*ಸೂರಿಗಳರಸ ಶ್ರೀ ನರಸಿಂಹಾರ್ಯರ ।*
*ಸಾರಿ ಭಜಿಸಿ ಬೇಡಿರೈ ।।*
🙏🙏🙏
*ಇಂದು ಶ್ರೀ ಜಂಬುಖಂಡಿ ಆಚಾರ್ಯರ ಶಿಷ್ಯರಾದ ಮತ್ತು ಶ್ರೀ ಮುತ್ತಗಿ ಶ್ರೀನಿವಾಸ ಆಚಾರ್ಯರ ಗುರುಗಳಾದ ಶ್ರೀ ಅರಳಿಕಟ್ಟಿ ನರಸಿಂಹ ಆಚಾರ್ಯರು ಹರಿ ಪುರಕ್ಕೆ ತೆರಳಿದ ದಿನ.*
*ಇವರು ಶ್ರೀ ಕೌತಾಳಂ ಗುರು ಜಗನ್ನಾಥ ದಾಸರ ಸಮಕಾಲೀನರು.*
ಅವರ ಬಗ್ಗೆ ನನ್ನ ಅಲ್ಪಮತಿಗೆ ಬಂದಷ್ಟು ತಿಳಿಸುವ ಪ್ರಯತ್ನ.
ಇವರು ಹತ್ತಿಬೆಳಗಲ್ ಗ್ರಾಮದವರು.ಇದು ಆಲೂರು ಹತ್ತಿರ ಬರುತ್ತದೆ.
ಇವರ ಮಹಾತ್ಮೆ ಸಹ ಬಹಳವಾಗಿ ಇದೆ.
*ಇವರ ಜೀವನಚರಿತ್ರೆ ಒಮ್ಮೆ ಅವಲೋಕಿಸಿದಾಗ ನಮಗೆ ಮುಖ್ಯವಾಗಿ ಎರಡು ವಿಷಯಗಳು ಅತ್ಯಂತ ಮಹತ್ವವುಳ್ಳ ದ್ದಾಗಿ ಕಂಡು ಬರುತ್ತದೆ.*
*ಮೊದಲನೆಯದು*
*ಶ್ರೀ ಪ್ರಾಣದೇವರ ಸ್ವಪ್ನ ಸೂಚನೆಯಂತೆ ತಮ್ಮ ಇಡಿ ಸರ್ವಸ್ವ ವನ್ನು ದಾನ ಮಾಡಿದ್ದು..* ಮತ್ತು
*ತಮ್ಮ ಪ್ರಾಣವನ್ನು ಸಹ ಆ ಪ್ರಾಣದೇವರಿಗೆ ಒಪ್ಪಿಸಿದ ಮಹಾನುಭಾವರು ಅವರು.*
*ಎಲ್ಲವನ್ನೂ ದಾನ ಮಾಡಿದ್ದು ಯಾವುದೇ ತರಹದ ಪ್ರಚಾರಕ್ಕೆ,ಅಥವಾ ಪ್ರತಿಷ್ಟೆಗಲ್ಲ.*
ನಾವಾದರೆ ಕಿಂಚಿತ್ತೂ ಕೊಟ್ಟರು ಅದರ ಬಗ್ಗೆ ನಮಗೆ ಎಲ್ಲರು ಹೊಗಳಲಿ ಎನ್ನುವ ಮನೋಭಾವನೆ ಇರುತ್ತದೆ.
*ಇವರು ಅಂತಹ ಅಪೇಕ್ಷಿತ ಎಂದು ಪಟ್ಟವರಲ್ಲ.ಮಾಡುವ ಪ್ರತಿಯೊಂದು ಕಾರ್ಯವು ಆ ಮುಖ್ಯ ಪ್ರಾಣನ ಆಜ್ಞೆ ಮತ್ತು ಅವನ ಅಂತರ್ಯಾಮಿಯಾದ ಶ್ರೀ ಹರಿಯ ಪ್ರೀತಿಗಾಗಿಯೇ ಹೊರತು ಬೇರೆ ಯಾವ ಉದ್ದೇಶ ಇಲ್ಲ.*
*ಇಂತಹ ವಿರಕ್ತ ಮನೋಭಾವನೆ ಬರುವದು ಬಹಳ ವಿರಳ..*
ಎರಡನೇ ಯದು..
