ಮಾಘಸ್ನಾನದ ಮಹತ್ವ ದಿನಾಂಕ
ಪೌಷಮಾಸದ ಶುಕ್ಲಪಕ್ಷ ಪೌರ್ಣಿಮಾ ದಿನದಂದು ಪ್ರಾರಂಭಿಸಲ್ಪಟ್ಟ ಮಾಘಸ್ನಾನ ಮಾಘಮಾಸದ ಶುಕ್ಲಪಕ್ಷ ಪೌರ್ಣಿಮಾ ಸಮಾಪ್ತಿ ಗೊಳಿಸಬೇಕು.
ಅಥವಾ ಮಕರಸಂಕ್ರಮಣದಿಂದ ಪ್ರಾರಂಭಿಸಿ ಕುಂಭಸಂಕ್ರಮಣದವರೆಗೆ ಮಾಘಸ್ನಾನ ಮಾಡಬೇಕು.ಬ್ರಹ್ಮಚಾರಿ , ಗೃಹಸ್ಥ, ವಾನಪ್ರಸ್ಥ, ಸಂನ್ಯಾಸಿ, ಮಕ್ಕಳು, ವೃದ್ಧರು, ಸ್ತ್ರೀಯರು –ಹೀಗೆ ಪ್ರತಿಯೊಬ್ಬರೂ ಮಾಘಸ್ನಾನಕ್ಕೆ ಅಧಿಕಾರಿಗಳು.
ಮಕರ ಸಂಕ್ರಮಣದಂದು ಮನೆಯಲ್ಲಿ ಬಿಸಿನೀರಿನಿಂದ ಸ್ನಾನ ಮಾಡಿದರೂ ಆರುವರ್ಷ ಸ್ನಾನಮಾಡಿದ ಪುಣ್ಯ ದೊರಕುವುದು.
ಬಾವಿ ಇತ್ಯಾದಿಗಳಲ್ಲಿ ಮಿಂದರೆ ಹನ್ನೆರಡುವರ್ಷ ಸ್ನಾನದ ಫಲ;
ಕೆರೆಯಲ್ಲಿ ಮಿಂದರೆ ಅದಕ್ಕಿಂತ ಎರಡುಪಟ್ಟು ಫಲ;
ನದಿಯಲ್ಲಿ ಮಿಂದರೆ ನಾಲ್ಕುಪಟ್ಟು ಫಲ;
ಮಹಾನದಿಯಲ್ಲಿ ಮಿಂದರೆ ನೂರುಪಟ್ಟು ಪುಣ್ಯ;
ಮಹಾನದಿ ಸಂಗಮದಲ್ಲಿ ಮಿಂದರೆ ಇನ್ನೂ ನಾಲ್ಕುಪಟ್ಟು ಹೆಚ್ಚು ಫಲ;
ಗಂಗೆಯಲ್ಲಿ ಮಿಂದರೆ ಸಾವಿರಪಟ್ಟು ಪುಣ್ಯ;
ಗಂಗಾಯಮುನ ಸಂಗಮದಲ್ಲಿ ಮಿಂದರೆ ಅದಕ್ಕಿಂತ ನಾಲ್ಕುಪಟ್ಟು ಹೆಚ್ಚು ಪುಣ್ಯ;
ಮಕರಸಂಕ್ರಮಣದಂದು ಸಮುದ್ರಸ್ನಾನವೂ
ಅತಿ ಪ್ರಶಸ್ತವಾದದ್ದು.ಮಾಘಮಾಸದಲ್ಲಿ ಯಾವುದೇ ತೀರ್ಥದಲ್ಲಿ ಸ್ನಾನ ಮಾಡುವಾಗ ಪ್ರಯಾಗಸ್ಮರಣೆ ಮಾಡುತ್ತಿದ್ದರೆ ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದಷ್ಟು ಪುಣ್ಯ ಬರುವುದು.
ನಕ್ಷತ್ರಗಳು ಇನ್ನೂ ಮಿನುಗುತ್ತಿರುವಾಗಲೇ ಅರುಣೋದಯಕಾಲದಲ್ಲಿ ಸ್ನಾನ ಮಾಡುವುದು ಉತ್ತಮ.
ನಕ್ಷತ್ರಗಳು ಕಾಣಿಸದಾಗ ಸ್ನಾನ ಮಾಡುವುದು ಮಧ್ಯಮ.
ಸೂರ್ಯೋದಯ ಆದಮೇಲೆ ಮಾಡುವ ಸ್ನಾನ ಅಧಮ.ಮಾಘಸ್ನಾನ ಸಂಕಲ್ಪ:
ಮಾಘಮಾಸಮಿಮಂ ಪುಣ್ಯಂ ಸ್ನಾಸ್ಯೇಹಂ ದೇವ ಮಾಧವ|
ತೀರ್ಥಸ್ಯಾಸ್ಯ ಜಲೇ ನಿತ್ಯಂ ಇತಿ ಸಂಕಲ್ಪ್ಯ ಚೇತಸಿ.ಹೀಗೆ ಸಂಕಲ್ಪಿಸಿ ಮುಂದಿನ ಎರಡು ಮಂತ್ರಗಳನ್ನು ಹೇಳುತ್ತಾ ಮೌನದಿಂದ ಸ್ನಾನ ಮಾಡಬೇಕು.
1)ದು:ಖದಾರಿದ್ರ್ಯನಾಶಾಯ ಶ್ರೀವಿಷ್ಣೋಸ್ತೋಷಣಾಯ ಚ|
ಪ್ರಾತಃ ಸ್ನಾನಂ ಕರೋಮ್ಯದ್ಯ
ಮಾಘೇ ಪಾಪವಿನಾಶಮ್ ||2)ಮಕರಸ್ಥೇ ರವೌ ಮಾಘೇ
ಗೋವಿಂದಾಚ್ಯುತ ಮಾಧವ |
ಸ್ನಾನೇನಾನೇನ ಮೇ ದೇವ ಯಥೋಕ್ತಫಲದೋಭವ||