ನವಮಿ

0 0 0
                                    


*🌷ಶ್ರೀರಾಮ ಚಿಂತನ 🌷*

*🌹ಶ್ರೀರಾಮ ವಂದನೆ 🌹*

*ಭೂಷಾರತ್ನಂಭುವನವಲಯಸ್ಯಾ ಖಿಲಾಶ್ಚರ್ಯರತ್ನಂ |*
*ಲೀಲಾ ರತ್ನಂ ಜಲಧಿದುಹಿತುರ್ದೇವತಾಮೌಲಿರತ್ನಮ್ |*
*ಚಿಂತಾರತ್ನಂ ಜಗತಿ ಭಜತಾಂ ಸತ್ಸರೋಜದ್ಯುರತ್ನಂ |*
*ಕೌಸಲ್ಯಾಯಾ ಲಸತು ಮಮ ಹೃನ್ಮoಡಲೇ ಪುತ್ರರತ್ನಮ್ ||*

ಭೂಮಂಡಲಕ್ಕೆ ಭೂಷಾಮಣಿಯಾದ, ಅಖಿಲ ಆಶ್ಚರ್ಯಗಳ ಚೂಡಾಮಣಿಯಾದ, ಸಾಗರಕುವರಿಯಾದ ಮಹಾಲಕ್ಷ್ಮಿಗೆ ವಿಲಾಸಮಣಿಯಾದ, ದೇವತಾಚೂಡಾಮಣಿಯಾದ, ಸೇವಿಸುವ ಜನರಿಗೆ ಚಿಂತಾಮಣಿಯಾದ, ಸಜ್ಜನ ಕಮಲಗಳಿಗೆ ದ್ಯುಮಣಿಯಾದ, ಕೌಸಲ್ಯೆಗೆ ಪುತ್ರಮಣಿಯಾದ ಶ್ರೀರಾಮನು ನನ್ನ ಹೃದಯಮಂಡಲದಲ್ಲಿ ರಾರಾಜಿಸಲಿ.

*-ಸಂಗ್ರಹರಾಮಾಯಣ*

*ಶ್ರೀರಾಮನವಮಿ ಶುಭಾಶಯಗಳು*

*|| ಶ್ರೀಕೃಷ್ಣಾರ್ಪಣಮಸ್ತು ||*

*ಶ್ರೀಐತರೇಯ......*

*ಶ್ರೀರಾಮಚಂದ್ರದೇವರ ಅನುಕರಣೀಯ ಆದರ್ಶ*
*( ಶ್ರೀರಾಮನವಮಿ ವಿಶೇಷ ಸಂಚಿಕೆ )*

ಧರ್ಮಕಾರ್ಯಗಳನ್ನು ಆಚರಿಸಬೇಕಾದ ಸಂದರ್ಭದಲ್ಲಿ ನಾವು ನಾಳೆ. ನಾಳಿದ್ದು ಮಾಡಿದರಾಯಿತು ಎನ್ನುವುದುಂಟು ಆದರೆ *ಶ್ವಃ ಕಾರ್ಯ ಅದ್ಯ ಕುರ್ವಿತ* ಎಂಬ ಉಕ್ತಿಯಂತೆ ನಾಳೆ ಮಾಡಬೇಕಾದ ಧರ್ಮವನ್ನು ಇಂದೇ. ಈಗಲೇ ಮಾಡಿ ಮುಗಿಸಬೇಕಾದುದು. ಅವಶ್ಯವಾಗಿದೆ ಇದನ್ನು ಶ್ರೀರಾಮಚಂದ್ರನು ಅಕ್ಷರಶಃ ಪಾಲಿಸಿ ಆದರ್ಶ ಪ್ರಾಯನಾಗಿದ್ದಾನೆ .

ದಶರಥ ಮಹಾರಾಜನು ತನ್ನ ಜ್ಯೇಷ್ಠ ಸುಪುತ್ರನಾದ ಶ್ರೀರಾಮಚಂದ್ರನಿಗೆ ಹಿರಿಯರ ವೃದ್ಧರ ಶಾಸ್ತ್ರವೇತ್ತರಾದ ಬ್ರಾಹ್ಮಣರ ಅನುಮತಿಯನ್ನು ತೆಗೆದುಕೊಂಡು ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಲು ಸಿದ್ಧನಾಗುತ್ತಾನೆ . ಅಷ್ಟರಲ್ಲಿ ಕೈಕೇಯಿಯ ಈ ವಿಷಯವನ್ನು ತಿಳಿದುಕೊಂಡು , ದಶರಥಮಹಾರಾಜನು ತನಗೆ ಕೊಟ್ಟ ವರಗಳ ಬಗ್ಗೆ ಅವನಿಗೆ ತಿಳಿಸಿ ಆ ವರಗಳನ್ನು ಸತ್ಯಗೊಳಿಸಬೇಕೆಂದು ತಿಳಿಸಿದಾಗ ಶ್ರೀರಾಮಚಂದ್ರನು ವನವಾಸಕ್ಕೆ ಹೊರಡಲು ಸಿದ್ಧನಾಗಿ ತಂದೆಯಾದ ದಶರಥನ ಪಾದಸ್ಪರ್ಷಮಾಡಿ ಅವನ ಅನುಮತಿಯನ್ನು ಬೇಡುತ್ತಾನೆ .ಆಗ ದಶರಥ ಮಹಾರಾಜನು ಶ್ರೀರಾಮಚಂದ್ರನು ವನವಾಸಕ್ಕೆ ಸಿದ್ಧನಾಗಿರುವುದನ್ನು ನೋಡಿ ದೈನ್ಯದಿಂದ ಮುಂದೆ ಹೇಳುವ ಮಾತನ್ನು ಆಡುತ್ತಾನೆ .

*ಅದ್ಯತ್ವಾನೀಂ ರಜನೀಂ ಪುತ್ರ ಮಾಗಚ್ಚ ಸರ್ವಥಾ |*
*ಏಕಹಂ ದರ್ಶನೇ ನಾಪಿ ಸಾಧು ತಾವಚ್ಚರಾಮ್ಯಹಮ್ ||*
*ಶ್ರೀವಾಲ್ಮೀಕಿರಾಮಾಯಣ ಆಯೋಧ್ಯಾಕಾಂಡ*

ಆಚರಣೆ ಮಹತ್ವ ಮತ್ತು ಸಂಸ್ಕೃತಿಯ ವೈವಿಧ್ಯತೆWhere stories live. Discover now