:
*ಸಹೃದಯರೇ 🙏,*
ನೋಡೀ ಸ್ವಸ್ವಶಾಖೋಕ್ತಮಾರ್ಗದಿಂದ ಸಂಸ್ಕಾರಗಳನ್ನು ಹೊಂದಿದ *ದ್ವಿಜ* ನಾದ ಅಧಿಕಾರಿಯು ಉಪನಯನಸಂಸ್ಕಾರದಿಂದ *ದ್ವಿಜತ್ವ* ವನ್ನು ಪಡೆದುಕೊಂಡು *ಪಂಚರಾತ್ರೋಕ್ತ* ಮಾರ್ಗದಿಂದ ನಾವು ಹೆಮ್ಮೆಪಡುವಂತಹ *ವಿಷ್ಣುದೀಕ್ಷೆ* ಯನ್ನು ಗ್ರಹಣಮಾಡಬೇಕು.
ದೀಕ್ಷಾಗ್ರಹಣದ ದಿನ ಉಷಃಕಾಲದಲ್ಲಿ ಎದ್ದು ವಿಧಿಪ್ರಕಾರವಾಗಿ ಮತ್ತು ಶ್ರದ್ಧಾಪುರ್ವಕವಾಗಿ ಶೌಚಾದಿಗಳನ್ನು ಮಾಡಿಕೊಂಡು ಸ್ನಾನಮಾಡಬೇಕು. ನಂತರ ಆವನು ಮೂಲಮಂತ್ರದಿಂದ ಮೃತ್ತಿಕೆಯನ್ನು ಅಭಿಮಂತ್ರಿಸಿ ಎಡಗೈಯಲ್ಲಿಟ್ಟುಕೊಂಡು ಬಲಗೈಯಿಂದ ದೇಹದಲ್ಲಿ 12ಪುಂಡ್ರ ಅಥವಾ ನಾಮಗಳನ್ನು ಧರಿಸಬೇಕು. ಈ ಕ್ಷತ್ರಿಯನಾಗಿದ್ದಲ್ಲಿ 4ಪುಂಡ್ರಗಳನ್ನೂ ,ವೈಶ್ಯನಾಗಿದ್ದಲ್ಲಿ 2ಪುಂಡ್ರಗಳನ್ನೂ ಹಾಗೂ ಶೂದ್ರಾದಿ ಇತರರು ಮತ್ತು ಸ್ತ್ರೀಯರೂ ಹಣೆಯಲ್ಲಿ ಮಾತ್ರ ಒಂದು ಊರ್ಧ್ವಪುಂಡ್ರವನ್ನು ಧರಿಸತಕ್ಕದಾಗಿದೆಯೆಂಬುದಾಗಿ ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.*ಈ ಊರ್ಧ್ವಪುಂಡ್ರಧಾರಣಾ ಕ್ರಮವನ್ನು ಮುಂದಿನ ಸದ್ವಿಚಾರದಲ್ಲಿ ನೋಡುವಾ....*
"""""""""""""""""""🙏""""""""""""""""""""""
🌟. *ತೀರ್ಥ*. ⭐
: *🌷ಸದ್ವಿಚಾರ🌷*
""""""""""""""""""""🔥""""""""""""""""""""
*ಸಹೃದಯರೇ 🙏,*ನೋಡಿ ವೇದಾಧಿಕಾರವಿಲ್ಲದ *ಶೂದ್ರಾದಿ ಸಮಸ್ತ ಸ್ತ್ರೀಯರು* ಹಣೆಯಲ್ಲಿ ಒಂದು ಊರ್ಧ್ವಪುಂಡ್ರವನ್ನು ಮಾತ್ರ ಧರಿಸತಕ್ಕದ್ದು.
*ವೈಶ್ಯ* ನಾದವನು ಹಣೆ ಮತ್ತು ಎದೆಯ ಮೇಲೆ ಎರಡು ಪುಂಢ್ರಗಳನ್ನು , *ಕ್ಷತ್ರಿಯ* ನಿಗೆ ಇವೆರಡರೊಂದಿಗೆ ಎರಡು ಬಾಹುಗಳಲ್ಲಿ (ಒಟ್ಟು ನಾಲ್ಕು) ಧರಿಸಬೇಕು.
