ಶ್ರೀ ಸತ್ಯಾತ್ಮತೀರ್ಥ

0 0 0
                                    

[*ತಂ ನಾರಸಿಂಹಂ ನಮಾಮಿ !*

ಇವತ್ತು ಎಲ್ಲಾದರೂ ಬ್ರಹ್ಮವಿದ್ಯೆ ಉಳಿದಿದೆ ಅಂದರೆ ಅದಕ್ಕೆ ಮೂಲಕಾರಣರೇ ಶ್ರೀ ಶ್ರೀ ೧೦೦೮ ಶ್ರೀ ಸತ್ಯಧ್ಯಾನತೀರ್ಥ ಶ್ರೀಪಾದಂಗಳವರು. ಅವರಿಂದಲೇ ವಿದ್ಯಾಪರಂಪರೆ ಮುಂದುವರೆದುಕೊಂಡು ಬಂದಿದೆ.
ಅಧ್ಯಾತ್ಮ ಬಾಂಧವರೇ
ತಮಗೆಲ್ಲಾ ತಿಳಿದಿರುವ ಹಾಗೆ  ಕೆಲವು ವರ್ಷಗಳ ಹಿಂದೆ *ದಿನಕ್ಕೊಬ್ಬ ಧ್ಯಾನಶಿಷ್ಯರ ಸ್ಮರಣೆ* ಎಂದು ಹಾಗೂ ಕೆಲವು ತಿಂಗಳುಗಳ ಹಿಂದೆ *ದಿನಕ್ಕೊಬ್ಬ ಮೋದಶಿಷ್ಯರ ಸ್ಮರಣೆ* ಹಾಗೂ ಕೆಲವು ದಿನಗಳ ಹಿಂದೆ *ದಿನಕ್ಕೊಬ್ಬ ಮಾನ್ಯಶಿಷ್ಯರ ಸ್ಮರಣೆ* ಎಂಬ ಶೀರ್ಷಿಕೆಯೊಂದಿಗೆ ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಸಮಸ್ತ ವಿದ್ಯಾಶಿಷ್ಯರ ಸ್ಮರಣೆ ಹಾಗೂ ಶ್ರೀ ಶ್ರೀ ಸತ್ಯಪ್ರಮೋದತೀರ್ಥರ ಸಮಸ್ತ ವಿದ್ಯಾಶಿಷ್ಯರ ಸ್ಮರಣೆ ಹಾಗೂ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರ ಸಮಸ್ತ ವಿದ್ಯಾಶಿಷ್ಯರ ಸ್ಮರಣೆಯನ್ನು ನಮ್ಮ ಗುರುಗಳ ತಂದೆತಾಯಿಗಳ ಅನುಗ್ರಹದಿಂದ ಯಥಾಶಕ್ತಿಯಾಗಿ ಮಾಡಿ ಅವರೆಲ್ಲರ ಅನುಗ್ರಹವನ್ನು ಪ್ರಾರ್ಥನೆ ಮಾಡಿದ್ದೇವೆ.
ಇನ್ನು ಮುಂದಿನ ದಿನಗಳಲ್ಲಿ ಶ್ರೀ ಸತ್ಯಧ್ಯಾನತೀರ್ಥರ ಪರಂಪರೆಯಲ್ಲಿ ಬಂದ ಅವರ ಹಾಗೇ ವಿದ್ಯಾಪ್ರಪಂಚವನ್ನು ಮುಂದುವರೆಸುತ್ತಿರುವ ಶ್ರೀ ಸತ್ಯಪ್ರಮೋದತೀರ್ಥರ ಕರಕಮಲಸಂಜಾತರಾದ ನಮ್ಮ ಗುರುಗಳಾದ ೧೦೦೮ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಲ್ಲಿ ಅಧ್ಯಯನ ಮಾಡಿದ ಸಮಸ್ತ ವಿದ್ಯಾಶಿಷ್ಯರ ಸ್ಮರಣೆಯನ್ನು *ದಿನಕ್ಕೊಬ್ಬ ಆತ್ಮಶಿಷ್ಯರ ಸ್ಮರಣೆ*  ಎಂಬ ಶೀರ್ಷಿಕೆಯೊಂದಿಗೆ ದಿನಕ್ಕೊಬ್ಬರಂತೆ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ. ಅವರ ಶಿಷ್ಯರನ್ನು ಸ್ಮರಣೆ ಮಾಡುವುದೇ ಅವರಿಗೆ ಪರಮಸಂತೋಷ. ನಮ್ಮ ಗುರುಗಳಾದ ಶ್ರೀ ಶ್ರೀ ಸತ್ಯಾತ್ಮತೀರ್ಥರಲ್ಲಿ  ಅನೇಕ ಯತಿಶಿಷ್ಯರು, ಗೃಹಸ್ಥಶಿಷ್ಯರು ಅಧ್ಯಯನ ಮಾಡಿದ್ದಾರೆ. ಮಾಡುತ್ತಲಿದ್ದಾರೆ. ಮಾಡಲಿದ್ದಾರೆ. ಅವರ ಸ್ಮರಣೆಯನ್ನು ಗುರುಗಳ ತಂದೆತಾಯಿಗಳ ಅನುಗ್ರಹದಿಂದ ಯಥಾಶಕ್ತಿಯಾಗಿ  ಶ್ರೀ ಸತ್ಯಸಂಧತೀರ್ಥರ ಆರಾಧನಾ ಪವಿತ್ರ ದಿನವಾದ ಇಂದಿನಿಂದ ಮಾಡಿ ಅವರ ಅನುಗ್ರಹವನ್ನು ಪ್ರಾರ್ಥನೆ ಮಾಡೋಣ.

