ಕೌತಾಳಂ ರಂಗಯ್ಯ ತಾತನವರ

5 0 0
                                    

[4/6 2:51 ಅಪರಾಹ್ನ] Prasad Madwa Grpjj Punyavanta: *||ಗುರು ಸ್ಮರಣೆ ಇಂದ ಸಕಲ ಆಪತ್ತು ಪರಿಹಾರ*||
🙏🙏
*ಕೌತಾಳಂ ರಂಗಯ್ಯ ತಾತನವರ ಆರಾಧನಾ ನಾಳೆ ಇಂದ ಮೂರು ದಿನಗಳ ಕಾಲ.. ಇವರೇ ಮುಂದೆ ನಮ್ಮ ಶ್ರೀ ಇಭರಾಮಪುರ ಅಪ್ಪಾವರು ಆಗಿ ಅವತಾರ ಮಾಡಿದರೆಂದು ಅವರ ಭಕುತರ ನಂಬಿಕೆ..*
*ಇವರಿಬ್ಬರಿರು ಭಗವಂತನ ಕೃಪೆಯಿಂದ ತೋರಿದ ಕೆಲ ಸಾಮ್ಯತೆ ಇರುವ ಮಹಿಮೆಗಳು...*
👏👏
*೧)ಕೌತಾಳಂ ರಂಗಯ್ಯ ತಾತನವರು ಬರಗಾಲ ಪೀಡಿತ ಕರ್ನೂಲು ನಲ್ಲಿ ಮಳೆ ತರಿಸಿದರೆ..*
*ನಮ್ಮ ಇಭರಾಮಪುರ ಶ್ರೀಅಪ್ಪಾವರು ಬರಗಾಲ ಪ್ರದೇಶವಾದ ಗದ್ವಾಲ್ನಲ್ಲಿ ಮತ್ತು ಮಳೆ ಇಲ್ಲದೇ ಇದ್ದ ಇಭರಾಮಪುರ ದಲ್ಲಿ ಸಹ ಭಕ್ತರ ಅಪೇಕ್ಷಿತ ಮೇರೆಗೆ ಮಳೆಯನ್ನು ತರಿಸಿದರು.*

*೨)ಶ್ರೀ ರಂಗಯ್ಯ ತಾತನವರು ತಮ್ಮ ತಾಯಿಗೆ ಮನೆಯ ಮಾಳಿಗೆಯ ಮೇಲೆ ತಿರುಪತಿಯ ಶ್ರೀನಿವಾಸನ ಬ್ರಹ್ಮೋತ್ಸವವನ್ನು ದರ್ಶನ ಮಾಡಿಸಿದರು.*
*ನಮ್ಮಶ್ರೀ ಅಪ್ಪಾವರು ತಮ್ಮ ಸೇವಕನ ಪತ್ನಿಯು ಹಂಪಿಯ ಜಾತ್ರೆಗೆ ಮಗನನ್ನು ಬಿಟ್ಟು ಹೋಗಲು ಮಗುವಿನ ಅಳು ನೋಡಲಾರದೆ ಆ ಮಗುವಿಗೆ ತಮ್ಮ ಮನೆಯ ಮಾಳಿಗೆಮೇಲೆ ಹಂಪಿಯ ಶ್ರೀ ವಿರೂಪಾಕ್ಷ ದೇವರ ದರ್ಶನ, ರಥೋತ್ಸವ ಮತ್ತು ಅವನ ತಾಯಿಯನ್ನು ತೋರಿಸಿದರು.*

*೩)ಶ್ರೀ ರಂಗಯ್ಯ ತಾತನವರಿಗೆ ಚೆನ್ನ ಕೇಶವ ದೇವರು ಸ್ವಪ್ನದಲ್ಲಿ ಬಂದು ತಾನಿರುವ ಸ್ಥಳವನ್ನು ಹೇಳಿ ಅವರಿಗೆ ಒಲಿದು ಬಂದು ಕೌತಾಳಂ ನಲ್ಲಿ ಪ್ರತಿಷ್ಠಿತ ಗೊಂಡನು.*
*ನಮ್ಮ ಶ್ರೀ ಅಪ್ಪಾವರಿಗೆ ಶ್ರೀ ಮುಖ್ಯ ಪ್ರಾಣದೇವರ ಸೂಚನೆಯಂತೆ ಮೈಸೂರು ಅರಮನೆಯಲ್ಲಿ ವಿಶ್ವಕರ್ಮ ನಿರ್ಮಿತ,ಪಾಂಡವರು ವಿಶೇಷವಾಗಿ ಅರ್ಜುನ ಕರಾರ್ಚಿತ ಪಂಚಮುಖಿ ಪ್ರಾಣದೇವರ ಮೂರ್ತಿಪ್ರಾಪ್ತಿ..*

*ಹೀಗೆ ಇನ್ನೂ ಅನೇಕ.. ಮಹಿಮೆಯನ್ನು ಭಗವಂತನ ಅನುಗ್ರಹ ದಿಂದ ಇವರಿಬ್ಬರು ತೋರಿಸಿದ್ದಾರೆ.*
ನಾಳೆ ಉಳಿದ ಭಾಗ..
