*🌹🍀ವಧು-ವರ🍀🌹*
*ಆಯ್ಕೆ ಹೇಗಿರಬೇಕೂ....*.?
ಒಂದು ಚಿಂತನ.
ಶ್ರೀಸುಗುಣವಿಠಲ.
🍀🌹🌸🌹☘🌹🌸🌺🌷🌲ಸಕಲತತ್ವಾಭಿಮಾನಿ ದೇವತಾ ಸನ್ನೀಧಾನಯುಕ್ತವಾದ ಲಗ್ನಮಂಟಪದ ಮಧ್ಯದಲ್ಲಿ ಲಕ್ಷ್ಮೀನಾರಾಯಣರ ಸನ್ನಿಧಾನ ವಿಷೇಶಯುತರಾಗಿ ಮಂಗಳಮಯವಾಗಿ ಶೋಭಿಸುವ ...ವಧು-ವರ...ಇವರುಗಳ ಆಯ್ಕೆಯ ವಿಚಾರವೂ ತುಂಬಾ ಗಮನೀಯವೂ ಗಮನಾರ್ಹವೂ ಆಗಿದೆ...ಈ ನಿಟ್ಟಿನಲ್ಲಿ ಯೋಚಿಸುವಿಕೆ ಕೆಲವರಿಗೆ ವಿಲಕ್ಷಣ ಎನಿಸಿದರೂ ಇದು..ವಾಸ್ತವ ಸತ್ಯ!..
ಎಂದು ಶಾಸ್ತ್ರಾದಿ ಪುರಾಣಗಳ ಇತಿಹಾಸಗಳ ಮಾತು.
ಇಂದಿನ...ಎಲ್ಲಾರೀತಿಯಲ್ಲಿ ಯೋಚಿಸುವುದಾದರೇ ಕಲಬೆರೆಕೆಯ ಈ ಕಲಿಯುಗದ ...ಆಧುನಿಕತೆಯ ...ತಾಂತ್ರಿಕ ಯಾಂತ್ರಿಕ ..ಜೀವನಗಳ ಭರಾಟೆಗಳ ಮೋಹಕ್ಕೆ ಪರವಶರಾದ ಮುಕ್ಕಾಲು ಭಾಗದಷ್ಟು ಜನಸಮುದಾಯವು...ಈವಿಷಯದ ಆಯ್ಕೆಬಂದಾಗ...ಸನಾತನ,ಸಂಸ್ಕೃತಿ, ಸಂಸ್ಕಾರಯುತ ಜೀವನ, ಧಾರ್ಮಿಕತೆ, ವೈಜ್ಞಾನಿಕ ಆಧಾರಿತವಾಗಿಯೇ ರೂಪಿತ ಸಂಪ್ರದಾಯ, ನೀತಿ ನಿಯಮಾದಿಗಳು,..ಆಚರಣೆಯ ಪದ್ದತಿ ಅನುಷ್ಠಾನಗಳನ್ನು .....ಅವಹೇಳನಮಾಡಿ...ಆಧುನಿಕತೆಯ ಆಡಂಬರಾದಿಗಳಿಗೆ ತನು-ಮನ-ಧನ ವನ್ನೂ ವ್ಯಯ ಮಾಡುತ್ತಾ....ಜೀವನದಲ್ಲಿ ಶಾಂತಿ-ನೆಮ್ಮದಿ ಗಾಗಿ ಪರಿತಪಿಸುವ ಪ್ರಮಾದವನ್ನು ತಂದುಕೊಳ್ಳುವ ಪ್ರಸಂಗಗಳೇ ಜಾಸ್ತಿಯಾಗುತ್ತಿವೆ.!
