ಗುರು ಪುಷ್ಯಾಮೃತ ಯೋಗ*

0 0 0
                                    

*ಗುರು ಪುಷ್ಯಾಮೃತ ಯೋಗ*
                *

ಪುಷ್ಯ ನಕ್ಷತ್ರದ ಅರ್ಥ ಸಂತೃಪ್ತಿ ಹಾಗೂ ಸಮೃದ್ಧಿ ಎಂಬುದು. *ಪಂಡಿತರು ಹಾಗೂ ಗುರುಹಿರಿಯರು ಈ ನಕ್ಷತ್ರವನ್ನು ಶುಭ ಲಾಭ ತರುವ ನಕ್ಷತ್ರ ಎಂದು ಪರಿಗಣಿಸುತ್ತಾರೆ.*

ಪುಷ್ಯ ನಕ್ಷತ್ರವು ಚಂದ್ರ ಬಲದಿಂದ ಸಂಪತ್ತು ಮತ್ತು ಜ್ಞಾನ ಎರಡನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ. ಬೇರೆ ಬೇರೆ ನಕ್ಷತ್ರಗಳಲ್ಲಿ ಚಂದ್ರನು ಬಂದಾಗ ಬೇರೆ ಬೇರೆ ರೀತಿಯ ಪರಿಣಾಮಗಳು ಬರುತ್ತವೆ...

ಪುಷ್ಯ ನಕ್ಷತ್ರ ಇರುವ ಮಹೂರ್ತದಲ್ಲಿ ಯಾವುದೇ ಕಾರ್ಯಕ್ಕೆ ಕೈ ಹಾಕಿದರೆ ಆ ಕಾರ್ಯ ಸಿದ್ಧಿಸುತ್ತದೆ ಎಂದು ಪಂಚಾಂಗದಲ್ಲಿ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. *ಅದರಲ್ಲೂ ಅಪರೂಪಕ್ಕೆ ಗುರುವಾರ ಬೀಳುವ ಗುರು ಪುಷ್ಯಾಮೃತ ಯೋಗವನ್ನು ಬಹಳ ಶುಭಕರ ಎಂದು ಪರಿಗಣಿಸಲಾಗಿದೆ.*

*ಈ ಯೋಗದಲ್ಲಿ ಕೈ ಹಾಕುವ ಕೆಲಸಗಳು ಯಶಸ್ವಿಯಾಗುತ್ತದೆ. *ಉದ್ಯಮಿಗಳಿಗೆ  ಅಥವಾ ವ್ಯಾಪಾರ ಮಾಡುವವರಿಗೆ ಈ ಗುರುಪುಷ್ಯಾಮೃತ ಯೋಗವು ಲಾಭವನ್ನುಂಟುಮಾಡುತ್ತದೆ.*

*ಸೋಮವಾರ, ಗುರುವಾರ ಹಾಗೂ ಭಾನುವಾರ ಪುಷ್ಯ ನಕ್ಷತರ ಬಿದ್ದರೆ ಅದನ್ನು ವರ ನಕ್ಷತ್ರ ಯೋಗ ಎಂದು ಕರೆಯುತ್ತಾರೆ.*  ಈ ಸಮಯದಲ್ಲಿ ಕೈ ಹಾಕುವ ಕೆಲಸಗಳು ಸಿದ್ಧಿಸುತ್ತವೆ. *ಅದರಲ್ಲೂ ಗುರುವಾರ ಬೀಳುವ ಗುರು ಪುಷ್ಯ ಯೋಗವು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.*
*ಈ ಸಮಯದಲ್ಲಿ ಪುಷ್ಯ ನಕ್ಷತ್ರವು ಎಂಟನೇ ಸ್ಥಾನದಲ್ಲಿರುವ ಕಾರಣ ಅದು ಶುಭಕರ ಎಂದು ಹೇಳುತ್ತಾರೆ.*

*ಗುರು ಪುಷ್ಯ ನಕ್ಷತ್ರದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಿದರೂ  ಅದು ದ್ವಿಗುಣ ಹಾಗೂ ಶುಭಗಳಿಗೆ ಎಂದು ಹೇಳಬಹುದು...*

*ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈ ದಿನ ತುಂಬಾ ಶುಭಕರ*

● *ಪ್ರವಾಸ ಆರಂಭಿಸಲು ಹೊಸ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು*

● *ಗುರುವಿನಿಂದ ಮಂತ್ರಗಳನ್ನು ಕಲಿಯಲು*

● *ಕಾರ್ಯಕ್ರಮಗಳನ್ನು ಆಯೋಜಿಸಲು.*

● *ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು.* ತುಂಬಾ ಅನಕೂಲಕರವಾಗಿದೆ...

