*ಹನುಮದ್ ವ್ರತ* *ಇದೇ ಡಿಸೆಂಬರ್ 16 ರ ಗುರುವಾರ ಹನುಮದ್ ವ್ರತ. ಹನುಮದ್ವ್ರತವನ್ನು ಮಾರ್ಗಶಿರ* *ಶುದ್ಧ ತ್ರಯೋದಶಿಯಂದು ಆಚರಿಸಲಾಗುತ್ತದೆ. ಆದರೆ ಕೆಲವರು ತಿಳುವಳಿಕೆಯಿಲ್ಲದೆ ಈ ದಿನವನ್ನು ಹನುಮ ಜಯಂತಿ ಎಂದು ಕರೆಯುತ್ತಾರೆ. ಇದು ತಪ್ಪ*. *ಹನುಮ ಜಯಂತಿ ವೈಶಾಖ ಬಹುಳ ದಶಮಿ* *ಯಂದು. ಮಾರ್ಗಶಿರ ಶುದ್ದ ತ್ರಯೋದಶಿಯಂದು ಹನುಮದ್ ವ್ರತ ಆಚರಿಸಲು ಸೂಕ್ತ ಕಾರಣವಿದೆ*.
*ವೇದವ್ಯಾಸರು ಪಾಂಡವರು* *ದ್ವೈತವನದಲ್ಲಿದ್ದಾಗ ಹನುಮದ್ವ್ರತದ ಕಥೆಯನ್ನು ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು*..
*ಒಮ್ಮೆ ಹನುಮಂತ ದೇವರು ಸೂರ್ಯನಿಗೆ* *ರಾಹುಗ್ರಹಣವಾದ ಸಂದರ್ಭದಲ್ಲಿ ಮೇಲೆ ಹಾರಿದಾಗ, ಸ್ವರ್ಗಾಧಿಪತಿಯು* *ಸೂರ್ಯನನ್ನು ಹನುಮಂತ ಹಿಡಿಯಬಹುದೆಂದು ಭಾವಿಸಿ, ವಜ್ರಾಯುಧ ಪ್ರಹಾರ ಮಾಡಿದಾಗ, ಹನುಮಂತ ಲೋಕಾ ರೀತ್ಯ ಪೆಟ್ಟಾದವನಂತೆ* *ಕೆಳಗೆ ಬಿದ್ದನು. ಆಗ ವಾಯುದೇವರು ಹನುಮಂತನನ್ನು ಕರೆದುಕೊಂಡು ಒಂದು ಗುಹೆಗೆ ಪ್ರವೇಶಿಸಿದರು. ಆಗ ಪ್ರಪಂಚವೆಲ್ಲ ಉಸಿರಾಟದ* *ತೊಂದರೆಗೊಳಗಾಯಿತು. ಎಲ್ಲಾ ದೇವತೆಗಳು ಬ್ರಹ್ಮದೇವರನ್ನು ಪ್ರಾರ್ಥಿಸಲು, ಬ್ರಹ್ಮದೇವರು ವಾಯುವಿನ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧದಿಂದಲೂ* *ಏನೂ ಆಗುವುದಿಲ್ಲ, ಅವನು ಚಿರಂಜೀವಿ ಯಾಗುತ್ತಾನೆ, ಮತ್ತು ಮಾರ್ಗಶಿರ ಶುದ್ದ* *ತ್ರಯೋದಶಿ ದಿನದಂದು “/*ಹನುಮದ್ ವ್ರತ” ವನ್ನು* *ಆಚರಿಸಿದವರಿಗೆ ಸಕಲ* *ಅಭೀಷ್ಟವೂ ಲಭ್ಯವಾಗುವುದು* *ಎಂದು ವರವನ್ನು ಇತ್ತಿರುತ್ತಾರೆ*.
*ಹನುಮದ್ವ್ರತ” ಕಥೆಯನ್ನು ಭವಿಷ್ಯೋತ್ತರ ಪುರಾಣದಲ್ಲಿ ವಿವರಿಸಿದ್ದಾರೆ*.
*ಹನುಮಂತನ ಅವಕೃಪೆಗೆ ಒಳಗಾದ ಪಾಂಡವರು ವನವಾಸಕ್ಕೆ ಹೋಗಬೇಕಾಯಿತು. ಹಿಂದೆ ದ್ರೌಪದಿಯು ಕೃಷ್ಣ ಪರಮಾತ್ಮನ ಅನುಜ್ಞೆಯಂತೆ* *ಹನುಮದ್ವ್ರತವನ್ನು ಆಚರಿಸಿದ್ದಳು. ವ್ರತವನ್ನಾಚರಿಸಿದ ನಂತರ ತನ್ನ ಕೈಗೆ ದೋರವನ್ನು ಧರಿಸಿದ್ದಳು. ಈ ದೋರವನ್ನು ಗಮನಿಸಿದ ಅರ್ಜುನನು* *(ಕಲ್ಯಾವೇಶಕ್ಕೊಳಗಾಗಿ), ನಾನು ಆ ಹನುಮಂತನನ್ನು ನನ್ನ* *ರಥದ ಧ್ವಜಕ್ಕೆ ಕಟ್ಟಿರುವೆ. “ಅವನೊಬ್ಬ ಸಾಮಾನ್ಯ ಮಂಗ” ಎಂದು ಹೇಳಿ ಆ ದೋರವನ್ನು ಬಿಸಾಕಲು ಹೇಳಿದನು*.
