*ಶ್ರೀ ಸುಧೀಂದ್ರತೀರ್ಥ

1 0 0
                                    

*ಶ್ರೀ ಸುಧೀಂದ್ರತೀರ್ಥ ಶ್ರೀಪಾದಂಗಳವರ ಆರಾಧನಾ ಶುಭದಿನ*

ಬಡವ-ಶ್ರೀಮಂತ,
ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ
ಹೀಗೆ ಭೇದ ಭಾವ ಇಲ್ಲದಲೇ
ಸರ್ವರಿಗೂ ಪೂಜ್ಯರಾದವರು
ಶ್ರೀ ರಾಘವೇಂದ್ರ ಸ್ವಾಮಿಗಳು.
ಮತ್ತು
ಸರ್ವರಿಂದಲೂ ಮಾನ್ಯರಾದವರು
ನಮ್ಮ ರಾಯರು.
ಕಲಿಯುಗದ ಕಲ್ಪವೃಕ್ಷ ಕಾಮಧೇನುಗಳಾಗಿ
ನಮ್ಮೆಲ್ಲರಿಗೂ ಅನೇಕಾನೇಕ ರೀತಿಯಲ್ಲಿ ಅನುಗ್ರಹ ಮಾಡಿ,
ನಾವು ಬಯಸಿದ ಸಾತ್ವಿಕ ಬೇಡಿಕೆಗಳನ್ನು ಕೊಟ್ಟು ಅನುಗ್ರಹ ಮಾಡುತ್ತಿರುವ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ನಾವು ಎಷ್ಟು ಚಿರ ಋಣಿಗಳಾಗಿರಬೇಕೋ...
ಅಂತಹ ಮಾಣಿಕ್ಯವನ್ನು ಕರುಣಿಸಿದ
ಶ್ರೀ ಶ್ರೀ ಸುಧೀಂದ್ರತೀರ್ಥರಿಗೂ ಅಷ್ಟೇ
ಚಿರ ಋಣಿಗಳಾಗಿರಬೇಕು.
ವೆಂಕಟನಾಥರಿಗೆ ಸಂನ್ಯಾಸಾಶ್ರಮವನ್ನು ತೆಗೆದುಕೊಳ್ಳಲು ಇಷ್ಟ ಇಲ್ಲದಿರುವಾಗ
ಶ್ರೀ ಸುಧೀಂದ್ರತೀರ್ಥರು ತಮ್ಮ ಉಪಾಸ್ಯಮೂರ್ತಿಯಾದ
ಮೂಲರಾಮದೇವರಲ್ಲಿಯೇ
ಮತ್ತು ವಿದ್ಯಾದೇವತೆಯಲ್ಲಿ, ಪ್ರಾರ್ಥನೆಯನ್ನು ಸಲ್ಲಿಸಿ
ವೆಂಕಟನಾಥನೇ ನಮಗೆ ಶಿಷ್ಯನಾಗಿ ಬರಬೇಕು ಎಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರ ಫಲವಾಗಿ
ಇಂದು ನಾವೆಲ್ಲರೂ
ಅಂದುಕೊಂಡಿದ್ದನ್ನು ರಾಯರು ಕರುಣಿಸುತ್ತಿದ್ದಾರೆ...
ವೆಂಕಟನಾಥರನ್ನು ಜಗತ್ತಿಗೆ ಕೊಟ್ಟು ಉಪಕಾರ ಮಾಡಿದವರು
ಗೋಪಿಕಾಂಬ ಮತ್ತು ತಿಮ್ಮಣ್ಣಭಟ್ಟ ದಂಪತಿಗಳಾದರೇ....
ಅದೇ ವೆಂಕಟನಾಥರನ್ನು
ಹಂಸನಾಮಕ‌ ಪರಮಾತ್ಮನ ಸಾಕ್ಷಾತ್ ಪರಂಪರೆಯಲ್ಲಿ
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನದಲ್ಲಿ
ಶ್ರೀ ಪದ್ಮನಾಭತೀರ್ಥರು
ಶ್ರೀ ಜಯತೀರ್ಥರು
ಶ್ರೀ ವಿಬುಧೇಂದ್ರತೀರ್ಥರು
ಶ್ರೀ ವಿಜಯೀಂದ್ರತೀರ್ಥರು
ಮೊದಲಾದ ಮಹಾ‌ ಮಹಾ ಜ್ಞಾನಿವರೇಣ್ಯರಾಳಿದ
ಮಹಾ ವೇದಾಂತ ದಿಗ್ವಿಜಯ ವಿದ್ಯಾಸಿಂಹಾಸನದಲ್ಲಿ
ಕುಳ್ಳಿರಿಸಿ
ಚತುರ್ಯುಗ ಮೂರ್ತಿ ಬ್ರಹ್ಮ ಕರಾರ್ಚಿತ
ಶ್ರೀ ಮೂಲರಾಮದೇವರನ್ನು ಅರ್ಚಿಸುವ ಅವಕಾಶ ಕರುಣಿಸಿ
ತನ್ಮೂಲಕ‌ ನಮಗೆಲ್ಲರಿಗೂ ಅವರಿಂದ ಅನುಗ್ರಹ ಮಾಡಿಸುತ್ತಿರುವ
ಶ್ರೀ ಸುಧೀಂದ್ರತೀರ್ಥರಿಗೆ‌ ಅನಂತಾನಂತ ದಂಡಪ್ರಣಾಮಗಳು..