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಪರಮ ಭಾಗವತರನು| ಕೊಂಡಾಡುವದು ಪ್ರತಿದಿನವೂ|*
🙏ಶ್ರೀ ಕಪಿಲಾಯನಮಃ🙏
✍️ಅ.ವಿಜಯವಿಠ್ಢಲ
[5/6 3:09 ಅಪರಾಹ್ನ] Prasad Madwa Grpjj Punyavanta: *||ಪರಮ ಭಾಗವತರನು ಕೊಂಡಾಡುವದು ಅನುದಿನವು*||🙏🙇‍♂️
*ಇಂದು ಕೌತಾಳಂ ಶ್ರೀರಂಗಯ್ಯ ತಾತನವರ ಪೂರ್ವ ಆರಾಧನೆ ಮಹೋತ್ಸವ..*
✍ಶ್ರೀ ರಂಗಯ್ಯನವರು ಬಾಲ್ಯದಲ್ಲಿಯೇ ಭಗವಂತನ ಸಾಕ್ಷಾತ್ಕಾರ ಪಡೆದಂತಹ ಮಹಾನುಭಾವರು.
*"ಶ್ರೀನಿವಾಸದೇವರು ಇವರನ್ನು ಪರೀಕ್ಷೆ ಮಾಡಲೊಸುಗ ಮಾನುಷ ರೂಪಧಾರಿಯಾಗಿ ಬಂದು ಇವರಿಗೆ ಅನುಗ್ರಹ ಮಾಡಿ, ತನ್ನ ನಿಜರೂಪ ತೋರಿಸಿ ಇವರ ತಲೆಯ ಮೇಲೆ ತನ್ನ ಅಭಯಹಸ್ತವನ್ನು ಇಟ್ಟು ಇವರ ನಾಲಿಗೆಯ ಮೇಲೆ ಬೀಜಾಕ್ಷರವನ್ನು ಬರೆದು ಅದೃಶ್ಯ ನಾಗುತ್ತಾನೆ".*
ಅಂದಿನಿಂದ ಇವರ ಜೀವನ ಚರ್ಯೆ ಬದಲಾಯಿತು.
ಒಮ್ಮೆ ಶ್ರೀರಂಗಯ್ಯ ನವರು ತಮ್ಮ ಪ್ರಿಯಶಿಷ್ಯನಾದ ಚನ್ನಯ್ಯನ ಸಂಗಡ ಕಾಶಿ ಯಾತ್ರೆ ಗೆ ಹೊರಟರು. *ಕಾಶಿಯಲ್ಲಿ ವಿಶ್ವನಾಥನ ಸನ್ನಿಧಿಯಲ್ಲಿ ಇರುವಾಗ ಒಂದು ದಿನ ಗಂಗಾ ಸ್ನಾನ ಮಾಡಲು ಹೋದಾಗ ಒಂದು ಶಿವಲಿಂಗ ದೊರೆಯಿತು.*.
ಈಗಲು ಅದು ಕೌತಾಳಂ ನಲ್ಲಿ ಅವರ ವೃಂದಾವನದ ಹತ್ತಿರ ಇದೆ.
ನಂತರ ಸಂಚಾರ ಮಾಡುತ್ತಾ ಕರ್ನೂಲು ಗೆ ಬರುತ್ತಾರೆ.
