|| ಶ್ರೀಮನ್ಮೂಲರಾಮೋ ವಿಜಯತೇ ||
|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಸುಧರ್ಮೇಂದ್ರತೀರ್ಥ ಗುರುಭ್ಯೋ ನಮಃ ||ಮಧ್ವಾಚಾರ್ಯ ಮೂಲಮಹಾಸಂಸ್ಥಾನ ದಕ್ಷಿಣಾಧಿ ಕವೀಂದ್ರಮಠ ಈಗಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಮಹಾತಪಸ್ವಿಗಳಾದ ಶ್ರೀಸುಜ್ಞಾನೇಂದ್ರತೀರ್ಥರ ವರಕುಮಾರರಾದ ಶ್ರೀಸುಧರ್ಮೇಂದ್ರತೀರ್ಥರ ಆರಾಧನೆ.
ಹೆಸರು : ವಿದ್ವಾನ್ ಶ್ರೀ ಗಣೇಶಾಚಾರ್ಯರು
ಆಶ್ರಮ ಗುರುಗಳು : ಶ್ರೀ ಸುಜ್ಞಾನೇಂದ್ರತೀರ್ಥರು
ಆಶ್ರಮ ನಾಮ : ಶ್ರೀ ಸುಧರ್ಮೇಂದ್ರತೀರ್ಥರು
ಆಶ್ರಮ ಶಿಷ್ಯರು : ಶ್ರೀ ಸುಗುಣೇಂದ್ರತೀರ್ಥರು
ಕಾಲ : ಕ್ರಿ ಶ 1861 - 1872ಸಮಕಾಲೀನ ಹರಿದಾಸರು ಮತ್ತು ಅಪರೋಕ್ಷ ಜ್ಞಾನಿಗಳು :
ಇಭರಾಮಪುರ ಅಪ್ಪಾವರು, ಯೋಗಿ ನಾರಾಯಣಾಚಾರ್ಯ,ಯಲಮೇಲಿ ಹಾಯಗ್ರೀವಾಚಾರ್ಯ, ಶ್ರೀ ಶೇಷದಾಸರ ,ಶ್ರೀ ಸುರಪುರದ ಆನಂದದಾಸರು ,ಶ್ರೀ ಕೃಷ್ಣಾವಧೂತರು , ಶ್ರೀ ಗುರು ಜಗನ್ನಾಥದಾಸರು, ಶ್ರೀ ವಿಜಯರಾಮಚಂದ್ರದಾಸರು, ಶ್ರೀ ಜಯೇಶವಿಠ್ಠಲರು.ಶ್ರೀ ಅಪ್ಪಾವರ ಭವಿಷ್ಯವಾಣಿ :
ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರು ಪಂಚಮುಖಿ ಮುಖ್ಯಪ್ರಾಣ ಆರಾಧಕರು , ನಿರಂತರ ಶ್ರೀಮನ್ ನ್ಯಾಯಸುಧಾ ಪರಿಮಳ ಗ್ರಂಥದ ಪಾರಾಯಣದಿಂದ ಅವರು ನುಡಿದ ಪ್ರತಿಯೊಂದು ಮಾತು ಸತ್ಯವಾಗುತ್ತಿತು.
ಶ್ರೀ ಗಣೇಶಾಚಾರ್ಯರು ಮಂತ್ರಾಲಯ ಅಪ್ಪಾವರ ಕಾಲದಲ್ಲಿ ಇದ್ದ ಮಹಾ ಪಂಡಿತರು. ಅಪ್ಪಾವರು ಶ್ರೀ ರಾಯರ ದರ್ಶನಕೆಂದು ಬಂದಿರುತ್ತಾರೆ. ಅಪ್ಪಾವರನು ಕಂಡು ದೀರ್ಘ ದಂಡ ನಮಸ್ಕಾರ ಮಾಡಿದ ಗಣೇಶಾಚಾರ್ಯರು. ನಮಸ್ಕಾರ ಮಾಡಿದಮೇಲೆ ಅಪ್ಪಾವರು ಅವರಿಗೆ ಇದು ನೀನು ನನಗೆ ಮಾಡುವ ಕೊನೆಯ ನಮಸ್ಕಾರ ನಾಳೆಯಿಂದ ನಾನು ನಿನಗೆ ಮಾಡುತ್ತೆನೆ ಅಂತ ಮಾರ್ಮಿಕವಾಗಿ ಆಚಾರ್ಯರಿಗೆ ಹೇಳುತ್ತಾರೆ.