*ನಲವತ್ತು ದಿನಗಳವರೆಗೆ ಉಪವಾಸ ಕೈಗೊಂಡಿರುವದು.*
*ಶ್ರೀ ಮುಖ್ಯ ಪ್ರಾಣನ ವಿಶೇಷ ಉಪಾಸಕರು ಇವರಾಗಿದ್ದರಿಂದ ಅವರ ಸೂಚನೆ,ಮತ್ತು ಆಜ್ಞೆಯಂತೆ ೪೦ದಿನಗಳ ಕಾಲ ಉಪವಾಸ ಕೈಗೊಂಡರು.ನಿತ್ಯವು ಶಿಷ್ಯ ಪರಿವಾರದವರ ಜೊತೆಯಲ್ಲಿ ಕುಳಿತು ತೀರ್ಥ ತೆಗೆದುಕೊಂಡು ಗಂಧ,ಅಕ್ಷತಾದಿಗಳನ್ನು ಲೇಪನ ಮಾಡಿಕೊಂಡು ಅವರ ಜೊತೆಯಲ್ಲಿ ಎಲೆ ಹಾಕಿಸಿಕೊಂಡು ಭೋಜನಕ್ಕೆ ಕೂಡಬೇಕು.ಯಾವ ಪದಾರ್ಥಗಳನ್ನು ತಾವು ಹಾಕಿಸಿಕೊಳ್ಳದೇ ಶಿಷ್ಯರು ಊಟವಾಗುವವರೆಗು ಕುಳಿತು ನಿತ್ಯ ಉಪವಾಸ ಮಾಡುತ್ತಾ ಇದ್ದರು.*
*ಆಕಸ್ಮಿಕವಾಗಿ ಯಾರಾದರೂ ಬಡಿಸುವಾಗ ಒಂದು ಪದಾರ್ಥಗಳು ಇವರ ಎಲೆಗೆ ಬಿತ್ತು ಅಂದರೆ ಅದನ್ನು ಸ್ವೀಕರಿಸಿ, ತಮ್ಮ ಉಪವಾಸ ಭಂಗವಾಯಿತೆಂದು ತಿಳಿದು ಮತ್ತೆ ಪುನಃ ಮರುದಿನದಿಂದ ೪೦ ದಿನಗಳವರೆಗೆ ಉಪವಾಸ ಪ್ರಾರಂಭಿಸುತ್ತಾ ಇದ್ದರು.*
*ಆಚಾರ್ಯರ ಈ ಕ್ರಮದಲ್ಲಿ ಅನೇಕ ಸಲ ಭಂಗವಾದದ್ದು ಉಂಟು.*
*ಹೀಗೆ ಕೊನೆಯಲ್ಲಿ ೪೦ದಿನಗಳ ಕಾಲ ಉಪವಾಸ ವ್ರತವನ್ನು ಆಚರಿಸಿ, ತಮ್ಮ ಶಿಷ್ಯ ಮಂಡಳಿಯ ಸಮಕ್ಷಮದಲ್ಲಿ ಪ್ರಾತಃಕಾಲ,ವಿಳಂಬಿ ನಾಮ ಸಂವತ್ಸರ,ಆಷಾಡ ಮಾಸದ ಶುಕ್ಲ ಪಕ್ಷದ ಪಾಡ್ಯ ದಿನದಂದು ಶ್ರೀ ಹರಿಯ ಪುರಕ್ಕೆ ತೆರಳಿದ ಮಹಾನುಭಾವರು.*
*ತಮ್ಮ ಕಾಲಾನಂತರದಲ್ಲಿ ತಮ್ಮ ಭಕ್ತನಾದ ಬಡಿಗೇರ ರುದ್ರಪ್ಪನಿಗೆ ದರುಶನ ಕೊಟ್ಟ ಮಹಾನುಭಾವರು.*ಒಂದು ಏಕಾದಶಿ, ಮಾಡಲು ಹೌಹಾರುವ ಅಥವಾ ಎರಡು ಬಂದರಂತು ಕೇಳುವದೇ ಬೇಡ.