*ಭೀಕರ ಬರಗಾಲ,ಮಳೆ ಬೆಳೆಗಳು ಇಲ್ಲದೇ ,ಕುಡಿಯುವ ನೀರು ಸಹ ಇಲ್ಲದೇ ಜನರೆಲ್ಲ ಬಹಳ ಕಷ್ಟ ಒಳಗಾಗಿದ್ದರು.*
ಆ ಸಮಯದಲ್ಲಿ ಇವರು ಬಂದಿದ್ದನ್ನು ಕೇಳಿದ ಕರ್ನೂಲು ನವಾಬನಾದ ಆಫೀಜ್ ಖಾನ.
ಇವನ ಮಂತ್ರಿ ಕೃಷ್ಣ ರಾಯ.
ಶ್ರೀರಂಗಯ್ಯ ನವರ ಮಹಿಮೆಯನ್ನು ತಿಳಿದ ಇವರು ತಮ್ಮ ಅರಮನೆ ಗೆ ರಾಜಮರ್ಯಾದೆ ಇಂದ ಕರೆದುಕೊಂಡು ಹೋಗುತ್ತಾರೆ.
ಆ ವೈಭವವನ್ನು ನೋಡಿ ಅಲ್ಲಿ ಇದ್ದ ಕೆಲವರಿಗೆ ಹೊಟ್ಟೆ ಉರಿಯಾಗುತ್ತದೆ.ಅದಕ್ಕೆ ನವಾಬನ ಗುರು ಕೂಡ ಸೇರಿರುತ್ತಾನೆ.
ಮರುದಿನ ಪ್ರಾತಕಾಲದಲ್ಲಿ *ನವಾಬ ತನ್ನ ಗುರುಗಳ ಜೊತೆಗೆ ಶ್ರೀರಂಗಯ್ಯ ನವರ ದರುಶನ ಮಾಡಲು ತಟ್ಟೆ ಯಲ್ಲಿ ಹೂವು ಹಣ್ಣು ಸಮೇತ ಇಟ್ಟುಕೊಂಡು ಬರುತ್ತಾನೆ.
*ಆದರೆ ನವಾಬನ ಗುರುವು ಹೇಗಾದರು ಇವರಿಗೆ ಅವಮಾನ ಮಾಡಬೇಕೆಂದು ತಟ್ಟೆ ಯಲ್ಲಿ ಮಾಂಸವನ್ನು ತುಂಬಿ ವಸ್ತ್ರ ವನ್ನು ಹೊದಿಸಿ ತೆಗೆದುಕೊಂಡು ಬಂದಿರುತ್ತಾನೆ.*
ಅದೇ ಸಮಯದಲ್ಲಿ ಶ್ರೀರಂಗಯ್ಯ ನವರು ಧ್ಯಾನಸ್ಥ ರಾಗಿದ್ದರು.
*ಬಂದ ಆ ರಾಜಗುರುವಿನ ದುರ್ಭುದ್ದಿ ಅವರಿಗೆ ತಿಳಿಯಿತು.*
ಅವಾಗ ನವಾಬನು ತಾನು ತಂದ ಫಲಗಳ ತಟ್ಟೆ ಅವರ ಮುಂದೆ ಇಟ್ಟನು.
*ರಾಜಗುರುವು ಸಹ ಮಾಂಸ ತುಂಬಿದ ತಟ್ಟೆ ಅವರ ಮುಂದೆ ಇರಿಸಿದನು.*
*ಅದನ್ನು ಕಂಡ ರಂಗಯ್ಯ ನವರು ಆ ನವಾಬನ ಗುರುವಾದ ಖಾಜಿ ಯವರಿಗೆ ಹೇಳುತ್ತಾರೆ*.
