*ಶ್ರೀಂ ಶ್ರೀ ಕಂ ಕಪಿಲಾಯ ನಮಃ*
*ಭಾದ್ರಪದ ಕೃಷ್ಣ ದಶಮಿ**ಶ್ರೀಕೃಷ್ಣಚರಣಾಂಭೋಜ ಯುಗಳಾಸಕ್ತಮಾನಸಾನ್/*
*ವಿದ್ಯಾಪಯೋನಿಧಿಗುರೂನ್ ವಂದೇಽಹಂ ಬುದ್ಧಿಶುದ್ಧಯೇ//*ಇಂದು ಶ್ರೀಮದ್ವ್ಯಾಸರಾಜ ಮಠ ಸೋಸಲೆಯ ಮಹಾನ್ ಯತಿಗಳಾದ ಶ್ರೀ ವಿದ್ಯಾಪ್ರಸನ್ನತೀರ್ಥರ ಶಿಷ್ಯರೂ, ಶ್ರೀ ವಿದ್ಯಾವಾಚಸ್ಪತಿತೀರ್ಥರ ಗುರುಗಳೂ ಆದ, ಮಹಾ ಸಂಸ್ಥಾನಪೂಜಾವೈಭವ ನೋಡಿದರೆ ಪಯೋನಿಧಿತೀರ್ಥರ ವರೆಗೆ ಅಂತಲೇ ಸ್ತುತಿಸಲ್ಪಟ್ಟವರಾದ, ತಿರುಮಕೂಡಲಿನಲ್ಲಿ ಸೋಸಲೆ ವ್ಯಾಸರಾಜ ಮಠದ ಭವ್ಯವಾದ ಭವನವನ್ನು ನಿರ್ಮಾಣ ಮಾಡಿ ಶ್ರೀ ಶೇಷಚಂದ್ರಿಕಾಚಾರ್ಯರಿಗೆ ಸಮರ್ಪಣೆ ಮಾಡಿದವರಾದ, ಅಲ್ಲದೇ ನಮ್ಮ ನೆಲ್ಲೂರು,ತಿರುಪತಿ,ಬಳ್ಳಾರಿ ಮೊದಲಾದ ಅನೇಕ ಕಡೆಗಳಲ್ಲಿ ವ್ಯಾಸರಾಜಮಠದ ನಿರ್ಮಾಣ ಮಾಡಿಸಿ, ಚಂದ್ರಿಕಾ ಗುರುಕುಲವನ್ನು ಸ್ಥಾಪನೆ ಮಾಡಿದವರಾದ, *ತತ್ವಚಂದ್ರಿಕಾ* ಎನ್ನುವ ಮಾಸಪತ್ರಿಕೆಯನ್ನು ಆರಂಭಿಸಿದವರಾದ, ಅಖಿಲಭಾರತ ಮಾಧ್ವಮಂಡಲಿಗೆ ಹತ್ತು ವರ್ಷದ ಕಾಲ ಪೋಷಕರಾಗಿ ಸೇವೆ ಮಾಡಿ, ಮಠತ್ರಯಗಳ ಸಖ್ಯಕ್ಕಾಗಿ ಕೃಷಿ ಮಾಡಿದವರಾದ, ವಿರಕ್ತಿ ಶಿಖಾಮಣಿಗಳಾದ,ಜ್ಞಾನ ಸಂಪನ್ನರಾದ, ನಾ ಕಂಡ ಶ್ರೇಷ್ಠ ಗುರುಗಳು ಶ್ರೀ *ವಿದ್ಯಾಪಯೋನಿಧಿತೀರ್ಥರ* ಆರಾಧನಾ ಮಹೋತ್ಸವ, ತಿರುಮಕೂಡಲು, ತಿ. ನರಸೀಪುರ, ಮೈಸೂರಿನಲ್ಲಿ...
ಶ್ರೀ ಗುರುಗಳ ಅನುಗ್ರಹ ಸದಾಕಾಲ ನಮ್ಮ ಎಲ್ಲರಮೇಲೆ ಇರಲೆಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ....