ಆದರೆ *ಬ್ರಾಹ್ಮಣ* ನಾದವನು ಲಲಾಟ (ಹಣೆ)ದಲ್ಲಿ ದಂಡದಂತಿರುವ ಪಂಢ್ರ, ಹೃದಯ(ಎದೆ)ದಲ್ಲಿ ಪದ್ಮಾಕಾರದಂತಿರುವ ಪುಂಢ್ರಗಳು, ನಾಭಿಯ ಮೇಲ್ಭಾಗ, ಎರಡು ಕುಕ್ಷಿಗಳು (ಹೊಟ್ಟೆಯ ಎಡಬಲಪಾರ್ಶ್ವಗಳು), ಕಂಠ, ಎರಡುಕರ್ಣ ಮೂಲಗಳು (ಎಡಬಲ ಕಿವಿಗಳ ಕೆಳಭಾಗ) , ಬಾಹುಗಳೆರಡು(ಎಡ ಬಲ ಭುಜಗಳು), ಬೆನ್ನು (ಬೆನ್ನಿನ ಕೆಳಭಾಗದಲ್ಲಿ ಟೊಂಕದ ಮೇಲೆ), ಶಿರಸ್ಸು(ನೆತ್ತಿ) ಹೀಗೆ ದ್ವಾದಶ 12ಸ್ಥಾನಗಳಲ್ಲಿಯೂ ಚೂಪಾದ ತುದಿಯಿರುವ ದೀಪಜ್ವಾಲೆಯಂತಿರುವ ಪುಂಢ್ರಗಳನ್ನೇ ಧರಿಸಬೇಕೆಂಬುದು ಇಂದಿನ ಸದ್ವಿಚಾರದ ಸಂದೇಶವಾಗಿದೆ."""""""""""""""""""""🙏""""""""""""""""""""
⭐. *ತೀರ್ಥ*. 🌟
[
🌷ಸದ್ವಿಚಾರ🌷*
""""""""""""""""""""🔥"""""""""""""""""""""""""*ಸಹೃದಯರೇ 🙏,*
ನೋಡೀ ಈ *ಲಲಾಟ* ಅಂದರೆ *ಹಣೆ* ಯಲ್ಲಿ ಧರಿಸುವ *ದಂಡ* ದಂತಿರುವ ಪುಂಡ್ರವು ನಾಸಾಗ್ರದಿಂದ ಕೇಶಪರ್ಯಂತವಾಗಿಯೇ ಧರಿಸಬೇಕು. ಅಲ್ಲದೇ ಧರಿಸುವಾಗ ಮಧ್ಯದಲ್ಲಿ *ಶ್ರೀಹರಿ* ಯ ಮಂದಿರವೆಂಬ ಅನುಸಂಧಾನದಿಂದ ಛಿದ್ರಮಾಡಿಕೊಳ್ಳಬೇಕೆಂಬುದು ನಮ್ಮ *ಸಚ್ಛಾಸ್ತ್ರ* ದ ಆದೇಶವಾಗಿದೆ. ಇಲ್ಲದಿರೆ ಈ ಛಿದ್ರರಹಿತ ಪುಂಡ್ರವು ಆ *ವಿಷ್ಣು* ವಿನಲ್ಲಿ ದ್ವೇಷಹುಟ್ಟಿಸಲು ಕಾರಣವಾಗುತ್ತದೆಯಲ್ಲದೇ ಯಾರೊಬ್ಬರ ಹಣೆಯಲ್ಲಿ ಈ ರೀತಿ ಕಂಡುಬರುತ್ತದೆಯೋ ಅದನ್ನು ಹೀನವಾದ *ನಾಯಿಯಪಾದ* ವೆಂದೇ ತಿಳಿಯಬೇಕು. ಇದು *ಹರಿಮಂದಿರ* ಸಹಿತವಾದ *ಶ್ರೀವಿಷ್ಣುಪಾದ* ವಲ್ಲವೇ ಅಲ್ಲವೆಂಬುದು ನಿಶ್ಚಯ ನಿಶ್ಚಯ ನಿಶ್ಚಯವಾಗುತ್ತದೆ ಎಚ್ಚರ.
ಇಷ್ಟೇ ಅಲ್ಲದೇ ಹೀಗೆ ನಮ್ಮ ಶಾಸ್ತ್ರದಲ್ಲಿ ತಿಳಿಸಿದಂತೆಯೇ ಈ ಊರ್ಧ್ವಪುಂಡ್ರವನ್ನು ಧರಿಸದ ವನ ಮೊಗ (ಮುಖ)ವು ಸ್ಮಶಾನದಂತೆ ಅಪವಿತ್ರ ವಾದದ್ದಾಗಿದ್ದು ಅಂತಹ ಮುಖವನ್ನು ನೋಡುವ ಮಾತ್ರದಿಂದ ಸೂರ್ಯದರ್ಶನ ಅಂದರೆ ಸೂರ್ಯಾಂತರ್ಗತ ಶ್ರೀನಾರಾಯಣನನ್ನು ಸ್ಮರಿಸಿಯೇ ಶುದ್ಧನಾಗಬೇಕೆಂಬ ಕಿವಿಮಾತೇ ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.