*ರಾಗ* *ಸಿಂಧುಭೈರವಿ* *ತಾಳ* *ಆದಿ*
ಕೊಟ್ಟ ಭಾಗ್ಯವೆ ಸಾಕೋ ಶ್ರೀ
॥ಪ॥ಕೃಷ್ಣನ ದಯಬೇಕೋ ದೇವ ॥ಅ.ಪ॥
ಸಾಸಿರ ಬಂದರೆ ಶಾಂತಿಯೆಂದರಿತೆನೊ
ಸಾಸಿರ ಬಂದಿತು ಶಾಂತಿ ಕಾಣಲಿಲ್ಲ
ಸಾಸಿರ ಸಾಸಿರವೇಸು ಬಂದವೋ
ಕ್ಲೇಶವು ಏರಿತು ಮೋಸಹೋದೆನೊ ॥೧॥ಗಾಳಿಯ ಗುದ್ದಿ ಕೈ ಕೀಲು ಮರಿಯಿತೊ
ಕೇಳುವುದಿಲ್ಲವೊ ನಾಳಿನ ಕೂಳನು
ಕಾಲಕಾಲಕೆ ಹುಲಿ ಹಾಲನು ತರುತಿಹ
ಬಾಲಗೋಪಾಲನ ಕೇಳಿ ಮೋಸಹೋದೆ ॥೨॥ಬೇಡವೆನ್ನುವರಿಗೆ ನೀಡುವ ದೊರೆ ನೀ
ರೂಢಿಯ ಬಲ್ಲೆನೋ ಕಾಡುವುದಿಲ್ಲವೊ
ನೀಡಿದ ಭಾಗ್ಯವು ಕೇಡುತರದೆ ಕಾ
ಪಾಡಬೇಕೆಲೊ ಪ್ರೌಢ *ಪ್ರಸನ್ನನೆ* ॥೩॥
YOU ARE READING
ದಾಸ ಸಾಹಿತ್ಯ
Poesia*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...