ಣವರ ಆದ್ಯ ಕರ್ತವ್ಯ. ಆದರೆ