ಇದೆಲ್ಲಾ ಏಕೇ ಎಂದಾಗ...ಮುಂದಿನ ಕೌಟುಂಬಿಕ ಸಾಮರಸ್ಯದ ಸವಿಯನ್ನು ಸವಿಯುವ ದೀರ್ಘಕಾಲದ ದಾಂಪತ್ಯ ಜೀವನಕ್ಕೆ ಕಾಲಿಡುವ ...ವದು-ವರರಲ್ಲಿ ಗಮನಿಸಬೇಕಾದ ಅಂಶಗಳೇನೂ..ಎಂಬುದರತ್ತಾ...ಚಿಂತನೆ ಅನಿವಾರ್ಯ. ವಿಧ್ಯೆ-ಉಧ್ಯೋಗ...ಇಹಲೋಕದ ಹೊಟ್ಟೆಪಾಡಿ ಜೀವನ ನಿರ್ವಣೆಗೆ ಅವಶ್ಯ ನಿಜ! ಅದೇ ಜೀವನವಲ್ಲಾ...ತಾನೆ? .ಮಾನವ ಜೀವಿಯಾಗಿ ಹುಟ್ಟಿ ಇಹದಲ್ಲಿ..ಪರೋಪಕಾರ, ಪ್ರಾಮಾಣಿಕತೆ, ಸಹಕಾರ, ಸಹಬಾಳ್ವೆ, ತಾಳ್ಮೆ, ದೇಶಾಭಿಮಾನ, ನಯ ವಿನಯ, ಹಿರಿಯರಿಗೆ ಗೌರವ, ಆದರ, ಸನ್ಮಾರ್ಗದಲ್ಲಿ ಪ್ರವೃತ್ತಿ, ಸ್ನೇಹ ಪ್ರೇಮ, ಒಲವು....ಇನ್ನೂ ಮುಂತಾದ ಕೆಲಗುಣಗಳು ..ಅವರ ಉತ್ತಮ ಜೀವನಕ್ಕೇ ಪೂರ್ವಾರ್ಜಿತವಾಗಿಯಾದರೂ ಅಥವಾ ಸಂಸ್ಕಾರ ಯುತರಾಗಿ ಸಮ್ಮಿಳನವಾಗಿರುವುದು ...ಅವಶ್ಯವಾಗಿದ್ದೂ..ಇಂಥವರಿಂದ ಸುಸಂಸ್ಕೃತ ಪೀಳಿಗೆಗೆ ನಾಂದಿ ಯಾಗಿರುತ್ತದೆ.
ಇನ್ನೂ ಪರ ಸಾಧನೆ....ಬಗ್ಗೆ ಹೇಳುವುದಾದರೇ...ಆಸ್ತಿಕ/ನಾಸ್ತಿಕ ರೆನ್ನದೇ..ಎಲ್ಲರೂ ಜಗತ್ತಿನಲ್ಲಿ ಒಂದು ಅತ್ಯಧ್ಭುತ ಶಕ್ತಿ ..ಇದೇ ಅದೇ ಜಗತ್ತಿನ ರುವಾರಿ..! ಎಂಬುದನ್ನು ಪ್ರತಿಯೋಬ್ಬರೂ ಒಪ್ಪಿದ ವೈಜ್ಞಾನಿಕ ಸತ್ಯ! .
ಅದನ್ನೇ ಭಗವಂತ, ವಿಷ್ಣು,ಶಿವ, ಹಾಗೇ ಅವರವರ ಧರ್ಮದನುಸಾರ ಭಗವಂತನನ್ನು ನಂಬಿ ಆರಾಧಿಸುವ ಪರಿಪಾಠ..!
ಅವರವರ ಧರ್ಮದನುಸಾರ ...ಪ್ರತಿಯೊಬ್ಬರೂ ವರ್ತಿಸಿದಾಗ ಅನುಸರಿಸಿದಾಗ...ಭಗವಧ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ...ಸ್ವಧರ್ಮದ ಅನುಷ್ಠಾನದಿಂದ ಸ್ವರ್ಗಾನಂದವನ್ನೇ ಕಾಣಲು .ಸಾಧ್ಯ! ..ಇದು ಸರಕಾರವೂ ಒಪ್ಪಿರುವ ಮಾತು ! ಹಾಗಾಗಿ ಅವರವರ ಧರ್ಮಾಚರಣೆಗೆ ಮಾನ್ಯತೆ ನೀಡಿದೆ.! ಹೀಗಿರುವಾಗ..