*ಈ ನಕ್ಷತ್ರದ ಶುಭ ಮುಹೂರ್ತದಲ್ಲಿ ಖರೀದಿಸಿದ ವಸ್ತುಗಳು ದೀರ್ಘಕಾಲದವರೆಗೆ ಉಪಯುಕ್ತ ಮತ್ತು ಅಕ್ಷಯವಾಗಿರುತ್ತವೆ ಎಂದು ಹೇಳಲಾಗುತ್ತದೆ.*

*ಪುಷ್ಯ ನಕ್ಷತ್ರದ ದೇವರನ್ನು ಗುರು ಎಂದು ಪರಿಗಣಿಸಲಾಗುತ್ತದೆ ಮತ್ತು ಶನಿಯು ಈ ನಕ್ಷತ್ರಪುಂಜದ ನಿರ್ದೇಶನ ಪ್ರತಿನಿಧಿಯಾಗಿ ಪರಿಗಣಿಸಲ್ಪಡುತ್ತಾನೆ. ಬೃಹಸ್ಪತಿ ಶುಭ, ಬುದ್ಧಿವಂತ ಮತ್ತು ಜ್ಞಾನವನ್ನು ನೀಡುತ್ತಾನೆ.*  ಆದರೆ ಶನಿ ಸ್ಥಿರತೆಯ ಸಂಕೇತವಾಗಿದ್ದಾನೆ ಆದ್ದರಿಂದ ಈ ಎರಡು ರಾಶಿಗಳ ಶುಭ ಯೋಗ 'ಪುಶ್ಯ ನಕ್ಷತ್ರ'ವನ್ನು ಶುಭ ಮತ್ತು ಶಾಶ್ವತವಾಗಿಸುತ್ತದೆ.

ಈ ಯೋಗದಲ್ಲಿ ಮಂತ್ರ ಪಠಣೆ, ಧ್ಯಾನ ಹಾಗೂ ದಾನ ಮಾಡಿದರೆ ತುಂಬಾ ಒಳ್ಳೆಯ ಫಲಗಳು ಸಿಗುತ್ತವೆ.

ಮೇಲೆ ತಿಳಿಸಿರುವ ಹಾಗೆ ಬರುವ ಜನವರಿ 28 ನೇ ತಾರೀಖಿನಂದು ಬನದ ಹುಣ್ಣಿಮೆ, ಗುರುವಾರ ಹಾಗೂ ಪುಷ್ಯ ನಕ್ಷತ್ರ ಬಂದಿರುತ್ತದೆ...

*ಗುರು ಪುಷ್ಯಾಮೃತ ಯೋಗ*  ಎಂದು ಈ ದಿನ ಹೇಳುತ್ತಾರೆ, ಆದ್ದರಿಂದ ಈ ದಿನ *ಶ್ರೀ ದಕ್ಷಿಣಾಮೂರ್ತಿ  ಸ್ತೋತ್ರ* 108 ಸಲ ಪಠಣ ಮಾಡಬೇಕು...

*ಈ ರೀತಿ ಪಠಣ ಮಾಡಿದರೆ ನಮ್ಮ ಕಠಿಣವಾದ ಕೆಲಸಗಳು ಅಥವಾ ಸಮಸ್ಯೆಗಳು ದೂರವಾಗತ್ತವೆ...*

*ಮಕ್ಕಳಿಗೆ ಗುರು ಭೋಧನೇ ಮಾಡಿಸಲು ತುಂಬಾ ಯೋಗ್ಯವಾದ ದಿನ....*

*ಬ್ರಾಹ್ಮಣ ರಿಗೆ ಧವಸಧಾನ್ಯ ಗಳನ್ನು ದಾನ ಮಾಡಿದರೆ ನಮ್ಮ ಗಳ ಕೆಲವು ಅನಾರೋಗ್ಯ ದ ಸಮಸ್ಯೆಗಳು ದೂರವಾಗುತ್ತವೆ...*

*ಗುರು ಪುಷ್ಯಾಮೃತ ಯೋಗ ಪೂಜೆ ಮಾಡುವ ವಿಧಾನ*

ಅಂದು ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಸ್ನಾನ ಮುಗಿಸಿ, ನಿತ್ಯ ಸಂಧಾವಂಧನೆ ಕರ್ಮಾದಿಗಳು ಮುಗಿಸಬೇಕು...
ತದನಂತರ ಒಂದು ಮಣೆ ಹಾಕಿ ಅದರ ಮೇಲೆ ದೇವರ ಫೋಟೋ ಇಡಿ. ಹೂ ಮಾಲೆ ಹಾಕಿ. ಎರಡು ತುಪ್ಪದ ದೀಪಗಳನ್ನು ಹಚ್ಚಿ.. ಕೆಂಪು ಕಲ್ಲುಸಕ್ಕರೆ ಹಾಗೂ ಬಾಳೆಹಣ್ಣು ನೇವಿದ್ಯ ಕ್ಕೆ ಇಟ್ಟುಕೊಳ್ಳಿ...

ಸಾದ್ಯವಾದರೆ ಮನೆಯ ಪುರುಷ ಸದಸ್ಯರೆಲ್ಲರೂ  *ಶ್ರೀ ದಕ್ಷಿಣಾಮೂರ್ತಿ  ಸ್ತೋತ್ರ* ವನ್ನೂ 54 / 108 ಸಲ ಹೇಳಿ... ತುಂಬಾ ಒಳ್ಳೆಯ ಫಲಗಳು ಲಭೀಸುತ್ತವೆ... ಸಾದ್ಯವಾದಷ್ಟೂ ಪ್ರಯತ್ನ ಮಾಡಿ...

    ||ಲೋಕಾ ಸಮಸ್ತಾಃ ಸುಖಿನೋ ಭವಂತು||

ಆಚರಣೆ ಮಹತ್ವ ಮತ್ತು ಸಂಸ್ಕೃತಿಯ ವೈವಿಧ್ಯತೆWhere stories live. Discover now