|| *ಶ್ರೀ ಮನ್ಮೂಲಗೋಪಾಲ ವಿಜಯೇತೆ* ||
|| *ಶ್ರೀ ವ್ಯಾಸರಾಜೋ ವಿಜಯತೇ* ||
|| *ಶ್ರೀ ಜಗನ್ನಾಥತೀರ್ಥ ಗುರುಭ್ಯೋ ನಮಃ* ||ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀವ್ಯಾಸರಾಜ ಮಠದ ಮಹಾತಪಸ್ವಿಗಳಾದ ಶೇಷಚಂದ್ರಿಕಾಚಾರ್ಯರ ವರಕುಮಾರರಾದ ಭಾಷ್ಯದೀಪಿಕಾಚಾರ್ಯರೆಂದೇ ಜಗನ್ಮಾನ್ಯರಾದ ಶ್ರೀಗಾಲವ ಋಷಿಗಳ ಅಂಶಸಂಭೂತರಾದ ಶ್ರೀ ಜಗನ್ನಾಥತೀರ್ಥರ ಪುಣ್ಯದಿನ
ಆಶ್ರಮ ಗುರುಗಳು : ಶೇಷಚಂದ್ರಿಕಾಚಾರ್ಯರು
ಕಾಲ : 1755-1770
ಆಶ್ರಮ ಶಿಷ್ಯರು : ಶ್ರೀನಾಥತೀರ್ಥರು
ಬೃಂದಾವನ : ಕುಂಭಕೋಣ
ಶ್ಲೋಕ :
ವಿದ್ವತ್ಪಂಕಜ ಮಾರ್ತಾಂಡ: ವಾದಿಮತ್ತೇಭಕೇಸರೀ |
ಜಗನ್ನಾಥಗುರುರ್ಭೂಯಾತ್ ಜ್ಯಾಯಸೇ ಶ್ರೇಯಸೇ ಮಮ |ಶ್ರೀಪಾದರು ಭಾಷ್ಯದೀಪಿಕ ಮತ್ತು ಸೂತ್ರದೀಪಿಕ ಎಂಬ ಶ್ರೇಷ್ಠ ಗ್ರಂಥವನ್ನು ರಚಿಸಿದ್ದಾರೆ. ಶ್ರೀಮನ್ಮಧ್ವಾಚಾರ್ಯರ ಬ್ರಹ್ಮಸೂತ್ರಭಾಷ್ಯಕೆ ವ್ಯಾಖ್ಯಾನವೇ ಭಾಷ್ಯದೀಪಿಕ. ಇದಕಾಗಿಯೇ ಭಾಷ್ಯದೀಪಿಕಾಚಾರ್ಯರೆಂದು ಜಗನ್ಮಾನ್ಯರಾಗಿದ್ದಾರೆ.
ಒಮ್ಮೆ ದಾಳಿಕೋರರು ಸಂಸ್ಥಾನದಲ್ಲಿ ಇರುವ ಹಲವು ರತ್ನಾಭರಣವನು ಕದಿಯಲು ಬಂದಿದರು. ಸಂಸ್ಥಾನದ ದೇವರ ಪೆಟ್ಟಿಗೆ ಸಮೇತವಾಗಿ ಶ್ರೀಗಳು ರಬ್ಬಸದಿಂದ ಹರಿಯುತ್ತಿದ ಕಾವೇರಿಯಲ್ಲಿ ಸುಮಾರು 20 ಮೈಲಿ ಈಜಿಕೊಂಡು ಹೋಗಿ ಸಂಸ್ಥಾನದ ದೇವರನು ದಾಳಿಕೊರರಿಂದ ಸಂರಕ್ಷಣೆ ಮಾಡಿದರು.
*ಶ್ರೀ ಭಾಷ್ಯದೀಪಿಕಾಚಾರ್ಯರು ರಚಿಸಿದ ನರಸಿಂಹ ಸ್ತೋತ್ರ*
ಆಮ್ರಸ್ತಂಭಾತ್ ಸಮಾಗತ್ಯ ತಾಮ್ರತುಂಡಂ ನಿಹತ್ಯಹಃ ।
ನಮ್ರಂ ನೌಮಿ ಜಗನ್ನಾಥಂ ಕಮ್ರೋsಪಾತ್ತಂ ನೃಕೇಸರೀ ||*ನರಸಿಂಹದೇವರ ಸ್ಮರಣೆಯಿಂದ ಆಪತ್ತು ಪರಿಹಾರ:*
ಒಮ್ಮೇ ತಮಿಳುನಾಡಿನ ತೆಕ್ಕಲೂರು ಎಂಬ ಪ್ರಾಂತದ ಸಂಚಾರದಲ್ಲಿದಾಗ ಸೈನಿಕರ ತಂಡವೂಂದು ಶ್ರೀಗಳ ಮೇಲೆ ದಾಳಿಯನ್ನು ಮಾಡಿದರು.
ಶ್ರೀಗಳು ನರಸಿಂಹನನ್ನು ಸ್ಮರಿಸಿದರು.ಹತ್ತಿರದ ಮಾವಿನ ಮರದಿಂದ ವಿಚಿತ್ರ ಶಕ್ತಿಯೊಂದು ಪ್ರಕಟವಾಗಿ ದಾಳಿಕಾರರ ತಂಡವನ್ನು ಹೊಡೆದೊಡಿಸಿದರು.
ಶ್ರೀ ಜಗನ್ನಾಥತೀರ್ಥರು ಸಂಸ್ಥಾನದ ಜವಾಬ್ದಾರಿ ಶ್ರೀನಾಥತೀರ್ಥರಿಗೆ ವಹಿಸಿ ಪುಷ್ಯ ಮಾಸ ಶುಕ್ಲ ಪಕ್ಷದ ದ್ವಿತೀಯದಂದು ಕುಂಭಕೋಣದಲ್ಲಿ ಬೃಂದಾವನ ಪ್ರವೇಶ ಮಾಡಿದರು.
*ಶ್ರೀ ಇಭರಾಮಪುರಾಧೀಶ*
https://drive.google.com/folderview?id=1SeocHa5FFEMHSl7Yd_nMdiAT5Jijgc4KShri gurubyO namaha...hari Om...
YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...