ಯಾವಧರ್ಮವೂ..
ಅನೈತಿಕತೆಯನ್ನೂ, ಅಪ್ರಮಾಣಿಕತೆಯನ್ನು, ಕ್ರೂರತ್ವವನ್ನೂ , ಅರಿಷಡ್ವರ್ಗಗಳ ಅಟ್ಟಹಾಸವನ್ನು ಇತರೆ ದುಷ್ಟ ಕಾರ್ಯಗಳನ್ನು ಸಾಮಾನ್ಯವಾಗಿ ಪ್ರಚೋದಿಸುವುದಿಲ್ಲಾ..! .ಹಾಗಾಗಿ ಪ್ರತಿಯೊಬ್ಬರೂ ಧಾರ್ಮಿಕರಾಗಿರಬೇಕಾದುದು ಅನಿವಾರ್ಯ, ಅವಶ್ಯವೂ ಆಗಿದ್ದು..ಇದನ್ನು ವಧುವರರಲ್ಲಿಯೂ ಕಾಣಬೇಕಾದ್ದೂ...ಅವಶ್ಯ!.
ಇನ್ನೂ ..ಧಾರ್ಮಿಕ ಪ್ರವೃತ್ತಿಯುಳ್ಳ ಅದನ್ನೇ ವೃತ್ತಿಯಾಗಿವುಳ್ಳ ...ಪುರೋಹಿತರು, ಯಾಜ್ಞಿಕರು, ಸುಧಾಪಂಡಿತರು, ವಿಧ್ವಾಂಸರು,...ಆಚಾರ್ ವೃತ್ತಿಯವರು....ನಮಗೇ ಬೇಕಾದ ಅವಶ್ಯಗುಣಧರ್ಮಗಳು ಪರಹಿತಸಾಧನಾ ಸಾಂಗತ್ಯವೂ...ಇರುವುದರೊಂದಿಗೆ....ಇವರು ಸಾಫ್ಟವೇರ್/ಹಾರ್ಡವೇರ್/ ಗಳಲ್ಲದಿದ್ದರೂ...ಅವರಿಗಿಂತ ಹೆಚ್ಚುಪಟ್ಟೂ ಆನಂದ ಸಂತೃಪ್ತ ಜೀವನ ವೈಭೋಗ ಜೀವನವನ್ನೇ ನಡೆಸುತ್ತಾರೆ..ಅಧಿಕ ಹಣಸಂಪಾದನೆ..ಐಶ್ವರ್ಯಾದಿಗಳು...ಕ್ಷಣಿಕ ಸಂತೋಷಾದಿಗಳಿಗೆ ಪೂರಕವೇ ಹೊರತು ..ಜೀವನದ ಶಾಶ್ವತ ಆನಂದ ಸಂತೃಪ್ತ ಜೀವನಕ್ಕಲ್ಲಾ..! ಭಗವಂತನಿಗೆ ಪ್ರಿಯರಾದ ಧಾರ್ಮಿಕ ...ಸಜ್ಜನರ ಯಾವ ಉಧ್ಯೋಗ /ರಂಗದಲ್ಲೇ ಇರಲಿ ಅವರಲ್ಲಿಯ ಭಗವತ್ಪ್ರೇಮ, ಸ್ವಧರ್ಮಾನುಷ್ಠಾನ, ಸಂಸ್ಕಾರಾದಿಗಳು..ಇವುಗಳ ಪರಿಗಣನೆಯು ಅವಶ್ಯವಾಗಿದ್ದು...ಇದರಿಂದ..ಇಹ-ಸಾಧನೆಗಳೂ ಸಾಧ್ಯವಾಗಿ...ಸುಭಧ್ರ ಸುಖೀ ಕುಟುಂಬ ಸಾಗಿ ಸುಸಂಸ್ಕೃತ ಸಮಾಜ ನಿರ್ಮಾಣ ವಾಗಲು ಸಾಧ್ಯ!
