*ಶ್ರೀಂ ಶ್ರೀ ಕಂ ಕಪಿಲಾಯ ನಮಃ*
*ಶ್ರೀಂ ಶ್ರೀ ಕಂ ಕಪಿಲಾಯ ನಮಃ*
*ಲಕ್ಷ್ಮೀಕಾಂತ ಗುರುಮ್ ವಂದೇ*
*ಲಕ್ಷಣಾರ್ಯ ಮಹಂ ಸದಾ*
*ರಕ್ಷಿತಾನ್ ಸ್ವೇನ ಕುರ್ವಾಣಮ್*
*ಲಕ್ಷೇಶಾನ್ ಭಿಕ್ಷುಕಾನಪಿ*ಶ್ರೀಮದ್ವ್ಯಾಸರಾಜ ಮಠ (ಸೋಸಲೆ) ಯ,15 ನೇ ಶತಮಾನದ ಮಹಾನ್ ಯತಿಗಳಾದ, ಶ್ರೀಮದ್ವ್ಯಾಸರಾಜರಿಂದ ಪ್ರತಿಷ್ಠಿತ 300 ಪ್ರಾಣದೇವರ ಪ್ರತಿಮಾ ಸಂರಕ್ಷಣಾಭಾರವನ್ನು ಆಂಧ್ರಪ್ರದೇಶದ, ಪೆನುಗೊಂಡೆಯಲ್ಲಿ ವಹಿಸಿದ, ಶ್ರೀ ರಾಮತೀರ್ಥರ ಶಿಷ್ಯರು, ಶ್ರೀ ಶ್ರೀಪತಿತೀರ್ಥರ ಗುರುಗಳೂ ಆದ, ಪರಮ ವೈರಾಗ್ಯಶಾಲಿಗಳಾದ ಶ್ರೀ *ಲಕ್ಷ್ಮೀಕಾಂತ ತೀರ್ಥರ* ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನಗಳ ಕಾಲ... (ಪೆನುಗೊಂಡ, ಆಂಧ್ರಪ್ರದೇಶ)
ಹಾಗೆಯೇ...
*ವಿದ್ವತ್ಕುಮುದ ಚಂದ್ರಾಯ ಭಕ್ತಪಂಕಜ ಭಾನವೇ/*
*ವಿದ್ಯಾಪೂರ್ಣಾಯ ಗುರವೇ ನಮಸ್ಸರ್ವೇಷ್ಟ ಹೇತವೇ/*ಶ್ರೀ ಸೋಸಲೆ ವ್ಯಾಸರಾಜ ಮಠದಲ್ಲಿ ವಿರಾಜಮಾನರಾಗಿ, ಇಡೀ ದಕ್ಷಿಣ ಭಾರತ ದೇಶ ಯಾತ್ರೆಯನ್ನು ಸಮಸ್ತ ರಾಜೋಪಚಾರಗಳಿಂದ ಜೊತೆಗೂಡಿಸಿ ಮಾಡಿ ಬಂದ, ವಾದಿಗಳನ್ನು ಸೋಲಿಸಿದ ಜ್ಞಾನಿವರೇಣ್ಯರು, ಶ್ರೀ ವಿದ್ಯಾನಿಧಿತೀರ್ಥರ ಶಿಷ್ಯರು, ಶ್ರೀ ವಿದ್ಯಾಸಿಂಧುತೀರ್ಥರ, ಗೋಪಾಲ ಒಡೆಯರ ಗುರುಗಳೂ, 18 ನೇ ಶತಮಾನದ ಯತಿವರೇಣ್ಯರು, 48 ವರ್ಷಗಳ ಕಾಲ ವೇದಾಂತಸಾಮ್ರಾಜ್ಯದ ಪೀಠವನ್ನಧಿರೋಹಿಸಿದ ಶ್ರೀ *ವಿದ್ಯಾಪೂರ್ಣತೀರ್ಥರ* ಆರಾಧನಾ ಮಹೋತ್ಸವ (ಸೋಸಲೆ, ಟಿ. ನರಸೀಪುರ) ಇಂದು. ಶ್ರೀ ಮಹಾನ್ ಯತಿದ್ವಯರ ಅನುಗ್ರಹ ಸದಾ ನಮಗಿರಲಿ ಎಂದು ಪ್ರಾರ್ಥನೆ ಮಾಡುತ್ತಾ....
*ನಾದನೀರಾಜನದಿಂ ದಾಸಸುರಭಿ* 🙏🏽
YOU ARE READING
ದಾಸ ಸಾಹಿತ್ಯ
Poésie*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...