ಯುಗಾದಿ

2 0 0
                                    

🌾🌿🌻🍋 *ನಿಮಗೂ ನಿಮ್ಮ ಸ ಕುಟುಂಬ ಸ ಪರಿವಾರಕ್ಕೂ ಯುಗಾದಿ ಹಬ್ಬದ ಶುಭಾಶಯಗಳು*

●●●●●●●●●●●●●●●●●●●●●●●●●●●●●

*ಹೊಸ ವರ್ಷದ (ಪ್ಲವನಾಮ ಸಂವತ್ಸರದ ಶುಭಾಶಯಗಳು) ಶ್ರೀ ಹರಿವಾಯುಗುರುಗಳ ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ* 🍋🌻🌿🌾

【◆◆◆ಯುಗಾದಿ ಹಬ್ಬ ಮತ್ತು ವಿಶೇಷತೆಗಳು◆◆◆】

ಹಬ್ಬ-ಹರಿದಿನ, ಉತ್ಸವಗಳು , ನಮ್ಮ ಭಾರತೀಯರ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿ ಬಂದಿದೆ..
ಬಹುಷಃ ನಮ್ಮ ದೇಶದಲ್ಲಿ ನಡೆಯೋ ಹಬ್ಬ ಹರಿದಿನ ಜಾತ್ರೆಗಳು ಬೇರೆಲ್ಲೂ ನಡೆಯುವುದಿಲ್ಲ..
ನಮ್ಮ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಸಂಸ್ಕೃತಿ, ಕಾರಣಗಳು ಇವೆ. ಇದೇ ಕಾರಣಕ್ಕೆ ನಮ್ಮ ಹಬ್ಬಗಳು ತಮ್ಮದೇ ಆದ ಮಹತ್ವ ಪಡೆದುಕೊಂಡಿವೆ..
ಇಂತಹುದರಲ್ಲಿ ಹಿಂದೂ ವರ್ಷದ, ಹೊಸ ಸಂವತ್ಸರದ ಮೊದಲ ಹಬ್ಬ "ಯುಗಾದಿ"ಯೂ ಒಂದು..
ಈ "ಯುಗಾದಿ" ಹಬ್ಬವು ಚಾಂದ್ರಮಾನ ಮತ್ತು ಸೌರಮಾನ ಎಂದು ಎರಡು ವಿಧಾನವಾಗಿದೆ..
ಆಂಧ್ರ ಮತ್ತು ಕರ್ನಾಟಕ ಪ್ರದೇಶದಲ್ಲಿ ಹೆಚ್ಚಾಗಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ..
ಕೆಲವು ಕಡೆ ಸೌರಮಾನ ಯುಗಾದಿ ಆಚರಿಸುತ್ತಾರೆ..

ಯುಗಾದಿ ಅಂದರೆ ಯುಗದ ಆದಿ, ಯುಗದ ಪ್ರಾರಂಭ ಎಂದರ್ಥ..
ಈ ದಿನವನ್ನು ಬ್ರಹ್ಮದೇವರು ಸೃಷ್ಟಿಸಿದ್ದಾನೆಂದು ತುಂಬಾ ಗ್ರಂಥಗಳು ಹೇಳುತ್ತವೆ..
ಈ ದಿನದಂದು ಮಹಾವಿಷ್ಣುವು " ಮತ್ಸ್ಯಾವತಾರವನ್ನು " ತಾಳಿದನು..

"ಶ್ರೀ ರಾಮಚಂದ್ರರು ಕಾಡಿನಿಂದ ಅಯೋಧ್ಯೆಗೆ ಹಿಂತಿರುಗಿದ ದಿನವಿದು, ಈ ದಿನ ದೇವರನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ಕಾರ್ಯ ವಿಜಯವಾಗುತ್ತದೆ ,ಎಂದು ಗ್ರಂಥಗಳು ಹೇಳುತ್ತವೆ..
ವಸಂತ ನವರಾತ್ರಿಗಳು ಈ ದಿನದಂದು ಪ್ರಾರಂಭವಾಗಿ, ಶ್ರೀ ರಾಮಚಂದ್ರ ಪಟ್ಟಾಭಿಷೇಕದ ಪೂಜೆಗಳು, ದುರ್ಗಾಸಪ್ತಶತೀ ಪಾರಾಯಣಗಳು, ಈ ದಿನ ಪ್ರಾರಂಭವಾಗುವುದು ತುಂಬಾ ವಿಶೇಷ..