*""ಖಾಜೀಯವರೇ !!ನಮ್ಮ ಭಗವಂತನು ಯಾರಲ್ಲು ,ಯಾವುದರಲ್ಲು ದ್ವೇಷ ಮಾಡುವವನಲ್ಲ. ಕರುಣಾನಿಧಿ ಅವನು".*
*"ಸರ್ವತ್ರ ವ್ಯಾಪ್ತಿ. ರಸ ರೂಪಿಯಾದ ಅವನ ಸ್ಮರಣೆ ಇಂದ ಸರ್ವವು ರಸವಾಗಿ ತೋರುವದು" ಅಂತ ಹೇಳಿ ಆ ತಟ್ಟೆಯ ಮೇಲಿನ ಬಟ್ಟೆ ತೆಗಿಸಲಾಗಿ ಅದು ಹಣ್ಣು ಗಳಾಗಿ ಪರಿವರ್ತನೆ ಆಗಿರುತ್ತದೆ.*
ಆದರು ಖಾಜಿಗೆ ತನಗಾದ ಈ ಅವಮಾನವನ್ನು ಮನಸ್ಸಿಗೆ ತಂದುಕೊಂಡು ಹೇಗಾದರೂ ಸರಿಯೇ ಇವರಿಗೆ ಅಪಮಾನ ಆಗಬೇಕು ಅಂತ ನಿರ್ಧಾರ ಮಾಡಿ
*"ಸ್ವಾಮಿ !!!ನಮ್ಮ ರಾಜ್ಯ ದಲ್ಲಿ ಮಳೆ ಇಲ್ಲ.ಬರಗಾಲ ಇದೆ. ಮಳೆ ತರಿಸಿ ಅನುಗ್ರಹ ಮಾಡಿ ಅಂತ ಹೇಳುತ್ತಾನೆ.*
ಅವಾಗ ಶ್ರೀರಂಗಯ್ಯ ನವರು
*ಹೇ!! ಶ್ರೀನಿವಾಸ!! ನಿನ್ನ ಚಿತ್ತಕೆ ಬಂದುದು ಎನ್ನ ಚಿತ್ತಕೆ ಬರಲಿ ಅಂತ ಸ್ಮರಿಸಿ ಇನ್ನೂ ಮೂರು ದಿನದ ಒಳಗಾಗಿ ನಮ್ಮ ಸ್ವಾಮಿಯ ಅನುಗ್ರಹ ದಿಂದ ಮಳೆ ಆಗುವದು ಅಂತ ಆಶೀರ್ವಾದ ಮಾಡುವರು..*
ಎರಡು ದಿನ ಕಳೆಯಿತು. ಮಳೆ ಬರುವ ಸೂಚನೆ ಇಲ್ಲ..ನವಾಬನ ಗುರುವಿಗೆ ಸಂತಸ.
*ಕೃಷ್ಣ ರಾಯನಿಗೆ ದಿಗಿಲು.ಮುಂದೆ ಆಗುವ ಅನಾಹುತವನ್ನು ನೆನೆದು ವಿಷ ಪ್ರಾಶನ ಮಾಡಲು ನಿಶ್ಚಯಿಸಿದ*.
*ತಮ್ಮ ಯೋಗ ದೃಷ್ಟಿಯಿಂದ ಇದನ್ನು ಅರಿತ ಶ್ರೀ ರಂಗಯ್ಯನವರು ಕೃಷ್ಣ ರಾಯನಿಗೆ ತಮ್ಮ ಬಳಿ ಬರಲು ಹೇಳಿ ಕಳುಹಿಸಿ*
*"ರಾಯ! ಭಗವಂತ ನಲ್ಲಿ ನಂಬಿಕೆ ಇಡು.ನಮ್ಮ ಸ್ವಾಮಿ ಶ್ರೀನಿವಾಸನು ನಂಬಿದವರ ಕೈ ಬಿಡಲಾರ'* ಎಂದು ಹೇಳುತ್ತಾರೆ.
ಸಾಯಂಕಾಲ ವಾಯಿತು.
ಶ್ರೀರಂಗಯ್ಯನವರು ತಮ್ಮ ಶಿಷ್ಯನಿಗೆ ಕರೆದು *"ಮಳೆಯ ಸೂಚನೆ ಇದೆಯೇ??" ಅಂತ ಕೇಳಿದರು..*
ಅವನು ಇಲ್ಲ ವೆಂದು ಹೇಳಿದ.
*ತಕ್ಷಣ ಶ್ರೀರಂಗಯ್ಯ ನವರು ತಮ್ಮ ಕುಲದೈವವಾದ ಆ ಶ್ರೀನಿವಾಸನ ಸ್ಮರಣೆ ಮಾಡುತ್ತಾ ಒಂದು ತೆಂಗಿನ ಕಾಯಿಯನ್ನು ತರಿಸಿ ಆಕಾಶದತ್ತ ಎಸೆಯಲು ಹೇಳುತ್ತಾರೆ.*
*ಹೀಗೆ ಎರಡು ಸಾರಿ ಮಾಡುವದರೊಳಗಾಗಿ ಬರಿದಾದ ಆಕಾಶವು ಮೇಘ ಆವೃತ ವಾಯಿತು.*
*ಭಯಂಕರ ವಾದ ಗುಡುಗು ಮಿಂಚುಗಳ ಆರ್ಭಟ ಶುರುವಾಯಿತು‌.ಮಳೆಯನ್ನೇ ಕಾಣದ ಆ ಊರಿನ ಜನರಿಗೆ ಧಾರಕಾರವಾದ ಮುಸಲಧಾರೆಯಂತೆ ಮಳೆ ಸುರಿಯಲು ಆರಂಭವಾಯಿತು.*
*ಕೆರೆ ಭಾವಿ ಗಳು ತುಂಬಿ ತುಳುಕಿದವು.*
ಜನರ ಹಾಗು ನವಾಬನ ಆನಂದಕ್ಕೆ ಪಾರವೇ ಇಲ್ಲ.
