[||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||.*
*ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ|*
*ಪಕ್ಷಿವಾಹನ್ನಗೆರಗುವೆ |*
*ಪಕ್ಷಿವಾಹನ್ನಗೆರಗುವೆ ಅನುದಿನ*
*ರಕ್ಷಿಸಲಿ ನಮ್ಮ ವಧುವರರ |*|(೧)*ಧನ ಮತ್ತು ಧಾನ್ಯ ಜೊತೆಯಾಗಿ ಬಳಸುವ ಪದಗಳು*. ಹಾಗೆಯೇ
*ಭಗ ಮತ್ತು ಭಾಗ್ಯ ಪದಗಳೂ ಕೂಡ. ಧಾನ್ಯವು ಧನಪ್ರದವಾದರೆ ಭಾಗ್ಯವು ಭಗಪ್ರದವೆಂದೇ ಅರ್ಥ.*ಐಶ್ವರ್ಯಸ್ಯ ಸಮಗ್ರ್ಯಸ್ಯ
ವೀರ್ಯಸ್ಯ ಯಶಸಃ ಶ್ರಿಯಃ |
ಜ್ಞಾನವಿಜ್ಞಾನಯೋಶ್ಚೈವ
ಷಣ್ಣಾಂ ಭಗ ಇತೀರಿತಃ ||ಅದಕೆಂದೆ
*ದೇವರು ಭಗವಂತ.ಆತನೇ ಸುಭಗ.*
*ಆ ಸುಭಗನಿಗೆ ಶೋಭನ ಬಯಸಿದರೆ ನಮ್ಮ ಮಾತೆಯರೆಲ್ಲ ಭಾಗ್ಯವಂತರೆನಿಸುವುದರಲ್ಲಿ ಸಂದೇಹವಿಲ್ಲ.*ಇಷ್ಟಂ ದೈವಂ ಹರಿಃ ಸಾಕ್ಷಾತ್
ಲಕ್ಷ್ಮೀರ್ಭಾಗ್ಯಸ್ಯ ದೇವತಾ |*ಅಂಥಹ ಲಕ್ಷ್ಮೀನಾರಾಯಣರ ಪಾದಗಳೇ ನಮಗೆ ರಕ್ಷಾಸ್ಥಾನಗಳು. ಊರಿದ ಹೆಜ್ಜೆ ಅಲುಗಾಡದಂತೆ ಅವರ ಪಾದಗಳನ್ನು ಹಿಡಿದರೆ ನಮಗೆ ಭಗವದನುಗ್ರಹ ಖಂಡಿತ. ಅಡಿಪಾಯ ಗಟ್ಟಿ ಇದ್ದರೆ ಬಾಳೆಂಬ ಭವನ ಮುಗಿಲೆತ್ತರ ಏರಿದರೂ ಸುಭದ್ರ, ಸುಮಂಗಳ.*
ಮಂಗಳಾಚರಣೆ ಮಾಡಿ ವಿಘ್ನ ಪರಿಹರಿಸಿಕೊಳ್ಳುವತ್ತ ಶೋಭನಪದದ ಮುಂದಿನ ನಡೆ ಸುಂದರ.
*ಪಕ್ಷಿವಾಹನ್ನಗೆರಗುವೆ.* *ಗರುಡಗಮನನಾದ ಹರಿಗೆರಗುವ ಪರಿ. ವಿಷಾಯುಧಗಳಾದ ಸರ್ಪಸಂತತಿಗೆ ವೈರಿ ಗರುಡ. ಹಾಗಾಗಿ ಪಕ್ಷಿವಾಹನನ ಸ್ಮರಣೆಯಿಂದ ವಿಷಬಾಧೆ ಪರಿಹಾರ. ವಿಷವೆಂದರೆ ನಂಜು. ಅತಿ ಹೆಚ್ಚು ನಂಜು ಮತ್ಸರಗಳ ಕಾಟದಿಂದ ತೊಂದರೆಗೀಡಾಗುವ ಮಹಿಳೆಯರು ಈ ಶೋಭನ ಪದವನ್ನು ಭಕ್ತಿಯಿಂದ ಪಠಿಸಿದರೆ ಆ ದುಷ್ಪರಿಣಾಮಗಳಿಂದ ಹೊರ ಬರುವ ಸಾಧ್ಯತೆಯಿದೆ.*
*ರಕ್ಷಿಸಲಿ ನಮ್ಮ ವಧುವರರ.* *ಶ್ರೀವಾದಿರಾಜತೀರ್ಥರು ಈ ಶೋಭನಪದವನ್ನು ರಚಿಸಿ ವಿಷಬಾಧೆಯಿಂದ ಬಳಲಿದ ಮದುಮಗನನ್ನು ಬದುಕಿಸಿದ ಐತಿಹ್ಯವಿದೆ. ಅಲ್ಲಿ ಮದುಮಗ ಮದುಮಗಳು ಎಂದರೆ ಲಕ್ಷ್ಮೀನಾರಾಯಣರ ಸಾನ್ನಿಧ್ಯವುಳ್ಳವರೆಂದರ್ಥ.* ವಾದಿರಾಜರು ಮಹಾತ್ಮರು. ಅವರಿಗೆ ವಧೂವರರಲ್ಲಿ ಆ ರೂಪವೇ ಕಂಡದ್ದಿರಬೇಕು. ಹಾಗಾಗಿ ಈ ಪದಗಳಿಂದ ಲಕ್ಷ್ಮೀನಾರಾಯಣರ ಸ್ತುತಿ ಮಾಡಿ ಲೋಕಕಲ್ಯಾಣವುಂಟು ಮಾಡಿದರೆಂದೇ ತಿಳಿಯುವುದಕ್ಕೆ ಅಡ್ಡಿಯಿಲ್ಲ.
ಮದುವೆಯ ಪ್ರಯೋಗಮಂತ್ರಗಳೂ ಹೇಳುವುದು ಅದನ್ನೇ ಅಲ್ಲವೇ.?!
*ಶ್ರೀಧರರೂಪಾಯ ವರಾಯ ಶ್ರೀರೂಪಿಣೀಂ ಇಮಾಂ ಕನ್ಯಾಂ ಪ್ರದಾಸ್ಯಾಮಿ...."*