ಈ ದಿನದಂದು ಸೂರ್ಯೋದಯಕ್ಕೆ ಮುಂಚೆಯೇ ಏಳಬೇಕು. ಎದ್ದ ತಕ್ಷಣ ದೇವರನ್ನು ಧ್ಯಾನಿಸಿ ನಂತರ ಅಭ್ಯಂಜನ ಸ್ನಾನ ಮಾಡಬೇಕು.
ತಲೆಗೆ ಎಣ್ಣೆಯನ್ನು ಮನೆಯ ಹೆಂಗಸರು ಸುಮಂಗಲಿಯರಿಂದನೇ ಹಚ್ಚಿಸಿಕೊಳ್ಳಬೇಕು..
ಮನೆಯನ್ನು ಶುದ್ಧಗೊಳಿಸಿ, ಮಾವಿನ ಎಲೆಗಳಿಂದ ತೋರಣ ಕಟ್ಟಬೇಕು..
ದೇವರ ಪೂಜೆ, ಅಭಿಷೇಕ, ನೈವೇದ್ಯ, ಪಂಚಾಂಗ ಪೂಜೆ ಮಾಡುವುದು ತುಂಬಾ ಒಳ್ಳೆಯದು ..
"ಬ್ರಾಹ್ಮಣರಿಗೆ ಫಲತಾಂಬೂಲದೊಂದಿಗೆ ಪಂಚಾಂಗ ದಾನ ಮಾಡಿದರೆ ತುಂಬಾ ಒಳ್ಳೆಯದು..
ನಂತರ ದೇವರಿಗೆ ಬೇವು ಬೆಲ್ಲ ನೈವೇದ್ಯ ಮಾಡಿ, ಸುಖ ದುಃಖ ಏನೇ ಬಂದರೂ ನಿಮ್ಮ ಆಶೀರ್ವಾದ ಇರಲಿ, ನಮಗೆ ಆಯಸ್ಸು ಆರೋಗ್ಯ ಕರುಣಿಸಿ ಎಂದು ಪ್ರಾರ್ಥಿಸಿ, ಬೇವು ಬೆಲ್ಲವನ್ನು, ಮೊದಲು ಹಸುವಿಗೆ ಕೊಟ್ಟು ನಮಸ್ಕರಿಸಿ, ನಂತರ ಮನೆಯ ಹಿರಿಯರಿಗೆ ಮತ್ತು ಗುರುಸ್ಥಾನದ ವ್ಯಕ್ತಿಗಳಿಗೆ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯಬೇಕು..
ನಂತರ ನೀವು ಸ್ವೀಕರಿಸಬೇಕು..

*********

ಬೇವು ಬೆಲ್ಲ ಸೇವಿಸುವಾಗ..
"ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||"

ತಾತ್ಪರ್ಯ : ನೂರುವರ್ಷ ವಜ್ರದಂತೆ ಗಟ್ಟಿಯಾದ ದೇಹದ ಶಕ್ತಿ, ಎಲ್ಲಾ ರೀತಿಯ ಐಶ್ವರ್ಯ ಸಂಪತ್ತುಗಳ ಪ್ರಾಪ್ತಿಗಾಗಿ,ಮತ್ತು ಸಕಲಾರಿಷ್ಟಗಳೂ ನಿವಾರಣೆಯಾಗಲೆಂದು ಬೇವು ಬೆಲ್ಲ ಸೇವನೆ ಮಾಡುತ್ತೇನೆ.."!