ಮರುದಿನದ ಸಾಯಂಕಾಲ ಸಮಯಕೆ ಶ್ರೀಮಠದಿಂದ ಗಣೇಶಾಚಾರ್ಯರಿಗೆ ಈಗಲೇ ನಂಜನಗೂಡುಗೆ ಹೊರಡ ಬೇಕು, ಶ್ರೀ ಸುಜ್ಞಾನೇಂದ್ರ ತೀರ್ಥರಿಗೆ ದೇಹ ಅಲಸ್ಯವಾಗುತ್ತಿದೆ ಅವರು ಮುಂದಿನ ಜವಾಬ್ದಾರಿ ನಿಮಗೆ ವಹಿಸಿದರೆವೆಂದು ಹೇಳಿದ ತತ್ಕ್ಷಣ ನಂಜನಗೂಡುಗೆ ಪ್ರಯಾಣ ಬೆಳಸಿ ಮುಂದೆ ಅವರೇ ಪರಮಹಂಸ ಪೀಠದಲ್ಲಿ ವಿರಾಜಾಮಾನರಾಗಿ ಸುಧರ್ಮೇಂದ್ರತೀರ್ಥರೆಂದು ಜಗನ್ಮಾನ್ಯರಾಗಿದರೆ.
ಸುಧರ್ಮೇಂದ್ರತೀರ್ಥರು ರಾಯರ ಮೃತಿಕ್ಕೆಯಿಂದ ಭಕ್ತರೊಬ್ಬರ ಕುಷ್ಠರೋಗ ಪರಿಹರಮಾಡಿ ಅನುಗ್ರಹಿಸಿದು ಇತಿಹಾಸ. ಶ್ರೀಗಳು ಬಹುಕಾಲ ಮಂತ್ರಾಲಯವೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಬಂದ ಭಕುತರ ದುರಿತಗಳಪರಿಹಾರ ಮಾಡಿ ವಿಶೇಷವಾಗಿ ರಾಯರ ಕರುಣೆಗೆ ಪಾತ್ರರಾಗಿದ್ದಾರೆ. ಶ್ರೀಗಳು ಮುಂದೆ ಶ್ರೀ ಸುಗುಣೇಂದ್ರತೀರ್ಥರಿಗೆ ಸಂಸ್ಥಾನದ ಜವಾಬ್ದಾರಿ ವಹಿಸಿ ಪುಷ್ಯ ಬಹುಳ ಪಂಚಮೀಯಂದು ಮಂತ್ರಾಲಯದಲ್ಲಿ ಬೃಂದಾವನ ಪ್ರವೇಶ ಮಾಡಿದಾರೆ.
ಸುಧಾಂಶುಮಿವ ಸಂಭೂತಂ ಸುಜ್ಞಾನೇಂದ್ರ ಸುಧಾಂಬುಧೌ |
ಸುಧೀ ಸಂದೋಹ ಸಂಸೇವ್ಯಂ ಸುಧರ್ಮೇಂದ್ರ ಗುರುಂಭಜೇ ||ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ಯ ಇಭರಾಮಪುರ
*ಶ್ರೀಂ ಶ್ರೀ ಕಂ ಕಪಿಲಾಯ ನಮಃ**ಸುಧಾಂಶುಮಿವ ಸಂಭೂತಂ ಸುಜ್ಞಾನೇಂದ್ರ ಸುಧಾಂಬುಧೌ/*
*ಸುಧೀ ಸಂದೋಹ ಸಂಸೇವ್ಯಂ ಸುಧರ್ಮೇಂದ್ರ ಗುರುಂಭಜೇ //*ಶ್ರೀ ರಾಯರ ಮಠದ 18 ನೇ ಶತಮಾನದ ಯತಿಗಳೂ, ಶ್ರೀ ಸುಜ್ಞಾನೇಂದ್ರತೀರ್ಥರ ಶಿಷ್ಯರೂ, ಶ್ರೀ ಸುಗುಣೇಂದ್ರತೀರ್ಥರ ಗುರುಗಳು, ಶ್ರೀ ಇಭರಾಮಪುರದ ಅಪ್ಪಾವರ ಆಪ್ತಮಿತ್ರರು ಆದ ಶ್ರೀ *ಸುಧರ್ಮೇಂದ್ರತೀರ್ಥರ* ಆರಾಧನಾ ಮಹೋತ್ಸವ, ಮಂತ್ರಾಲಯದಲ್ಲಿ.. ಶ್ರೀ ಗುರುಗಳ ಆಶೀರ್ವಾದ, ಅನುಗ್ರಹ ಸದಾ ನಮಗೆ ಇರಲೀ ಎಂದು ಬೇಡಿಕೊಳ್ಳುತ್ತಾ..
*
YOU ARE READING
ದಾಸ ಸಾಹಿತ್ಯ
Poésie*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...