*೪೦ದಿನಗಳ ಉಪವಾಸ ವ್ರತವನ್ನು ಮಾಡಿದ ಆಚಾರ್ಯರ ಈ ಸಾಧನೆ ನಮ್ಮ ಮತಿಗೆ ನಿಲುಕದ ವಿಷಯ.*
ಹತ್ತಿ ಬೆಳಗಲ್ ಆಚಾರ್ಯರ ಶಿಷ್ಯರಲ್ಲಿ ಪ್ರಮುಖವಾಗಿ ಶ್ರೀ ಬಿಲ್ವಪತ್ರಿ ಆಚಾರ್ಯರು, ಮತ್ತು ಶ್ರೀ ಮುತ್ತಿಗೆ ಆಚಾರ್ಯರು (ಮುಂದೆ ಇವರೇ ಆಶ್ರಮ ಸ್ವೀಕರಿಸಿ ಶ್ರೀ ರಘುಪ್ರೇಮ ತೀರ್ಥರೆಂದು ಪ್ರಸಿದ್ಧಿ ಯಾಗಿ ಆದವಾನಿಯಲ್ಲಿ ವೃಂದಾವನ ಪ್ರವೇಶವನ್ನು ಮಾಡಿದ ಮಹಾನುಭಾವರು)
ಇಂತಹ ಮಹಾಮಹಿಮರ ಸ್ಮರಣೆ ಪ್ರಾತಃಕಾಲ ನಮ್ಮ ಜೀವನ ಧನ್ಯ..
🙏ಶ್ರೀ ಕೃಷ್ಣಾರ್ಪಣಮಸ್ತು🙏
ನಮ್ಮ ದಾಸರಾಯರು ಹೇಳಿದಂತೆ ಇಂತಹ
*||ಪರಮಭಾಗವತರನು ಕೊಂಡಾಡುವದು ಪ್ರತಿದಿನವು||*
🙏 ಶ್ರೀ ಹತ್ತಿ ಬೆಳಗಲ್ ಆಚಾರ್ಯ ಗುರುಭ್ಯೋ ನಮಃ🙏shri gurubyO namaha...hari Om...
*AshADa shuddha prathipath is the puNya dina of shri araLikaTTe narasimhAchAryaru.*
:
puNya dina: AshADa shukla prathipath (1898)
gurugaLu: shri appanAchArya
shishyaru: more than 300
kaTTe: hatthibeLagal, Alur. It is next to prANa dEvara sannidhAna. This prANa dEvaru was consecrated by shri rAghavEndra tIrtharu.
He was a great scholar and was an aparOksha jnAni. He spent most of his life at hattibeLagal prANa dEvara sannidhAna. This prANa dEvaru had apperared before him several times.
He did "sarvaswa dAna" several times. Among his more than 300 students were shri muttigi srInivAsAchArya (who later became shri raghuprema tIrtharu in kUDli akshObhya maTa) and biLvapatri Acharyaru. biLvapatri Acharyara kaTTe is next to him at hattibeLagal.
The prANa dEvara sannidhAna is now looked after by the descendents of shri biLvapatri AchAryaru.
He organized chaturmAsya of shri sudharmEndra tIrtharu of rAyara maTa once and got blessed.
He once did upavAsa for 40 days. He also appeared before one of his devotees 2 days after his jIva tyAga.
shri narasimha charyA varada gOvindA gOvindA...
shri krishNArpaNamastu...
YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...