ಹಾಗೇ ಪತಿಪ್ರಾಪ್ತಿಗಾಗಿ..
*ಹೇ ಗೌರೀ ಶಂಕರರ್ದಾಂಗಿ ಯಥಾತ್ವಂ ಶಂಕರ ಪ್ರಿಯೆ|*
*ತಥಾಮಂ ಕುರುಕಲ್ಯಾಣಿ ಕಾಂತ ಕಾಂತಾ ಸುದುರ್ಲಭಮ್||*
ಎಂದೂ.....ಮತ್ತೂ..ಉತ್ತಮ ಪತ್ನಿ ಪ್ರಾಪ್ತಿಗಾಗಿ.....
*ಪತ್ನೀಂ ಮನೋರಮಾಂ ದೇಹಿ ಮನೋವೃತ್ತಾನು ಚಾರಿಣೀಂ*|
*ತಾರಿಣೀಂ ದುರ್ಗಸಂಸಾರಂ ಸಾಗರಸ್ಯ ಕುಲೋಧ್ಭವಾಮ್*||
ಎಂದು ಪ್ರಾರ್ಥಿಸುವುದರ ಮೂಲಕ ಇಂದಿನ ಯುವಪೀಳಿಗೆಯಲ್ಲಿ ಎಲ್ಲಾ ಪೋಷಕವರ್ಗದವರೂ, ಎಲ್ಲಾ ಧರ್ಮದವರೂ,..ಯಥಾಶಕ್ತಿ ಯಥಾಮತಿಯಾಗಿ ...ಈ ಎಲ್ಲಾ ಉತ್ತಮ ಸಂಸ್ಕಾರದ ಗುಣಗಳನ್ನು ಉತ್ತಿ-ಬಿತ್ತಿ-ಬೆಳೆಸುವುದರ ಮೂಲಕ ಲಗ್ನಮಂಟಪದಲ್ಲಿ ತಾತ್ವಿಕದೇವತಾ ಸನ್ನಿಧಾನವುಂಟಾಗಿ...ನಿರಾಡಂಬರವಾಗಿ ...ಭಕ್ತಿ ಜ್ಞಾನ ಶ್ರಧ್ಧಾಪೂರ್ವಕವಾಗಿ...ನವಜೀವನಕ್ಕೆ ಕಾಲಿಡುವ ವಧು-ವರರಲ್ಲಿ ಸಾಕ್ಷಾತ್ ಆಗಿ ಲಕ್ಷ್ಮಿನಾರಾಯಣರ ಧೈವೀಕ ಅಂಶವು ಪ್ರಾಧುರ್ಭವಿಸಿ ...ಸಕಲರಿಗೂ ಸನ್ಮಂಗಳವನ್ನುಂಟುಮಾಡುವ...ವಿವಾಹಮಹೋತ್ಸವಗಳನ್ನು ಎಲ್ಲಾರು ಮಾಡುವಂತಾಗಲಿ...ಈ ನಿಟ್ಟಿನಲ್ಲಿ...ನಮ್ಮೆಲ್ಲರ ವೃತ್ತಿ-ಪ್ರವೃತ್ತಿಗಳು, ತನು-ಮನ-ಧನಾದಿ ಏಶ್ವರ್ಯಾದಿಗಳು ಸಾರ್ಥಕ್ಯಗೊಂಡು ..ಸಂತೃಪ್ತಿಯ ಸಾಮೀಫ್ಯವನ್ನು ಹೊಂದಿ ಸುಖವಾಗಿ ಬಾಳಿ, ಇತರರನ್ನೂ ಬಾಳಿಸುವಂತಾಗಲಿ....ಎಂಬ ಆಶಯದೊಂದಿಗೆ...ಯಥಾಮತಿ ಚಿಂತನವನ್ನು...ಶ್ರೀಗುರುಗಳಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.
🙏🌹🙏🌹🙏🌹🍀💐🌸🙏