ವಿಶೇಷ ವಿಷಯ:

ಯುಗಾದಿಯ ದಿನ "ವಿದ್ಯಾವ್ರತವನ್ನು" ಬೇಕಾದರೂ ಮಾಡಬಹುದು. ಯಾರಿಗೆ ವಿದ್ಯೆ ಸರಿಯಾಗಿ ಬರುತ್ತಿಲ್ಲ, ಓದಿದ್ದೆಲ್ಲಾ ಮರೆತು ಹೋಗುತ್ತಿದೆ, ತುಂಬಾ ದಡ್ಡರಾಗಿದ್ದಾರೆ ಅನ್ನುವವರು "ಹಯಗ್ರೀವ ದೇವರನ್ನು ಮತ್ತು ದತ್ತಾತ್ರೇಯ"ರನ್ನು ಪೂಜಿಸಿ, ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟ ವಸ್ತುಗಳು ದಾನ ಮಾಡಬೇಕು.."
ಈ ದಿನ
"ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣಿ|
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||"

ಈ ಸರಸ್ವತೀ ದೇವಿ ಸ್ತೋತ್ರ ೩೩ ಸಾರಿ ಹೇಳಿ, ಸರಸ್ವತೀ ದೇವಿ ಪೂಜಿಸಿ, "ಬೆಲ್ಲದನ್ನ" ಅಥವಾ ಪೊಂಗಲ್ ನೈವೇದ್ಯ ಮಾಡಿದರೆ, ಮಕ್ಕಳು ತುಂಬಾ ತುಂಬಾ ವಿದ್ಯಾವಂತರಾಗುತ್ತಾರೆ ಮತ್ತು ಉತ್ತಮ ದರ್ಜೆಯಲ್ಲಿ ತೇರ್ಗಡೆ ಹೊಂದುತ್ತಾರೆ..

ಪಂಚಾಂಗ ಶ್ರವಣ ಅಥವಾ ಓದುವುದರಿಂದ ಫಲ.

"ಚೈತ್ರ ಶುಕ್ಲಪಕ್ಷದಲ್ಲಿ ವರ್ಷದ ರಾಜ ಮಂತ್ರಿ ಮೊದಲಾದ ಪಂಚಾಂಗದಲ್ಲಿನ ಫಲಗಳನ್ನು ಯಾರು ಕೇಳುತ್ತಾರೋ, ಅಂಥವರು ಪಾಪ ಫಲಗಳಿಂದ ಮುಕ್ತರು, ಆರೋಗ್ಯವಂತರು, ಆಯುಷ್ಯವಂತರೂ , ಐಶ್ವರ್ಯವಂತರೂ ಸುಖನುಭವಿಗಳೂ ಆಗುತ್ತಾರೆ..

ತಿಥಿಯಿಂದ ಐಶ್ವರ್ಯ, ವಾರದಿಂದ ಆಯುಷ್ಯವೃದ್ಧಿ, ನಕ್ಷತ್ರದಿಂದ ರೋಗ ಪರಿಹಾರ, ಕರಣದಿಂದ ಕಾರ್ಯಸಿದ್ಧಿ, ಮುಂತಾದ ಶುಭಫಲಗಳು ಪಂಚಾಂಗದಿಂದ ಲಭಿಸುತ್ತವೆ..

"ಹೀಗೆ ವಿಧಾನೋಕ್ತವಾಗಿ ಯುಗಾದಿ ಆಚರಣೆ ಮಾಡಿದರೆ ಇಡೀ ವರ್ಷ ಶುಭದಾಯಕವಾಗಿರುವುದರಲ್ಲಿ ಸಂದೇಹವಿಲ್ಲ..

*********

🌿🌱ಯುಗಾದಿ🌱🌿
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ  !!
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ. !!

              ತಮಗು ಮತ್ತು ತಮ್ಮ ಕುಟುಂಬಕ್ಕು ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ, ಜೊತೆಗೆ  ತರಲಿ
      ಎಲ್ಲಾ  ಬಂಧು  ಮಿತ್ರರು ಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.....😃
🙏🙏🙏🍋🍃🌴

ಆಚರಣೆ ಮಹತ್ವ ಮತ್ತು ಸಂಸ್ಕೃತಿಯ ವೈವಿಧ್ಯತೆWhere stories live. Discover now