*ನವಾಬನ ಗುರುವಿನ ಅಹಂಕಾರ ವನ್ನು ಶ್ರೀರಂಗಯ್ಯ ನವರು ಮುರಿದರು.*
*ಹೀಗೆ ಆ ಶ್ರೀ ಹರಿಯು ತನ್ನ ಭಕ್ತರು ಯಾರಿದ್ದಾರೆ ಅವರೊಳಗೆ ನಿಂತು ಈ ತರಹದ ಕಾರ್ಯ ವನ್ನು ಮಾಡಿಸಿ ಅವರಿಗೆ ಹೆಸರನ್ನು ತಂದು ಕೊಡುವ.*
*ತಾನೆ ಮಾಡುವ ಈ ಲೀಲೆ ಬಹು ವಿಚಿತ್ರ..*
*ಉದಯ ಕಾಲದಿ ಇಂತಹ ಪರಮ ಭಾಗವತರನ್ನು ಕೊಂಡಾಡುವದು ನಮ್ಮ ಜನ್ಮಾಂತರದ ಪುಣ್ಯ ಮತ್ತು ಜೀವನ ಧನ್ಯ.*
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಶ್ರೀ ಶೈಲ ಯಾತ್ರೆ ಯ ಮಾಡಿ|ನವಾಬ ಗುರು ತಂದ ಅಶುಚಿ ಮಾಂಸ| ಫಲವ ಮಾಡಿ| ಅಸುರ ಹರ ಲಕುಮೀಶಕೇಶವ||*
*ರಂಗಯ್ಯನ ನೋಡಿರೈ|*
*ಕೌತಾಳದ ರಂಗಯ್ಯನ ಪಾಡಿರೈ||*
🙏ಶ್ರೀ ರಂಗಯ್ಯ ಗುರುವೇ ನಮಃ🙏
[6/6 4:23 ಅಪರಾಹ್ನ] Prasad Madwa Grpjj Punyavanta: *ರಂಗಯ್ಯನ ನೋಡಿರೈ|* *ಕೌತಾಳದ ಶ್ರೀ ರಂಗಯ್ಯನ ಪಾಡಿರೈ|*
*ನಂಬಿ ಭಜಿಸುವರ ಇಷ್ಟ*| *ಅನುಗಾಲ ಬಿಡದೇ*|
*ತುಂಬಿಕೊಡುವ ಸತ್ಯ ನಿಷ್ಟ|*
🙏ಹರಿದಿನದ ನಮನಗಳು🙏
*ನವರಾತ್ರಿಯ ಸಮಯ..*.
ಎಲ್ಲಾರ ಮನೆ ಮತ್ತು ಮನಗಳಲ್ಲಿ ಜಗತ್ತಿನ ತಂದೆಯಾದ ಶ್ರೀನಿವಾಸನ ಕಲ್ಯಾಣದ ಸಡಗರ ಸಂಭ್ರಮ.
*"ಒಲಿದು ಭಕುತರಿಗಾಗಿ ಮದುವೆ ಹವಣಿಸಿಕೊಂಡ| ಸುಲಭ ದೇವರ ದೇವ ವಿಜಯವಿಠ್ಠಲ ವೆಂಕಟನ| ಚರಿತ್ರೆ.."*"
ಎಲ್ಲಾ ಭಕ್ತರ ಮನೆಯಲ್ಲಿ ಪಾರಾಯಣ,ಶ್ರವಣ ಬಹು ಸಂಭ್ರಮದಿಂದ ನಡೆದಿದೆ.
