*[ : *ಸ್ಮರಿಸಿ ಬದುಕಿರೋ*
*ದಿವ್ಯ ಚರಣಕ್ಕೆರಗಿರೋ|*
*ದುರಿತ ತರೆದು ಪೊರೆವ ವಿಜಯ ಗುರುಗಳೆಂಬರಾ||*
*ಶ್ರೀ ವಿಜಯದಾಸಾರ್ಯ ವಿರಚಿತ*
*ಆಯಾ ಕಾಲ ಸಂಧರ್ಭದಲ್ಲಿ ಶ್ರೀ ಹರಿಯ ನಾಮ ಸ್ಮರಣೆ ಯಿಂದ ಬರುವ ಫಲ ಮತ್ತು ನಾಮ ಸ್ಮರಣೆ ಮಾಡದೇ ಹೋದರೆ ಬರುವ ದುಷ್ಫಲದ ಬಗ್ಗೆ ಶ್ರೀ ವಿಜಯಪ್ರಭುಗಳ ರಚನೆಯ ಕೃತಿ.*
*ಸಾಧ್ಯ ವಾದಷ್ಟು ಶ್ರೀಹರಿಯ ಸ್ಮರಣೆ ಬಿಡದೇ ಮಾಡೋಣ.*
ಜಯ ಮಂಗಳಂಜಯಮಂಗಳಂ ನಿತ್ಯಶುಭ ಮಂಗಳಂ |ಪ|
ತೊಳಸದಕ್ಕಿಯ ತಿಂಬ ಕಿಲುಬುತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆಸಿಕೊಂಬ
ಇಲ್ಲ ತನಗೆಂದು ಸುಳ್ಳು ಮಾತನಾಡಿದರೆ
ಎಲ್ಲವನು ಕಸಗೊಂಬ ಕಳ್ಳ ದೊರೆಗೆ |೧|
ತನ್ನ ನೋಡುವೆನೆಂದು ಮುನ್ನೂರ ಗಾವುದ ಬಂದು
ತನ್ನ ಗುಡಿಯಾ ಪೊಕ್ಕ ಜನರಿಗೆಲ್ಲಾ
ಹೊನ್ನು ಹಣ ಕಸಿದುಕೊಂಡು ತನ್ನ ದರುಶನ ಕೊಡದೆ
ಬೆನ್ನೊಡೆಯ ಹೊಡೆಸುವ ಅನ್ಯಾಯಕಾರಿಗೆ |೨|
ಗಿಡ್ಡಹಾರವನಾಗಿ ಒಡ್ಡಿ ದಾನ ಬೇಡಿ
ದುಡ್ಡುಕಾಸುಗಳಿಗೆ ಕೈ ನೀಡಿ
ಅಡ್ಡಬಿದ್ದ ಜನರ ವಿಡ್ಡೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿವಿಜಯವಿಠ್ಠಲಗೆ|೩|
ಸಿರಿವೇಂಕಟೇಶನ ಮಹಾತ್ಮೆ. ವಿಜಯದಾಸರ ಮಾತಿನಲ್ಲಿ. ಅಮೂಲ್ಯ ಮಂಗಳಾಚರಣೆ. ದೂರ ದೂರದಿಂದ ಕಷ್ಟಪಟ್ಟು ನಡೆದು ಬರುತ್ತಾರೆ ಸ್ವಾಮಿ ದರ್ಶನಕ್ಕೆಂದು, ತಂದ ಹಣವನ್ನೆಲ್ಲ ಹುಂಡಿಗೆ ಸುರಿಯುತ್ತಾರೆ. ಗದ್ದಲವೋ ಗದ್ದಲ. ಮುಗಿಯದ ಸರತಿಸಾಲು ದರುಶನಕೆ. ವೆಂಕಪ್ಪನ ಎದುರಿಗೇ ಬಂದೆವು. ಇನ್ನೇನು ಕಂಡೆವು ದೊರೆಯ.
ಅಷ್ಟರಲ್ಲಿ ಕೈ ಹಿಡಿದು ಮುಂದೆ ಕಳಿಸಿದರು. ಹಿಂದೆ ದುಗಿಸಿದರು. ʻಮುಂದೆ - ಮುಂದೆʼ ಕೂಗು. ಹೆಚ್ಚು ಕಡಿಮೆ ಕೆಲವರ ಬೆನ್ನಿಗೆ ಏಟು ಬಿತ್ತು ಮುಂದೆ ಕಳಿಸಲು.
ಇತ್ತ ಹಣವೂ ಹೋಯಿತು. ಸರಿ ದರ್ಶನವೂ ಇಲ್ಲ. ಏನಪಾ ಸ್ವಾಮಿ ನಮ್ಮಪ್ಪಾ ಇದು? ಭಕ್ತರ ಉದ್ಗಾರ!
ಭಕ್ತರ ಉದ್ಧಾರ ಮಡುವ ಸ್ವಾಮಿ ನೀನು. ಶರಣು ಬಂದಿದ್ದೇವೆ ಎನಲು ಉದ್ಧರಿಸುವ ನಮ್ಮ ಶ್ರೀನಿವಾಸ. ಇದು ಮೇಲ್ನೋಟದ ಅರ್ಥ. ತಾತ್ವಿಕವಾಗಿ ನೋಡೋಣ. --
ಜಯಮಂಗಳಂ ನಿತ್ಯಶುಭ ಮಂಗಳಂ |ಪ|
ಶ್ರೀಶ್ರೀನಿವಾಸಗೆ ಜಯವಾಗಲಿ. ಮಂಗಲವಾಗಲಿ. ಬ್ರಹ್ಮಾಂಡದ ಒಡೆಯಗೆ ಅದೆಂಥ ಜಯ, ಶುಭ, ಮಂಗಳ?
YOU ARE READING
ದಾಸ ಸಾಹಿತ್ಯ
Poetry*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...