*ಮೊಟ್ಟೆ ಮಾಂಸಹಾರ ಮತ್ತು ಹಾಲು ಸಸ್ಯಾಹಾರ ಏಕೆ* ?
*ಉತ್ತರ:* ಮೊದಲನೆಯದಾಗಿ ನಾವು ಸಸ್ಯಾಹಾರವೆಂದರೆ ಏನು? ಮಾಂಸಾಹಾರವೆಂದರೆ ಏನು? ಎಂಬ ವಿಷಯದ ಬಗ್ಗೆ ಶಾಸ್ತ್ರಗಳು ಹೇಳಿದ ವಿವರಣೆಯನ್ನು ಪರಿಶೀಲಿಸೋಣ.
ಈ ಭೂಮಿಯ ಮೇಲೆ ಚರಾಚರ ಸೃಷ್ಟಿ (ಜನನ) ಎನ್ನುವುದನ್ನು ನಾಲ್ಕು ವಿಧಗಳಾಗಿ ವಿಭಜಿಸಿ ಅರ್ಥ ಮಾಡಿಕೊಳ್ಳಲಾಗಿದೆ.
ಇವುಗಳನ್ನು,
1. ಜರಾಯುಜಗಳು
2. ಅಂಡಜಗಳು
3. ಸ್ವೇದಜಗಳು
4. ಉದ್ಭೀಜಗಳು
ಎಂದು ಕರೆಯುತ್ತಾರೆ.1. *ಜರಾಯುಜಗಳು:* " ಗರ್ಭದಲ್ಲಿನ ಪಿಂಡವನ್ನು ಆವರಿಸಿ ಮಾಯೆಯಿಂದ ಹುಟ್ಟಿರುವವು.
ಉದಾ:ಮನುಷ್ಯರು, ಪಶುಗಳು.2. *ಅಂಡಜಗಳು:* ಮೊಟ್ಟೆಯಿಂದ ಹುಟ್ಟುವ ಪಕ್ಷಿಗಳು, ಹಾವುಗಳು ಮೊದಲಾದವು.
3. *ಸ್ವೇದಜಗಳು:* ಬೆವರಿನಿಂದ ಹುಟ್ಟುವ ಸೊಳ್ಳೆಗಳು, ತಿಗಣೆಗಳು ಮೊದಲಾದವು.
4. *ಉದ್ಭೀಜಗಳು:* ಬೀಜವನ್ನು ಒಡೆದು ಜನ್ಮಿಸುವ ವೃಕ್ಷ, ಬಳ್ಳಿಗಳು ಮೊದಲಾದವು.
ಇನ್ನು ಇದರಲ್ಲಿ ಎರಡು ವಿಧಗಳು: "ಚರ ಸೃಷ್ಟಿ", "ಅಚರ ಸೃಷ್ಟಿ".
ಜರಾಯುಜಗಳು, ಅಂಡಜಗಳು, ಸ್ವೇದಜಗಳು *ಚರ ಸೃಷ್ಟಿ* ಎಂದು. ....
ಉದ್ಭೀಜಗಳು ಮಾತ್ರ *ಅಚರ ಸೃಷ್ಟಿ* ಎಂದು ಹೇಳಲಾಗಿದೆ. "ಚರ" ಎಂದರೆ ಕದಲುವಂತಹವು. ಇದಕ್ಕೆ ಉದಾಹರಣೆ ಮನುಷ್ಯರು, ಪಶುಗಳು, ಪಕ್ಷಿಗಳು, ಹಾವುಗಳು, ಸೊಳ್ಳೆಗಳು, ತಿಗಣೆಗಳು, ಕ್ರಿಮಿ ಕೀಟಗಳು, ಇವು ಚಲಿಸುವಿಕೆಯನ್ನು ಹೊಂದಿರುತ್ತವೆ. ಇವು ಮುಖ್ಯವಾಗಿ ತಮ್ಮ ಚಲನೆಯನ್ನು ತಮ್ಮನ್ನು ತಾವು ಕಾಪಾಡಿಕೊಳ್ಳುವ ಕ್ರಮದಲ್ಲೂ, ತಮ್ಮ ಆಹಾರವನ್ನು ಹುಡುಕುವ ಪ್ರಯತ್ನದಲ್ಲೂ ಬಳಸಿಕೊಳ್ಳುತ್ತವೆ. ಇವು ರಜೋ ಗುಣ, ತಮೋ ಗುಣ ಸ್ವಭಾವಿಗಳು. ಆದ್ದರಿಂದ ಇವು ಧರಿಸುವ ಶರೀರಗಳನ್ನು ದೋಷಪೂರಿತವೆಂದು, ದುರ್ಗಂಧವನ್ನು ಆವರಿಸುವ ವಿಧದಲ್ಲಿ ಇವುಗಳು "ಮಾಂಸವುಳ್ಳ ರಚನೆಗಳ ಶರೀರ ಹೊಂದಿವೆ".ಇನ್ನು ಉಳಿದದ್ದು, *ಉದ್ಭೀಜಗಳು*
ಬೀಜದಿಂದ ಬರುವಂತಹುದನ್ನು ಉಚ್ಛವಾದವು ಎಂದು ಕರೆದಿದ್ದಾರೆ. ಇವು ಸಾಧ್ಯವಾದಷ್ಟು ಸೂರ್ಯನ ಶಾಖ ಹೊಂದುವುದಕ್ಕೆ ಆಕಾಶದ ಕಡೆಗೆ ಸಾಗುತ್ತವೆ. ಇವು ಸತ್ವಗುಣ ಪೂರಿತವಾಗಿವೆ. ಇವು ಬೇರಿನಿಂದ ತಮ್ಮ ಶಾಖೆಗಳನ್ನು ವಿಕಸಿತಗೊಳಿಸುತ್ತಾ,ವಿಸ್ತರಿಸುತ್ತಾ ಸಾಗುತ್ತವೆ.ಭೂಮಿಯಲ್ಲಿರುವ ಸತ್ವಗಳನ್ನು ಮಾತ್ರ ಉಪಯೋಗಿಸಿ ತಮ್ಮನ್ನು ವೃದ್ಧಿಗೊಳಿಸುತ್ತವೆ. ಇವುಗಳನ್ನು ಕತ್ತರಿಸಿದರೂ ಕೂಡ ಮತ್ತೆ ಬೆಳವಣಿಗೆಯನ್ನು ಹೊಂದುತ್ತವೆ.ಇವು ಸತ್ವ ಗುಣಗಳಿಂದ ಕೂಡಿರುವುದರಿಂದ
ಇವುಗಳು ಸಾತ್ವಿಕ ಮತ್ತು ಪ್ರಾಕೃತಿಕ ಗುಣಗಳಿಂದ ಕೂಡಿವೆ.