ಶ್ರೀರಂಗಯ್ಯನವರ ತಾಯಿ ಲಕ್ಷ್ಮಮ್ಮ ನವರಿಗೆ *ದೇವಗಿರಿಯಾದ,ಭೂವೈಕುಂಠವಾದ, ಸಪ್ತಪರ್ವತಗಳ ,ಒಡೆಯನಾದ ಪದುಮಾವತಿಯ ಪ್ರಾಣಪ್ರಿಯನಾದ ಶ್ರೀನಿವಾಸನ* ದರುಶನ ಮಾಡಬೇಕೆಂದು ಬಹು ಅಪೇಕ್ಷೆ ಆಯಿತು.
*ಪುಣ್ಯ ಚರಿತನಾದ,* *ಶ್ರೀನಿವಾಸನ ಭಕ್ತನಾದ ತನ್ನ ಮಗನನ್ನು ಕುರಿತು*
*"ಮಗು.. ರಂಗ! ನನ್ನ ತಿರುಪತಿ ಗೆ ಕರೆದುಕೊಂಡು ಹೋಗುವಿಯಾ!!ಆ ಸ್ವಾಮಿಯ ಬ್ರಹ್ಮೋತ್ಸವ ನೋಡಬೇಕು ಎನ್ನುವ ಆಸೆ ಬಹಳವಾಗಿದೆ.ಕರೆದು ಕೊಂಡು ಹೋಗುವಿಯಾ?? ಎಂದಳು.*
*ಅದಕ್ಕೆ ರಂಗಯ್ಯ ನವರು*
*ಅಮ್ಮ!! ಎಲ್ಲಿ ನೋಡಲು ಅಲ್ಲಿ ವ್ಯಾಪ್ತನಾಗಿರುವ,ಕರೆದಲ್ಲಿಗೆ ಬರುವ ಕಡು ಕರುಣಾನಿಧಿ, ಆದ ಆ ಸ್ವಾಮಿಯ ವೈಭವವನ್ನು ಎಲ್ಲಾ ಕಡೆ ಕಾಣಬಹುದು..*.
*ಸಾಧನ ಶರೀರವಿದು. ಸಾಧಾರಣ ವಲ್ಲವು.. ಅಂತಹ ಈ ಶರೀರಕ್ಕೆ ಜನ್ಮವಿತ್ತ ನಿನ್ನ ಆಪೇಕ್ಷೆಯನ್ನು ಪೂರೈಸುವದು ನನ್ನ ಕರ್ತವ್ಯ. ಅದನ್ನು ತಪ್ಪದೇ ನಡೆಸಿಕೊಡುವೆನು ಅಂತ ಹೇಳುತ್ತಾರೆ..*.
ತಕ್ಷಣ
*ತಮ್ಮ ತಾಯಿಯನ್ನು ತಮ್ಮ ಮನೆಯ ಮಾಳಿಗೆಗೆ* ಕರೆದೊಯ್ದರು.
*ತಿರುಮಲೆಯ ದಿಕ್ಕಿನ ಕಡೆ ಕೈ ತೋರಿಸುತ್ತಾ*
*"ಅಮ್ಮಾ !!*
*ಅದೋ ನೋಡು.. ಬ್ರಹ್ಮಾಂಡದ ಒಡೆಯನಾದ,ಬ್ರಹ್ಮನ ಪಿತನಾದ ಆ ಶ್ರೀನಿವಾಸನ ಬ್ರಹ್ಮೋತ್ಸವ ದ ವೈಭವವನ್ನು..*.
*ಬಂಗಾರದ ಶಿಖರದಿಂದ ಒಪ್ಪುವ ಆ ಸ್ವಾಮಿಯ ಮಂದಿರ ನೋಡು..*. *ಆನಂದಾದ್ರಿಯಲ್ಲಿ ಇಂದಿರೆಯನ್ನು ತನ್ನ ಎದೆಯಲ್ಲಿ ಧರಿಸಿ ನಗುಮುಖದಿಂದ ನಿಂತ ಆ ಶ್ರೀನಿವಾಸನ ನೋಡು..ಅಂತ ಸಪ್ತಗಿರಿಯ ಒಡೆಯನ ದರ್ಶನವನ್ನು ತಾಯಿಗೆ ಮಾಡಿಸಿದರು..*.
