ಶಂಖ

2 0 0
                                    

#ಶಂಖ
ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು ಶಂಖ ಮಹಾತ್ಮರು ರಾಜರು ದೇವದೇವತೆಗಳ ಜನನವನ್ನು ಹಿಂದೆ ಶಂಖನಾದದ ಮೂಲಕವೇ ಷೋಷಿಸುತ್ತಿದ್ದರು

ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮವನ್ನು ಸೂಚಿಸಲೂ ಶಂಖವನ್ನು ಬಳಸಲಾಗುತ್ತಿತ್ತು ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯದಲ್ಲೂ ಶಂಖನಾದ ಮಾಡುವ ಪದ್ದತಿಯುಂಟು.

ತಂತಿವಾದ್ಯ, ಶಂಖ, ನಾದಸ್ವರ, ಕೊಂಬು ಹಾಗೂ ತಾಳ ಇವುಗಳಿಂದ ಹೊರಡುವ ಶಬ್ಧಗಳನ್ನು ಪಂಚಮಹಾಶಬ್ಧಗಳೆನ್ನುತ್ತಾರೆ ಮೂರರಿಂದ ಆರನೇ ಶತಮಾನದವರೆವಿಗೂ ಕೆಲವು ಚಕ್ರವರ್ತಿಗಳು ಪಂಚಮಹಾಶಬ್ದ ಎಂಬ ಬಿರುದುಗಳನ್ನುಗಳಿಸುತ್ತಿದ್ದರು

ಕೆಲವು ರಾಜರು ತಮ್ಮ ಕೈಕೆಳಗಿನ ಮಹಾವೀರರೂ ಅನುಯಾಯಿಗಳೂ ಆದವರಿಗೆ ಈ ಹೆಸರಿನ ಬಿರುದುಗಳನ್ನು ಕೊಡುತ್ತಿದ್ದರೆಂದು ಪ್ರಾಚೀನ ಬರಹಗಳಿಂದ ತಿಳಿದುಬರುತ್ತದೆ

ಹಿಂದೂ ಪುರಾಣಗಳ ಪ್ರಕಾರ ಹದಿನೆಂಟುವಾದ್ಯಗಳಲ್ಲಿ ಶಂಖವಾದ್ಯವೂ ಒಂದು ಆದ್ದರಿಮದಲೇ ಇದನ್ನು ಊದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ.

ಶಂಖಂ ಚಂದ್ರಾರ್ಕ ದೈವತ್ವಂ
ಮಧ್ಯೇ ವರುಣದೈವತವೃಷ್ಟೇ ಪ್ರಜಾವತೆ ನತ್ಪಂ
ಏತತ್ ಶಂಖಂ ವ್ರವೂಜಯೇತ್
ಎಂಬ ಶಂಖವನ್ನು ಪೂಜಿಸುವ ಶ್ಲೋಕ ಪೂಜೆಯಲ್ಲಿ ಶಂಖದ ಮಹತ್ವವನ್ನು ಸಾರುತ್ತದೆ.

ಶಂಖಗಳಲ್ಲಿ ವಾಲಂಪುರಿ, ಇದಾಂಪುರಿ, ಚಾಲಂಕಾಲಮ್ ಹಾಗೂ ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ ತಮಿಳುನಾಡಿದನ ಕೆಲವು ದೇವಸ್ಥಾನಗಳಲ್ಲಿ ಒಂದು ಸಾವಿರದೆಂಟು ಶಂಖಗಳಿದ್ದು ವಿಶೇಷ ಸಂಧರ್ಭಗಳಲ್ಲಿ ಈ ಎಲ್ಲ ಶಂಖಗಳಲ್ಲೂ ಪವಿತ್ರಗಂಗೆಯನ್ನಿಟ್ಟು ಮಹಾಶಂಖಾಭಿಷೇಕವನ್ನು ಮಾಡುತ್ತಾರೆ.

ರಾಮಾಯಣ, ಮಹಾಭಾರತಗಳಲ್ಲೂ ಶಂಖದ ಪಾತ್ರ ಬಹಳ ಮುಖ್ಯವಾದುದು ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿಯೂ ಒಂದೊಂದು ಶಂಖವಿದ್ದು ಅದಕ್ಕೆ ಪ್ರತ್ಯೇಕ ಹೆಸರಿರುತ್ತಿತ್ತು
ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ, ಅರ್ಜುನನದು ದೇವದತ್ತ,
ಭೀಮನದು ಪೌಂಢ್ರ,
ಯುಧಿಷ್ಠಿರನದು ಅನಂತವಿಜಯ,
ನಕುಲನದು ಸುಘೋಶ,
ಸಹದೇವನದು ಮಣೀಪುಷ್ಪಕ - ಹೀಗೆ
ಮಹಾವಿಷ್ಣುವಿನ ಎಡಹಸ್ತದಲ್ಲಿ ಸದಾ ಶಂಖ ಶೋಭಿಸುತ್ತಿರುತ್ತದೆ ಶ್ರೀ ವಿಷ್ಣುವನ್ನು ಶಂಖ ಚಕ್ರ ಗದಾ ಹಸ್ತ ಎಂದೇ ಶ್ಲೋಕಗಳು ವರ್ಣಿಸುತ್ತವೆ

ಆಚರಣೆ ಮಹತ್ವ ಮತ್ತು ಸಂಸ್ಕೃತಿಯ ವೈವಿಧ್ಯತೆWhere stories live. Discover now