ರಾಜಮಹಾರಾಜರುಗಳು
ಶ್ರೀ ಸುಧೀಂದ್ರತೀರ್ಥರ ವರ್ಚಸ್ಸಿಗೆ,
ಅವರ ವಿದ್ವತ್‌ ಮತ್ತು ಪಾಂಡಿತ್ಯಕ್ಕೆ,
ಅವರ ಶಾಪಾನುಗ್ರಹ ಸಾಮರ್ಥ್ಯಕ್ಕೆ
ಅನೇಕಾನೇಕ ರೀತಿಯಲ್ಲಿ  ಮುತ್ತುರತ್ನಗಳಿಂದ
ರತ್ನಾಭಿಷೇಕಗಳನ್ನು ಮಾಡಿ ಕೃಥಾರ್ತರಾಗಿದ್ದಾರೆ.
ಶ್ರೀ ಸುಧೀಂದ್ರತೀರ್ಥರು ಮೂಲರಾಮಚಂದ್ರ ದೇವರ ಆರಾಧಕರಲ್ಲದೇ
ತಮ್ಮ ಕಾಲದಲ್ಲಿ ಸಂಸ್ಥಾನಕ್ಕೆ
ಗರುಡವಾಹನ ಶ್ರೀ ಲಕ್ಷ್ಮೀ ನಾರಾಯಣ ದೇವರನ್ನು
ಸಮರ್ಪಿಸಿದರು.
ಶ್ರೀ ಸುರೇಂದ್ರತೀರ್ಥರಂತಹ ಮಹಾ ತಪಸ್ವಿಗಳಿಗೆ ಪ್ರಶಿಷ್ಯರಾಗಿ,
ಶ್ರೀ ವಿಜಯೀಂದ್ರತೀರ್ಥರಂತಹ ಮಹಾ ಮಹೀಮರಿಗೆ ಶಿಷ್ಯರಾಗಿ
ಶ್ರೀ ರಾಘವೇಂದ್ರಸ್ವಾಮಿಗಳಂತಹ ಮಾಣಿಕ್ಯಕ್ಕೆ
ಗುರುಗಳಾಗಿ
ನವಬೃಂದಾವನದಲ್ಲಿ ವಿರಾಜಮಾನರಾಗಿ
ಇಂದಿನ ಆರಾಧನಾ ನಾಯಕರಾಗಿ
ಕಂಗೊಳಿಸುತ್ತಿರುವ
ಶ್ರೀ ಶ್ರೀ ಸುಧೀಂದ್ರತೀರ್ಥರು
ನಮ್ಮೆಲ್ಲರನ್ನೂ ಉದ್ಧರಿಸಲಿ ಎಂದು
ಪ್ರಾರ್ಥಿಸೊಣ..

ದಾಸ ಸಾಹಿತ್ಯWhere stories live. Discover now