*Sri Vidyapayonidhi Tirtharu
ಶ್ರೀ ವಿದ್ಯಾ ಪಯೋನಿಧಿತೀರ್ಥರುಶ್ರೀಕೃಷ್ಣಚರಣಾಂಭೋಜ
ಯುಗಳಾಸಕ್ತಮಾನಸಾನ್ |
ವಿದ್ಯಾಪಯೋನಿಧಿಗುರೂನ್
ವಂದೇ ಹಂ ಬುದ್ಧಿಶುದ್ಧಯೇ |shrIkRuShNacharaNaaMbhOja
yugaLaasaktamaanasaan |
vidyaapayOnidhigurUn vaMdE
haM buddhishuddhayE |ಆರಾಧನೆ - ಭಾದ್ರಪದ ಬಹಳ ದಶಮಿ
Aradhana – Bhadrapada Bahula Dashami
ವೃಂದಾವನ - ತಿರುಮಕೂಡಲು
Vrundavana – Tirumakoodalu
ಪೂರ್ವಾಶ್ರಮನಾಮ - ಪೂರ್ಣಬೋಧಾಚಾರ್
Poorvashrama name – PoornabodhacharHe was a Purohith by profession before taking the sanyasashrama.
Ashrama Gurugalu – Sri Vidyaprasanna Tirtharu
Ashrama Shishyaru – Sri Vidya Vachaspathi Tirtharu
Ashrama sweekara - 1969
Vrundavana Pravesha – 1997ಆಶ್ರಮ ಗುರುಗಳು : ಶ್ರೀ ವಿದ್ಯಾ ಪ್ರಸನ್ನ ತೀರ್ಥರು
ಆಶ್ರಮ ನಾಮ : ಶ್ರೀ ವಿದ್ಯಾ ಪಯೋನಿಧಿ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ವಿದ್ಯಾ ವಾಚಸ್ಪತಿ ತೀರ್ಥರು
ವೇದಾಂತ ಸಾಮ್ರಾಜ್ಯಾಧಿಪತ್ಯ : ಕ್ರಿ ಶ 1969 – 1997ತಂದೆ : ಶ್ರೀ ಕೃಷ್ಣ ನರಸಿಂಹಾಚಾರ್ಯರು
ತಾಯಿ : ಸಾಧ್ವೀ ಸತ್ಯಭಾಮಾ
ಜನನ : ಕ್ರಿ ಶ 14.07.1922ಈ ವರ್ಷ ಶ್ರೀಪಾದಂಗಳವರ ಜನ್ಮಶತಾಬ್ದಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶ್ರೀರಂಗ ಮತ್ತು ಬೆಂಗಳೂರಿನಲ್ಲಿ "ಚಂದ್ರಿಕಾ ಗುರುಕುಲ" ವನ್ನು ಸ್ಥಾಪಿಸಿದರು.
ಶ್ರೀ ವ್ಯಾಸರಾಜ ಮಠದ ” ತತ್ತ್ವ ಚಂದ್ರಿಕಾ” ಮಾಸ ಪತ್ರಿಕೆಯನ್ನು ಪ್ರಾರಂಭ ಮಾಡಿದರು.ನಮ್ಮ ತಂದೆಯವರು SN ರಾಮಚಂದ್ರಾಚಾರ್ಯರು, ಪೂರ್ಣಭೋದಾಚಾರ್ಯರು (ವಿದ್ಯಾ ಪಯೋನಿಧಿ ತೀರ್ಥರು), ಶ್ರೀ ಜಯತೀರ್ಥಾಚಾರ್ಯರು (ವಿದ್ಯಾ ವಾಚಸ್ಪತಿ ತೀರ್ಥರು) ಎಲ್ಲಾ ಬಾಲ್ಯ ಸ್ನೇಹಿತರು. ತಮ್ಮ ವಿದ್ವತ್ ಸಭೆಗಳಲ್ಲಿ ವಿದ್ವಾಂಸರಿಗೆ ವಿಶೇಷ ಮನ್ನಣೆ ಕೊಡುತ್ತಿದ್ದರು.
YOU ARE READING
ದಾಸ ಸಾಹಿತ್ಯ
Поэзия*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...