🚩 *ಬ್ರಾಹ್ಮಣ ಪ್ರಿಯ* 🚩
🕉️ *ಪ್ರಾಣಾಯಾಮ ಎಂದರೇನು?* 🕉️
🛑ಶ್ವಾಸೋಚ್ವಾಸ ಇಲ್ಲದೆ ಯಾವುದೇ ಜೀವರಾಶಿಗಳಿರಲು ಸಾಧ್ಯವಿದೆಯೇ.
🛑ಸಸ್ಯಗಳಿಗೂ ಶ್ವಾಸೋಚ್ವಾಸಗಳಿವೆ.
🛑ಇದರ ಆದಾರದಲ್ಲೇ ಆಯುಷ್ಯ ನಿಂತಿರುವುದು.
🛑ಪ್ರಾಣಿಗಳ ಶ್ವಾಸೋಚ್ವಾಸಗಳು ಬೇರೆಬೇರೆ ರೂಪದಲ್ಲಿದೆ. ಮನೆಯಲ್ಲಿ ಸಾಕುವ ನಾಯಿ,ಬೆಕ್ಕು, ಆಕಳುಗಳ ಆಯುಷ್ಯ ಅಬ್ಬಾ ಎಂದರೆ ಹದಿನೈದು ಹದಿನಾರು ವರ್ಷ.
🛑ಅದರಲ್ಲಿ ಬೆಕ್ಕಿನದ್ದು ಬಹಳ ಕಡಿಮೆ.
🛑ಆಕಳು 22ವರ್ಷ ಬದುಕಿದ್ದೂ ಇದೆ.
🛑ಇನ್ನು ಮನುಷ್ಯನದ್ದು. ನಿಯಮ 120ವರ್ಷ.
🛑ಆದರೆ ಬದುಕುವುದು ಸಾಮಾನ್ಯವಾಗಿ ಎಂಭತ್ತೇ ವರ್ಷ.ನೂರು ದಾಟಿದವರೂ ಇದ್ದಾರೆ ಮತ್ತು ಐವತ್ತು ದಾಟದವರೂ ಇದ್ದಾರೆ ಅನ್ನಿ.
🛑ಹೀಗೆಲ್ಲಾ ವ್ಯತ್ಯಾಸಕ್ಕೆ ಉಸಿರಾಟವೇ ಕಾರಣ.
🛑ನಮ್ಮ ಪೂರ್ವಜರು ಎಷ್ಟು ಮುಂದುವರಿದಿದ್ದರು ಎಂದರೆ ಈ ಶ್ವಾಸೋಚ್ವಾಸದ ವಿಚಾರದಲ್ಲಿ ಬಹಳ ಅಧ್ಯಯನ ಮಾಡಿದ್ದರು.
🛑ಇದರ ನಿಯಂತ್ರಣಕ್ಕಾಗಿ ಯೋಗಾಭ್ಯಾಸ ಶುರುವಾಯಿತು. ಅದರಲ್ಲಿ ಪ್ರಾಣಾಯಾಮ ಕ್ರಿಯೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ.
🛑ಶ್ವಾಸೋಚ್ವಾಸದ ನಿಯಮವನ್ನು ಪ್ರಾಣಾಯಾಮದ ಅಭ್ಯಾಸದ ಮೂಲಕ ರೂಢಿಸಿಕೊಳ್ಳಬಹುದು.
🛑ಪ್ರಾಣ ಎಂದರೆ ಆಮ್ಲಜನಕ. ಇದರ ಸಂಚಾರವೇ ಆಯಾಮ.
🛑ಹಾಗಾಗಿ ಪ್ರಾಣ + ಆಯಾಮ= ಪ್ರಾಣಾಯಾಮವಾಗುತ್ತದೆ.
🛑ನಾವು ಕೇವಲ.ಮೂಗಿನ.ಮೂಲಕ ವಾತಾವರಣದ ಗಾಳಿಯನ್ನು ಹೀರಿಕೊಳ್ಳುತ್ತೇವೆ.
🛑ಇದರಲ್ಲಿ ದೂಳು,ವಿಷಾನಿಲಗಳೂ ಸೇರಿಕೊಂಡಿರುತ್ತದೆ.
