ಸಾಲಿಗ್ರಾಮದಲ್ಲಿ ದೇವರ ನಿತ್ಯ ಸನ್ನಿಧಾನ , ವಿಶೇಷ ಆಹ್ವಾನಾದಿ ದೇವಪೂಜಾ ಕ್ರಿಯೆಗಳು ಬೇಕಿಲ್ಲ ಅಂತಾರೆ , ಆದರೆ ಸಾಲಿಗ್ರಾಮದಲ್ಲಿ ನಿತ್ಯ ಕಲಿ ಸನ್ನಿಧಾನ ಕೂಡ - ಇದನ್ನು ಹೇಗೆ ಬಗಿ ಹರಿಸೋದು ?
*" ಸಾಲಿಗ್ರಾಮ ಶಿಲಾಯಾಂತು ನಿತ್ಯಂ ಸನ್ನಿಹಿತ: ಕಲಿ: ಭೀಮಸೇನ ಮಹಾಬಾಹೋ ಗದಯಾ ತನ್ನಿವಾರಯ "*
🙏🙏🙏ಇದರ ಕುರಿತಾಗಿ ಹಿಂದೆ ಚರ್ಚೆ ಆಗಿದೆ actually.
ಭಗವಂತನ ಸನ್ನಿಧಾನ ಜಡಕ್ಕಿಂತ ಹೆಚ್ಚು ವಿಶೇಷವಾಗಿ ಇರುವ ಚೇತನರಲ್ಲಿ ಇದ್ದರೂ ಚೇತನರಲ್ಲಿ ಕಲಿ ಪ್ರವೇಶ ಇದ್ದೇ ಇದೆ.
ಭಾಗವತ etc ಹೇಳಬೇಕಾದರೆ ಕಲಿಕೃತ ದೋಷ ನಾಶಕ್ಕಾಗಿ, ಕಲಿಯ ನಿವಾರಣೆಗಾಗಿ ಕೂಡಾ ಶ್ರವಣ ಅಂತ ಮೊದಲಿಗೆನೇ ಸಂಕಲ್ಪದಲ್ಲಿ ಹೇಳ್ತಾರೆ ಉಪನ್ಯಾಸಕರು.
ಜಡಕ್ಕಿಂತಲೂ ಹೆಚ್ಚಿನ /ವಿಶೇಷವಾಗಿ ಭಗವಂತನ ಸನ್ನಿಧಾನ ಉಳ್ಳ ಜೀವ -ಚೇತನರಲ್ಲಿಯೇ ಕಲಿ ಪ್ರವೇಶ ಇದೆ ಅಂದ ಮೇಲೆ
ಜಡ ಪದಾರ್ಥದಲ್ಲಿ ಕಲಿ ಪ್ರವೇಶ ಇದೆ ಅಂತ ಕೈಮುತ್ತಿ ನ್ಯಾಯದಿಂದ ಸಿದ್ಧ.ಇಲ್ಲಿ *ಸಾಲಿಗ್ರಾಮ ಶಿಲಾಯಾಮ್ ತು*... ಸಾಲಿಗ್ರಾಮ ಶಿಲೆಯಲ್ಲಿ ಅರ್ಥಾತ್ ಭಗವಂತನಲ್ಲಿ ಕಲಿ ಪ್ರವೇಶ ಅಂತ ಅರ್ಥ ಅಲ್ಲ.
ಇಲ್ಲಿ ಹೇಳೋ ತಾತ್ಪರ್ಯ ಎನು ಅನ್ನೋದಕ್ಕೆ ಪರಮ ಪೂಜ್ಯ ಶ್ರೀ ಸತ್ಯಾತ್ಮ ತೀರ್ಥರು ಒಂದು ಸುಂದರ ದೃಷ್ಟಾಂತವನ್ನು ಕೊಟ್ಟು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಂದು ಅನರ್ಘ್ಯ ಮಣಿ /ರತ್ನ ಇದೆ. ಬಹಳ ಪ್ರಕಾಶಮಾನವಾದದ್ದು.
ಆದರೆ ಆ ಮಣಿಯ ಮೇಲೇ ಧೂಳು ಕೂತಿದ್ರೆ ಮಣಿಯ ಪ್ರಕಾಶ ನಮಗೆ ಆಗೋದಿಲ್ಲ.
ಅರ್ಥಾತ್ ಆ ಧೂಳು ನಮಗೆ ಮಣಿಯ ಪ್ರಕಾಶ ಆಗಲಿಕ್ಕೆ ಪ್ರತಿಬಂಧಕ.
ಹೇಳೋ ತಾತ್ಪರ್ಯ -ಆ ಧೂಳು
ಮಣಿಯ ಪ್ರಕಾಶತ್ವ ಅನ್ನೋ ಗುಣಕ್ಕೆ ಯಾವ ಚ್ಯುತಿಯನ್ನೂ ತಂದಿಲ್ಲ. ಆ ಪ್ರಕಾಶದ ಉಪಯೋಗ ಪಡೆಯುವ ನಮಗೆ ಪ್ರತಿಬಂಧಕ.
ಆ ಧೂಳಿನಿಂದ ಮಣಿಯ ಸ್ವಾಭಾವಿಕ ಪ್ರಕಾಶಕ್ಕೆ ಯಾವ ಕುಂದು ಕೊರತೆಯೂ ಬಂದಿಲ್ಲ.
ಆದನ್ನು ವ್ಯಕ್ತಗೊಳಿಸಿಕೊಳ್ಳುವ ನಮಗೆ ಪ್ರತಿಬಂಧಕ ಅಷ್ಟೇ ಅದು.
ದೇವ ಪೂಜಾ ಕಾರ್ಯದಲ್ಲಿ ಅಡ್ಡಿ ತರೋದೇ ಕಲಿಯ ಮುಖ್ಯ ಕೆಲಸ /ಉದ್ದೇಶ.ಸಾಲಿಗ್ರಾಮದಲ್ಲಿ ನಿತ್ಯ ಭಗವಂತನ ಸನ್ನಿಧಾನ. ಆಹ್ವಾನ, ಅಂಗನ್ಯಾಸ ಯಾವುದೂ ಬೇಕಾಗಿಲ್ಲ. ಆದರೆ ಅಲ್ಲಿಯ ಸನ್ನಿಧಾನ ವ್ಯಕ್ತ ಆಗಲಿಕ್ಕೆ ಕಲಿ ಪ್ರತಿಬಂಧಕನಾಗಿ ಕೂತಿರ್ತಾನೆ. ಆದರ ನಿವಾರಣಕ್ಕಾಗಿ ತಾವು ಉದಾಹರಿಸಿದ ಶ್ಲೋಕ.
ಜೊತೆಗೆ ದೇವಪೂಜಾ ಕಾರ್ಯದಲ್ಲಿ ಅಥವಾ ನಿರ್ಮಾಲ್ಯ ವಿಸರ್ಜನೆ ಸಮಯದಲ್ಲಿ ನಾವು ಮೊದಲಿಗೆ ಒಂದು ಅಭಿಷೇಕ ಮಾಡಿ, ಆ ಅಭಿಷೇಕ ನೀರನ್ನು ಪ್ರೊಕ್ಷಣೆ ಮಾಡದೆ ಹಾಗೇ ಪಾತ್ರೆಯಲ್ಲಿ ಹಾಕಿಬಿಡ್ತೀವಿ.
ಕಲಿ ಮೊದಲಾದ ಪ್ರತಿಬಂಧಕಗಳ ಪರಿಹಾರಕ್ಕೆ ಅದು.🙏🏽🙏🏽