*ಕೊರೋನಾನಾಶಕ್ಕಾಗಿ ಸರ್ವರೂ ಪ್ರಾರ್ಥಿಸಿ.*

ದಿನಕ್ಕೊಬ್ಬ ಆತ್ಮಶಿಷ್ಯರ ಸ್ಮರಣೆ :-*

*೧) ಪಂ. ಮಹಿಷಿ ಆನಂದಾಚಾರ್ಯರು*

ಪರಮಪೂಜ್ಯ ೧೦೦೮ ಶ್ರೀ ಸತ್ಯಪ್ರಮೋದತೀರ್ಥರಿಂದ ಸ್ಥಾಪಿತವಾದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ ತರ್ಕ, ವೇದಾಂತ, ವ್ಯಾಕರಣ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಪರಮಪೂಜ್ಯ ೧೦೦೮ ಶ್ರೀ ಸತ್ಯಾತ್ಮತೀರ್ಥರ ಸನ್ನಿಧಿಯಲ್ಲಿ ಶ್ರೀಮನ್ನ್ಯಾಯಸುಧಾ ಅಧ್ಯಯನ ಮಾಡಿ ಮಳಖೇಡ ಕ್ಷೇತ್ರದಲ್ಲಿ ಶ್ರೀಮಜ್ಜಯತೀರ್ಥರ ಸನ್ನಿಧಿಯಲ್ಲಿ ೧೯೯೯ ರಲ್ಲಿ ಮಹಾಸ್ವಾಮಿಗಳು ನಡೆಸಿದ ಮೊಟ್ಟಮೊದಲ ಶ್ರೀಮನ್ನ್ಯಾಯಸುಧಾ ಮಂಗಳೋತ್ಸವದಲ್ಲಿ ತಮ್ಮ ಸುಧಾಮಂಗಳವನ್ನು ನೆರವೇರಿಸಿ ಪಂಡಿತರಾದವರು *ಮಹಿಷಿ ಆನಂದಾಚಾರ್ಯರು.* ಸಾತ್ವಿಕರಾದ ಇವರು ಹೊಸಪೇಟೆಯನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಶೇಷವಾಗಿ ಧರ್ಮದ ಜಾಗೃತಿ ಮಾಡುವ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಮಹಾಸ್ವಾಮಿಗಳು ಶ್ರೀಮನ್ಮೂಲರಾಮಚಂದ್ರದೇವರ ಪೂಜಾ ಮಾಡುವ ಸಂದರ್ಭದಲ್ಲಿ ಬಲಸೇವೆ ಮಾಡುವ ಮಹಾಭಾಗ್ಯವನ್ನು ಪಡೆದಿದ್ದಾರೆ. ಇವತ್ತಿಗೂ ಮಾಡ್ತಾಯಿದ್ದಾರೆ. ಮಠದಿಂದ ನಡೆಯುವ ಕಾರ್ಯಕ್ರಮಗಳನ್ನು ಪೂರ್ಣ ಜವಾಬ್ದಾರಿಯನ್ನು ಹೊತ್ತು ಅಚ್ಚುಕಟ್ಟಾಗಿ ಕೆಲಸಮಾಡುವವರು. ವಿದ್ಯಾಪೀಠದ ಎಲ್ಲರಿಗೂ ನೆಚ್ಚಿನ ಹಿರಿಯಣ್ಣನಾಗಿ ಮಾರ್ಗದರ್ಶಕರಾಗಿ  ಅನೇಕ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಿ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾದವರು ಆನಂದಾಚಾರ್ಯರು. ಅಂಥ

ದಾಸ ಸಾಹಿತ್ಯWhere stories live. Discover now