🛑ಒಳಗಡೆ ಈ ವಾಯು ಹೋದನಂತರ ಒಳಗಡೆ ಅಂದರೆ ದೇಹದಲ್ಲಿ ಇದರ process. ನಡೆಯುತ್ತದೆ.
🛑ಅಲ್ಲಿ ಶುದ್ಧವಾದ oxygen ಮಾತ್ರ ಒಳಸೇರುತ್ತದೆ. ಇದುವೇ ಪ್ರಾಣವಾಯು.
🛑ಇದು ಕೇವಲ ಶ್ವಾಸಕೋಶಕ್ಕೇ ಸಿಮಿತವಾಗಿಲ್ಲ.
🛑ದೇಹದ ಸಕಲ ಭಾಗಕ್ಕೂ ವಾಯು ಸಂಚಾರಬೇಕಾಗುತ್ತದೆ.
🛑ಇದರ ವಿಸರ್ಜನೆಯ ರೋಮ ಕೂಪಗಳ ಮೂಲಕವೂ ಆಗುತ್ತಿರುತ್ತದೆ.
🛑ಮೂಗಿನಲ್ಲಿ ಇಡಾ ಪಿಂಗಳಾ ಎಂಬ ನಾಡಿಗಳಿಗೆ.
🛑ಇದರಲ್ಲಿ ಒಂದರಲ್ಲಿ ತೆಗೆದುಕೊಂಡ ವಾಯುವನ್ನು ಇನ್ನೊಂದರಲ್ಲಿ ಬಿಡಬೇಕು.
🛑ಹೀಗೆ ಮಾಡಿದರೆ ಮದ್ಯದಲ್ಲಿದ್ದ ಸುಷ್ ಮ್ನಾ ನಾಡಿ ಹೀರಿಕೊಂಡು ದೇಹದ ಎಲ್ಲಾ ಭಾಗಗಳಿಗೂ ಕಳುಹಿಸುತ್ತದೆ.
🛑ಇದರ ನಿಯಂತ್ರಣ system ನ್ನು ಪ್ರಾಣಾಯಾಮದ ಮೂಲಕ ಸರಿಪಡಿಸಿ ಕೊಳ್ಳಬಹುದು .
🛑ಇನ್ನು ಈ ವಾಯುವಿನಲ್ಲಿ ಐದು ವಿಧ. ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ವಾಯುಗಳೆಂಬ ಐದು ವಿಧ. ಇದರೊಳಗೂ ಐದು ಉಪವಾಯುಗಳಿವೆ.
🛑ಅವುಗಳು ಕ್ರಮವಾಗಿ - ನಾಗ,ಕೂರ್ಮ, ಕೃಕರ, ದೇವದತ್ತ,, ಧನಂಜಯ. ಈ ಪ್ರಾಣವಾಯು ಹೃದಯದಲ್ಲೂ,, ಅಪಶನವು ಗುದ ಪ್ರದೇಶದಲ್ಲೂ, ಸಮಾನವು ನಾಭಿಯಲ್ಲೂ, ಉದಾನವೂ ಕಂಠದಲ್ಲೂ, ವ್ಯಾನವು ಶರೀರದ ಸಕಲಭಾಗಕ್ಕೂ ಸಂಚರಿಸುತ್ತದೆ.
🛑ನಾಗ ವಾಯು ವಾಗೀಂದ್ರ್ಯಕ್ಕೂ, ಕೂರ್ಮವು ಉನ್ಮೀಲನ ಕ್ರಿಯೆಗೂ, ಕೃಕರವು ಹಸಿವೆಗೂ, ದೇವದತ್ಯವು ಆಕಳಿಕೆ,ಬಿಕ್ಕಳಿಕೆ,ಆಲಸ್ಯಕ್ಕೂ, ,ಧನಂಜಯವು ವ್ಯಾನದ ಉಪವಾಯುವಾಗಿ ದೇಹದ ಸಕಲಭಾಗಕ್ಕೂ ಸಂಚರಿಸುತ್ತದೆ.
