ಪುಷ್ಕರ

0 0 0
                                    

[: 🚩🕉️ *ತುಂಗಭದ್ರ ಪುಷ್ಕರ* 🕉️🚩
12 ವರ್ಷಗಳಿಗೊಮ್ಮೆ ಪವಿತ್ರ ನದಿಗಳಲ್ಲಿ ಸಂಭವಿಸುವ ಪುಷ್ಕರ (ಕುಂಭಮೇಳ) ಈ ಬಾರಿ *ತುಂಗಭದ್ರಾ* ನದಿಯಲ್ಲಿ ಪುಷ್ಕರ ಆಗಮಿಸಲಿದೆ.

ಶಾರ್ವರಿ ನಾಮ ಸಂವತ್ಸರ ಕಾರ್ತೀಕ ಶುದ್ದ ಷಷ್ಠಿ ಉತ್ತರಾಷಡ ನಕ್ಷತ್ರ *20/11/2020* ಶುಕ್ರವಾರ ಬೆಳಗಿನ ಜಾವ 1:20am ಬ್ರಾಮ್ಮಿ ಸಮಯದಲ್ಲಿ ಶುಭ ಪುಷ್ಕರ ಆರಂಬವಾಲಿದೆ. ಒಂದು ವರ್ಷಗಳ ಕಾಲ ಈ ಪವಿತ್ರತೆ ಇರಲಿದ್ದು. ದರ್ಶನ, ಸಂಕಲ್ಪ, ಸ್ನಾನ, ಪೂಜಾ, ದೈವೀ ಕಾರ್ಯಗಳಿಗೆ 12 ದಿನಗಳ ಕಾಲ ಶುಭಪ್ರದವಾಗಿರುತ್ತದೆ.
ಕಾರ್ತೀಕ ಕೃಷ್ಣ ಪ್ರತಿಪದ *01/12/2020* ಮಂಗಳವಾರದ ವರೆಗೆ ಶುಭ ಪ್ರದವಾಗಿರುತ್ತದೆ.

*ಪುಷ್ಕರ ಸಮಯದಲ್ಲಿ ಮಾಡಬೇಕಾದ ಕಾಮ್ಯಗಳು ತುಂಗಭದ್ರಾ ನದಿಯಲ್ಲಿ ಸಂಕಲ್ಪಿತ ಸ್ನಾನ, ದೇವರ, ಇಷ್ಟದೇವರ ದರ್ಶನ,ದೇವರ ಸೇವೆ, ದಾನ,ಗಂಗಾಪೂಜೆ, ಬಾಗಿಣ ಸಮರ್ಪಣೆ ಮಾಡುವುದರಿಂದ ಸಂಪೂರ್ಣ ಶುಭಫಲಗಳು ಪ್ರಾಪ್ತವಾಗಲಿವೆ.*

