*ಶ್ರೀ ದೀಪದ ಅಣ್ಣಯ್ಯಾಚಾರ್ಯರ ಕೃತಿ*
(ಶ್ರೀನಿಧಿವಿಠಲ ಅಂಕಿತ )*ರಾಗ ಪೂರ್ವಿಕಲ್ಯಾಣಿ ಆದಿತಾಳ*
ಸೂರ್ಯಾಂತರ್ಗತ ನಾರಾಯಣ । ಪಾಹಿ
ಆರ್ಯಮೂರುತಿ ಪಂಚಪ್ರಾಣ ॥ ಪ ॥
ಭಾರ್ಯಳಿಂದೊಡಗೂಡಿ ಸರ್ವಜೀವರೊಳಿದ್ದು
ವೀರ್ಯ ಕೊಡುತಲಿರ್ದ ಶರ್ವಾದಿವಂದ್ಯ ॥ ಅ ಪ ॥ದ್ರುಪದನ ಸುತೆ ನಿನ್ನ ಕರೆಯೆ । ಅಂದು
ಕೃಪಣವತ್ಸಲ ಶೀರೆ ಮಳೆಯೇ ।
ಅಪರಿಮಿತವು ನೀರ ಸುರಿಯೆ । ಸ್ವಾಮಿ
ಕುಪಿತ ದೈತ್ಯರ ಗರ್ವ ಮುರಿಯೇ ॥
ಜಪಿಸೋ ಜನರ ವಿಪತ್ತು ಕಳೆದೆ
ಈ ಪರಿಯ ದೇವರನೆಲ್ಲಿ ಕಾಣೆನೊ
ತಪನಕೋಟಿಪ್ರಕಾಶ ಬಲ ಉಳ್ಳ
ಕಪಿಲರೂಪನೆ ಜ್ಞಾನದಾಯಕ ॥ 1 ॥ಹೃದಯ ಮಂಟಪದೊಳಗೆಲ್ಲ । ಪ್ರಾಣ -
ದದುಭುತ ಮಹಿಮೆಯ ಬಲ್ಲ
ಸದಮಲನಾಗಿ ತಾನೆಲ್ಲ । ಕಾರ್ಯ
ಮುದದಿ ಮಾಡಿಸುವ ಶ್ರೀನಲ್ಲ ॥
ಹದುಳ ಕೊಡುತಲಿ ಬದಿಲಿ ತಾನಿದ್ದು
ಒದಗಿ ನಿನಗೆನ್ನ ಮದುವೆ ಮಾಡಿದ
ಪದುಮಜಾಂಡೋದರ ಈ ಸುದತಿಯ
ಮುದದಿ ರಮಿಸೆಂದು ಒದಗಿ ಬೇಡುವೆ ॥ 2 ॥ಎನ್ನ ಬಿನ್ನಪವನ್ನು ಕೇಳೊ । ಪ್ರಿಯ
ಮನ್ನಿಸಿ ನೋಡೊ ದಯಾಳೋ
ಹೆಣ್ಣಬಲೆಯ ಮಾತು ಕೇಳೋ । ನಾನು
ನಿನ್ನವಳಲ್ಲವೇನು ಹೇಳೋ ॥
ನಿನ್ನ ಮನದನುಮಾನ ತಿಳಿಯಿತು
ಕನ್ಯಾವಸ್ಥೆಯು ಎನ್ನದೆನ್ನದೆ
ಚೆನ್ನ *ಶ್ರೀನಿಧಿವಿಟ್ಠಲ* ಪ್ರಾಯದ
ಕನ್ಯೆ ಇವಳನು ದೇವ ಕೂಡಿಕೊ ॥ 3 ॥
YOU ARE READING
ದಾಸ ಸಾಹಿತ್ಯ
Şiir*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...