🛑ಹೀಗೇ ಈ ಪಂಚ ವಾಯು ಮತ್ತು ಅದರ ಉಪವಾಯು ಸೇರಿ ಹತ್ತು ವಿಧದ ವಾಯುಗಳು ಆಗುತ್ತದೆ.ಇದಲ್ಲದೆ ಮಾರುತ ( ಮಾ+ ರುದ) ಅಂದರೆ ಅಳಬೇಡ ಎಂಬ ಅರ್ಥದಲ್ಲಿ ಈ ವಾಯುವಿಗೆ ಹೆಸರು ಬಂತು.
🛑ಒದರಲ್ಲಿ 49 ವಿಧಗಳಿವೆ.
🛑ಪಂಚ ಪ್ರಾಣಗಳೂ ಸೇರಿ ಈಗ 54ರೂಪದ ವಾಯುಗಳಾಯಿತು.
🛑ಈ ವಾಯುಗಳೆಲ್ಲಾ ದೇಹದೊಳಗೆ ಅಷ್ಟ ದಿಕ್ಪಾಲತ್ವ,ಅವರ ಉಪ ದಿಕ್ಪಾಲತ್ವಗಳ ಕೆಲಸ ಮಾಡುತ್ತವೆ. ಯಾವಾ ಪ್ರಾಣದ ಆಯಾಮಗಳು ಸರಿಯಾಗಿರುತ್ತದೋ ಅಂತವರಿಗೆ ಆಯುಸ್ಸಿನ ಲೆಕ್ಕಾಚಾರವಿಲ್ಲ.ಅಂದರೆ ಸಾವಿರಾರು ವರ್ಷವೂ ಬದುಕಬಹುದು.
🛑ವಸಿಷ್ಟಾದಿ ಋಷಿಗಳು ಈಗಲೂ ಸೂಕ್ಷ್ಮ ಶರೀರದಲ್ಲಿ ಬದುಕಿರುವುದು ಈ ಪ್ರಾಣದ ಆಯಾಮ ನಿಯಮದಲ್ಲಿ.ಅಂತೂ ನಾವೂ ಅವರಷ್ಟಲ್ಲದಿದ್ದರೂ ಬದುಕಿರುವವರೆಗೆ ಆರೋಗ್ಯಪೂರ್ಣವಾಗಿರಲು ಪ್ರಾಣಾಯಾಮ ನಿಯಮವನ್ನು ಪಾಲಿಸಿದರೆ ಉತ್ತಮ. ಇನ್ನೊಂದು ಮುಖದಲ್ಲಿ ನೋಡಿದಾಗ, ಈ ಪ್ರಾಣದ ಆಯಾಮ ಕ್ರಿಯೆ ರೂಢಿಸಿಕೊಂಡರೆ ತ್ರಿಕಾಲ ಜ್ಞಾನ ಪ್ರಾಪ್ತಿಯೂ ಆಗುತ್ತದೆ.ಇದಕ್ಕೆಲ್ಲಾ ನಿತ್ಯ ಅಭ್ಯಾಸ ಬೇಕು.ಹಾಗಾಗಿ ಭಾರತದ ಈ ಯೋಗ ಕ್ರಿಯೆಗೆ ಇಷ್ಟು ಮಹತ್ವ ಬಂದದ್ದು.
🛑ಯೋಗವು ಯಾವುದೇ ಮತ ಸಂಪ್ರದಾಯಗಳ. ಸಿಮಿತಕ್ಕಿಲ್ಲ.ಇದು ಸಂಪೂರ್ಣವಾದ ವೈದಿಕ ಸನಾತನ ಧರ್ಮದ ಪಾಲನೆಗಾಗಿಯೇ ಇರುವಂತದ್ದು. ಇದಕ್ಕಾಗಿಯೇ ಪುರಾತನರು ಶರೀರ ಮಾಧ್ಯಂ ಖಲು ಧರ್ಮ ಸಾಧನಂ.ಎಂದಿದ್ದಾರೆ.
🔯 *ಬ್ರಾಹ್ಮಣ ಪ್ರಿಯ* 🔯
🪀