*ತುಂಗಭದ್ರ ನದಿಯಮಾಹಿತಿ*
ಕರ್ನಾಟಕ ಪಶ್ಚಿಮಗಟ್ಟದ ವರಹಾಪರ್ವತದ ಗಂಗಾಮೂಲ ಎನ್ನುವ ಪವಿತ್ರಸ್ಥಳದಲ್ಲಿ ತುಂಗಾ ನದಿಯಾಗಿ ಉಘಮಿಸಿ ಚಿಕ್ಕಮಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಹಿಸಿ ಕೂಡಲಿ ಎನ್ನುವ ಪವಿತ್ರ ಸ್ಥಳದಲ್ಲಿ ಭದ್ರಾ ನದಿಯನ್ನು ತನ್ನೊಡಲಿಗೆ ಸೇರಿಸಿಕೊಂಡು ತುಂಗಭದ್ರೆಯಾಗಿ ಹಲವಾರು ತೀರ್ಥಕ್ಷೇತ್ರ ಸಂದಿಸಿ, ಸಾವಿರಾರು ದೇವರುಗಳಿಗೆ ಅಭಿಷೇಕಮಾಡಿ,  ಕೊಟ್ಟ್ಯಾಂತರ ಜೀವರಾಶಿಗೆ ಜೀವಜಲನೀಡಿ ಲಕ್ಷಾಂತರ ರೈತರ ಭೂಮಿಯನ್ನು ತಣಿಸಿ ಅನ್ನದಾತೆಯಾಗಿ ನೂರಾರು ಕಾರ್ಕಾನೆಗಳಿಗೆ ಜಲದಾರೆನೀಡಿ 610 ಕಿಲೋಮೀಟರ್ ಅದಿಕವಾಗಿ ಚಲಿಸಿ ಮಾತೃಶಕ್ತಿಯಾಗಿದಗದ್ದಾಳೆ. ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯ ಶ್ರೀಮಹೇಶ್ವರನ ಸನ್ನಿದಿಯ ಸಂಗಮದಲ್ಲಿ ಕೃಷ್ಣಾನದಿಯಲ್ಲಿ ವಿಲೀನಳಾಗಿ ಕೃಷ್ಣೆಯಾಗುವಳು. ಮುಂದೆ ಆಂದ್ರಪ್ರದೇಶದಲ್ಲಿ *ಗಂಗಾಸಾರ* (ಬಂಗಾಳ ಕೊಲ್ಲಿ) ಸಮುದ್ರವನ್ನು ಸೇರುವಳು ತುಂಗಭದ್ರೆ ಕೃಷ್ಣೆಯಾಗಿ.
ಬನ್ನಿ ಪುಷ್ಕರ ಶುಭ ಸಂದರ್ಭದಲ್ಲಿ ತುಂಗಭದ್ರಾ ನದಿಯಲ್ಲಿ ಮಿಯ್ಯೋಣ ಜನ್ಮ ಜನ್ಮಾಂತರದ ಪಾಪ ಕಳೆದುಕೊಂಡು ದೈವೀ ಕಾರ್ಯಮಾಡಿ ಶುಭಫಲ ಪಡೆಯೋಣ.
🚩 *llಹರಿಃ ಓಂ ತತ್ ಸತ್ll*🚩
[   ‌       ‌ 
*"ಪುಷ್ಕರ ಎಂದರೇನು?"*

ಗಂಗೆಯೇ ಮೊದಲಾದ *೧೨ ನದಿಗಳಲ್ಲಿ ಸಾರ್ಧತ್ರಿಕೋಟಿ*
ತೀರ್ಥ ಸಹಿತ ಪುಷ್ಕರನು ನಿವಾಸಮಾಡುವ ಕಾಲಕ್ಕೆ
*"ಪುಷ್ಕರ" ಎಂದು ಹೆಸರು.*

*ಮೇಷ ಮೊದಲಾದ ೧೨ ರಾಶಿಗಳಲ್ಲಿ ಬೃಹಸ್ಪತಿ* (ಗುರು) ಸಂಚರಿಸುವ
ಸಮಯದಲ್ಲಿ ಪುಷ್ಕರನು ಆಯಾ ನದಿಗಳಲ್ಲಿ ವಾಸಿಸುವನು.
ಬೃಹಸ್ಪತಿಯು ಒಂದೊಂದು ವರ್ಷ ಒಂದೊಂದು ರಾಶಿಯಲ್ಲಿ ಸಂಚರಿಸುವನು.
ಆಗ ಆಯಾ ನದಿಗಳಲ್ಲಿ ಮೂರುವರೆಕೋಟಿ ತೀರ್ಥಗಳಿಂದ ಸಹಿತನಾದ ಪುಷ್ಕರನು (ತೀರ್ಥರಾಜ) ಹಾಗೂ ಸಕಲಮುನಿಗಳು ವಾಸಿಸುವರು.

ಆಚರಣೆ ಮಹತ್ವ ಮತ್ತು ಸಂಸ್ಕೃತಿಯ ವೈವಿಧ್ಯತೆWhere stories live. Discover now