*ನಂತರ ದೇವ ಬೀದಿಯ ನಾಲ್ಕು ಕಡೆ ಗರುಡವಾಹನನಾಗಿ ತನ್ನ ಮಡದಿಯರ ಕೂಡ ಸಡಗರದಿಂದ ಸಂಚರಿಸುವ ಆ ಸ್ವಾಮಿಯ ವೈಭವವನ್ನು ಮತ್ತು ಉತ್ಸವ ಮೂರ್ತಿಯನ್ನು ತಾಯಿಗೆ ದರುಶನ ಮಾಡಿಸಿದರು..* ..
*ಆ ಸ್ವಾಮಿಯ ಮುಂದೆ ಭಕ್ತರ ಭಜನೆ, ನರ್ತನೆ, ಅದರ ಮುಂದೆ ನಿಧಾನವಾಗಿ ಸಾಗುವ ಗಜ,ಅಶ್ವ ಗಳನ್ನು ಮತ್ತು ಹರಿದಾಸರ ಭಕ್ತರ ವೃಂದವನ್ನು ನೇರವಾಗಿ ಬಹು ಹತ್ತಿರ ದಿಂದ ಕಂಡಳು..*. ..
*ಆನಂದದಿಂದ ಕಣ್ಣು ಗಳಲ್ಲಿ ನೀರನ್ನು ಸುರಿಸುತ್ತಾ "ಗೋವಿಂದಾ!! ಗೋವಿಂದ!!"*🙏 ಎಂದು ಮುಕ್ತ ಕಂಠದಿಂದ ಕೂಗಿದಳು..
ಆ ತಾಯಿಗೆ ಕಾಲದ ಪರಿವೆಯೆ ಇಲ್ಲ.
*ಸಂಪೂರ್ಣ ಬ್ರಹ್ಮೋತ್ಸವ ದ ದರುಶನ ವಾದ ಮೇಲೆ* *" "ಮಗು!!ರಂಗಯ್ಯ ನಿನ್ನನ್ನು ಮಗನಾಗಿ ಪಡೆದ ನನ್ನ ಜನುಮ ಧನ್ಯವಾಯಿತು" ಎಂದಳು.*..
ಯಾವುದೇ ಟಿವಿ ಇಲ್ಲದ ಕಾಲ.
*ಭಗವಂತನ ಬ್ರಹ್ಮೋತ್ಸವದ ದರುಶನ ವನ್ನು ತಮ್ಮ ತಾಯಿಗೆ ನೇರವಾಗಿ ಮಾಡಿಸಿದ ಆ ಮಹಾನುಭಾವರ ಸ್ಮರಣೆ.. ಉದಯಕಾಲದಲ್ಲಿ ಮಾಡಿದರೆ ನಮ್ಮ ಈ ಜೀವನ ಧನ್ಯ..*!!....
*ಇಂತಹ ಪರಮ ಭಾಗವತರು ಅನೇಕ ಜನ..* *ಭಗವಂತನ ಅಪ್ಪಣೆಯಂತೆ ಧರೆಯೊಳು ಅವತಾರ ಮಾಡಿದ್ದಾರೆ..*..
*ಭಗವಂತನಿಂದ ದೂರವಾಗಿ, ಅಧರ್ಮ ನಿರತರಾಗಿ, ಸಂಸಾರ ದುಃಖ ದಿಂದ ನೊಂದು, ಬೆಂದ ಜನರನ್ನು ಉದ್ದಾರ ಮಾಡಲಿಕ್ಕೆ ಆಗಿಯೇ ಇಂತಹ ಅನೇಕ ಭಗವದ್ಭಕ್ತರ ಅವತಾರ ಮತ್ತು ಸಂಚಾರ ಎಲ್ಲಾ ಕಡೆ...*
ಇಂತಹ ಅನೇಕ
*ಪರಮ ಭಾಗವತರನ್ನು ಕೊಂಡಾಡುವದು ಪ್ರತಿದಿನವು..*..
🙏ಶ್ರೀ ಕೃಷ್ಣಾರ್ಪಣಮಸ್ತು🙏
*ಮಂಗಳ ಶುಭಾಂಗನೆ ರಂಗಯ್ಯನೇ*|
*ತುಂಗ ಮಹಿಮೋದ್ದಾರ ಮಹರಾಯನೇ*|
🙏ಶ್ರೀ ರಂಗಯ್ಯ ತಾತನವರ ಪಾದಕಮಲಕ್ಕೆ ನಮೋ ನಮಃ🙏

ದಾಸ ಸಾಹಿತ್ಯWhere stories live. Discover now