*ಹನುಮಂತ ದೇವರನ್ನು ನೆನೆದರೆ ಬುದ್ಧಿ, ಬಲ, ಯಶಸ್ಸು*, *ಧೈರ್ಯ, ಎಲ್ಲವೂ ಪ್ರಾಪ್ತವಾಗುತ್ತದೆಂದಾಗ, ಅರ್ಜುನ ಕಲಿ ಪ್ರಭಾವಕ್ಕೊಳಗಾಗಿಯೇ ಅದನ್ನು ಬಿಸಾಡಲು ಹೇಳಿದನು. ಇದೇ ಕಾರಣದಿಂದ* *ಪಾಂಡವರು ವನವಾಸಕ್ಕೆ ದ್ಯೂತ ನಿಮಿತ್ತ ಹೋಗಬೇಕಾಯಿತು. ಆಗ* *ದ್ರೌಪದಿಯೂ ಕೂಡ ಆ ಘಟನೆಯನ್ನು ನೆನಪಿಸಿದಳು*.
*ಈ ಹನುಮದ್ ವ್ರತವನ್ನು ಹಿಂದೆ ಯಾರು ಮಾಡಿರುತ್ತಾರೆ ?*
*ಹಿಂದೆ ಶ್ರೀ ರಾಮಚಂದ್ರನು, ಹನುಮಂತನಿಗೆ* *ಅನುಗ್ರಹಿಸಲು, ಹನುಮನ *ಪ್ರಾರ್ಥನೆಯಂತೆ ಮಾಡಿದ್ದನು*.
*ದ್ರೌಪದಿ ದೇವಿ ಮಾಡಿದ್ದಳು*
*ಸುಗ್ರೀವ ತನ್ನ ಇಷ್ಟಾರ್ಥ* *ಸಿದ್ಧಿಗಾಗಿ ಮಾಡಿದ್ದನು*,
*ವಿಭೀಷಣನು ಈ ವ್ರತವನ್ನು* *ಮಾಡಿ ಲಂಕಾಧಿಪನಾದನು*
*ದೋರ ಬಂಧನ ಮಂತ್ರ*
*ಹನೂಮನ್ ದೋರರೂಪೇಣ ಸಂಸ್ಥಿತೋ ಮೈ ಸರ್ವದಾ |*
*ಸರ್ವಾಪದ್ಭ್ಯೋ ರಕ್ಷ ರಕ್ಷ ಪ್ರಸೀದ ಕಪಿಪುಂಗವ |*
*ಹನುಮದ್ ಅರ್ಘ್ಯಮಂತ್ರ*
*ನಮಸ್ತೇ ವಾಯುಪುತ್ರಾಯ ಧ್ವಂಸಿತಾಮರವೈರಿಣೇ |*
*ಸುಜನಾಂಬುಧಿಚಂದ್ರಾಯ ಭವಿಷ್ಯತ್ ಬ್ರಹ್ಮಣೇ ನಮ: |*
*ಶ್ರೀ ಹನುಮತೇ ನಮ:* *ಇದಮರ್ಘ್ಯಂ ಸಮರ್ಪಯಾಮಿ* |*ಹನುಮದ್ವ್ರತ ಆಚರಣ ಫಲ* : *ಈ ವ್ರತವು ಶೀಘ್ರ *ಫಲದಾಯಕ ಮತ್ತು *ಮಂಗಳಕರ*.
*ಹನುಮದ್ವ್ರತ ಕಥೆಯನ್ನು* *ಆಲಿಸುವುದರಿಂದ ಇಷ್ಟಾರ್ಥ ಪ್ರಾಪ್ತಿ*
*ಈ ವ್ರತಾಚರಣೆಯಿಂದ ಬ್ರಾಹ್ಮಣನು ವೇದ ವೇದಾಂತ* *ಪ್ರಾವೀಣ್ಯತೆ, ಕ್ಷತ್ರಿಯನು ರಾಜ್ಯಲಾಭ, ವೈಶ್ಯರು ಧನ, ಶೂದ್ರರು ಉತ್ತಮ ಬೆಳೆ ಪಡೆಯುವರು**ಪುತ್ರಾರ್ತಿಯು ಪುತ್ರರನ್ನೂ, ಮೋಕ್ಷಾಪೇಕ್ಷಿಯು ಸಾಧನ ಮಾರ್ಗವನ್ನು, ಪಡೆಯುವನು*