ಹೊಸವರ್ಷ ಆರಂಭ ಯಾವಾಗ?"*

2 0 0
                                    

*ಆಮ್ನಾಯಃ - ಭಾರತೀಯದಿನದರ್ಶಿಕಾ - ಗನ್ಧವಹಸದನಮ್*

*"ಹೊಸವರ್ಷ ಆರಂಭ ಯಾವಾಗ?"*

*ಪ್ರಕೃತಿಯೇ ಒಪ್ಪದ ಜನವರಿ ಒಂದು ಹೊಸವರ್ಷ ಆಗುವುದೆಂತು??*

ನಾವೆಲ್ಲರೂ ಕಳೆದ ಹದಿನೈದು ದಿನಗಳಿಂದ
ನಮ್ಮ ಸುತ್ತ ಮುತ್ತಲಿನ ಪರಿಸರ ಪ್ರಭಾವದಿಂದಾಗಿ  ಹೊಸವರ್ಷದ ಗುಂಗನ್ನು ಮನಸಿಗೇರಿಸಿಕೊಂಡು ಏನೋ ವಿಚಿತ್ರವಾದ ಸಂಭ್ರಮವನ್ನು ಹೊಂದಿ ನಾಳೆ ಆ ಸಂಭ್ರಮವನ್ನು ಇಮ್ಮಡಿ ನೂರ್ಮಡಿಗೊಳಿಸಿಕೊಳ್ಳುವ ಕಾತರದಲ್ಲಿದ್ದೇವೆ.
(ಈ ವರ್ಷವಂತೂ ಕೋವಿಡ್ ನ ಕಾರಣ ಅನೇಕ ಸಂಭ್ರಮಾಚರಣೆ ಸ್ಥಗಿತವಾಗಿತ್ತು.‌)

*ಆತ್ಮೀಯ ಭಾರತೀಯಬಂಧುಗಳೆ,*
"ಡಿಸೆಂಬರ್31ನ್ನು "
ಈ ವರ್ಷದ ಕೊನೆಯ ದಿನವೆಂದೂ  ಅಥವಾ *"ಜನವರಿ 01" ನ್ನು *ಹೊಸವರ್ಷದ ಮೊದಲ ದಿನ* ಎಂದು ನಮಗೆ ಯಾರು ಹೇಳಿದವರು?

*ನಾವು ಆಚರಣೆಯಲ್ಲಿರಿಸಿಕೊಂಡ ಯಾವ ಧರ್ಮಗ್ರಂಥಗಳಲ್ಲಿ ಅಥವಾ ಸಂವಿಧಾನದಲ್ಲಿ  ಇದರ ಉಲ್ಲೇಖ ಇದೆ.*

*ನಮ್ಮ ದೇಶದ ಯಾವ ಇತಿಹಾಸದ ಪುಟದಲ್ಲಿ ಇದು ದಾಖಲಾಗಿದೆ??* ಅಥವಾ
ನಮಗೆ ಯಾವ ಧರ್ಮಗುರುಗಳು ಇದನ್ನು ಬೋಧಿಸಿದ್ದರು/ಬೋಧಿಸಿದರು??

ಈ ಮೇಲಿನ ಯಾವ ಕಾರಣವೂ ಇಲ್ಲದೆಯೂ ಆ ಗುಂಗಿನಲ್ಲಿ ತೇಲುತ್ತಿದ್ದೇವೆ. ಅಲ್ಲಾ , ಕಾಣದ ಕೈಗಳು ತೇಲುವಂತೆ ಮಾಡಿದ್ದಾವೆ!??

ಇಷ್ಟಕ್ಕೂ ಈ ಸಂಭ್ರಮ(?) ಆಚರಣೆಗೆ  ನಮ್ಮ ದೇಶದ ಒಳಗೆ ಐತಿಹಾಸಿಕ, ಧಾರ್ಮಿಕ, ಪಾರಂಪರಿಕ ಹೀಗೆ ಯಾವುದಾದರೂ ಮಹತ್ತ್ವವನ್ನು  ನಾವು ಕಾಣಲು ಸಾಧ್ಯವಿದೆಯೇ?

ಇದ್ಯಾವುದೂ ಇಲ್ಲದೇಯೂ ಇದನ್ನು ಆಚರಣೆ ತಂದ ಮಹನೀಯರು ಯಾರು?
ಇದನ್ನು ನಾವು ಯೋಚಿಸಬೇಕಾಗಿದೆ.

"ಇತಿಹಾಸದ ಪುಟಗಳಲ್ಲಿ ಇಣುಕಿದಾಗ"

ನಾವು‌ ಭಾರತೀಯರು, ಬೌದ್ಧಿಕತೆಗಿಂತ  ಭಾವನಾತ್ಮಕವಾದ ನೆಲೆಯಲ್ಲಿ ಬದುಕನ್ನು ಕಂಡುಕೊಂಡವರು.

"ವಿವಿಧತೆಯಲ್ಲಿ ಏಕತೆ" ಸಾಧ್ಯವಾಗಿದ್ದು ಈ ಕಾರಣಕ್ಕೆ. ಇದೇ ಕಾರಣಕ್ಕೆ ಅಮೇರಿಕದಂತ ಅಮೇರಿಕಾದಲ್ಲಿ ಇಂದಿಗೂ ಕರಿಯರು ಮತ್ತು ಬಿಳಿಯರು ಎಂಬ ವರ್ಗೀಕರಣ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಸಾಧ್ಯವಾಗಿಲ್ಲ. (ಭಾರತ ಇದನ್ನು ಮೀರಿ ನಿಂತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೆ !??)

ಈ ನಮ್ಮ ಭಾವುಕತೆಯ ದೌರ್ಬಲ್ಯವನ್ನೇ ತಮ್ಮ ಪ್ರಾಬಲ್ಯ ಕ್ಕೆ ಅಸ್ತ್ರವಾಗಿಸಿಕೊಂಡು ಪ್ರಪಂಚದಲ್ಲಿ ತಮ್ಮ  ಧರ್ಮವಿಸ್ತಾರದ ಕನಸು ಕಂಡು ಓಡಾಡುತ್ತಿದ್ದೆ "ಮಹನೀಯ"ರಿಗೆ  ನಮ್ಮ ದೇಶ ಕಂಡಿತು.

ಆಚರಣೆ ಮಹತ್ವ ಮತ್ತು ಸಂಸ್ಕೃತಿಯ ವೈವಿಧ್ಯತೆWhere stories live. Discover now