*ಶ್ರೀಗಳವರ ವಿಶೇಷತೆಗಳು* -
* ಮಧ್ವ ವಾಂಗ್ಮಯದಲ್ಲೇ ಶ್ರೇಷ್ಠ ವ್ಯಾಖ್ಯಾನಕಾರರ ಸಾಲಿನಲ್ಲಿ ನಿಲ್ಲುವವರು.
* ಶ್ರೀ ವಿಷ್ಣುತೀರ್ಥರಂತಹ ಮಹಾಮತಿಗಳನ್ನೂ ಕೊಟ್ಟಿದ್ದು. ಅಲ್ಲದೆ ೩೦೦ ಕ್ಕೂ ಹೆಹ್ಚು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ , ತಿರುಪತಿಯಲ್ಲಿ ಅನೇಕ ಬಾರೆ ಶ್ರೀಮನ್ಯಾಯಸುಧಾ ಮಂಗಳ ಮಾಡಿದ್ದು.
* ವ್ಯಾಸಸಾಹಿತ್ಯದಲ್ಲಿ ಅನೇಕ ಗ್ರಂಥಗಳನ್ನು ಕೊಟ್ಟದ್ದಲ್ಲದೆ , ಶ್ರೀ ಗೋಪಾಲದಾಸರಿಂದ ಅಂಕಿತ ಹಾಕಿಸಿಕೊಂಡು 'ವಾಸುದೇವವಿಠಲ" ಎಂಬ ಅಂಕಿತದಿಂದ ಹರಿದಾಸ ಕೀರ್ತನೆಗಳನ್ನೂ ರಚನೆ ಮಾಡಿ ಹರಿದಾಸಧುರೀಣರೆನಿಸಿಕೊಂಡದ್ದು.
* ವಿದ್ವದ್ಗದ್ವಾಲ್ ಎಂದೇ ಖ್ಯಾತವಾದ ಗದ್ವಾಲಿಯಾ ಅರಸನಿಗೆ ರಾಜಗುರುಗಳಾಗಿ ಇದ್ದದ್ದು. ಅನೇಕ ವಾದಿಗಳನ್ನು ಜಯಿಸಿದ್ದು.
* ಶ್ರೀಸುಧಾಪಾಠ ನಿರತರಾಗಿದ್ದಾಗ ರಾಜನ ಆಸ್ಥಾನಕ್ಕೆ ಬಂದಿದ್ದ ದುರ್ವಾದಿಯನ್ನು ಅಡುಗೆಯವನಿಗೆ ಅನುಗ್ರಹಿಸಿ ಅವನು ಆ ವಾದಿಯನ್ನು ಗೆಲ್ಲುವಂತೆ ಮಾಡಿಸಿದ್ದು.
* ಶ್ರೀವಿಷ್ಣುತೀರ್ಥರಿಗೆ ಅನೇಕ ಜನರು ಶಿಷ್ಯರು ದೊರಕುವಂತೆ ಮಾಡಿ ಅನುಗ್ರಹಿಸಿದ್ದು.*ಶ್ರೀಗಳವರು ತೋರಿಸಿದ ಮಹಿಮೆಗಳು-*
* ಶ್ರೀ ಮಂತ್ರಾಲಯ ಮಠದ ಶ್ರೀ ಭುವನೇಂದ್ರ ತೀರ್ಥರಿಂದ ಸನ್ಯಾಸ ಪಡೆದು ಶ್ರೀ ವ್ಯಾಸತತ್ವಜ್ಞ ತೀರ್ಥರಾದದ್ದು.
* ನೀರಿನವನಿಂದ ಶಾಸ್ತ್ರ ಹೇಳಿಸಿದ್ದು
* ಮುದುಮಾಲಿ ದೇಸಾಯಿಯ ಉದರ ಶೋಲೆ ಪರಿಹರಿಸಿದ್ದು
* ತಿರುಪತಿಯಲ್ಲಿ ರಥ ಎಳೆಯುವಾಗ ತೋರಿದ ಮಹಾ ಮಹಿಮೆ
* ತಮ್ಮ ಪಾದುಕೆಗಳನ್ನು ಸೇವಿಸಿದ ವಿಷ್ಣುತೀರ್ಥರಿಗೆ ಭವಿಷ್ಯದಲ್ಲಿ ಒಳಿತಾಗುವಂತೆ ಅನುಗ್ರಹಿಸಿದ್ದು.
* ತಮ್ಮ ಮಠದ ಬಳಿ ನದ್ಯಭಿಮಾನಿ ದೇವತೆಯನ್ನು ಪ್ರಾರ್ಥಿಸಿ , ದಂಡದಿಂದ ಗೆರೆ ಹಾಕಿ ತುಂಗಬಧ್ರೆಯನ್ನೆ ತಮ್ಮ ಬಳಿ ಕರೆಸಿಕೊಂಡಿದ್ದು .
* ಆರಣಿ ಸಂಸ್ಥಾನದಲ್ಲಿ ತಮ್ಮ ನಾಲ್ಕು ಜನ ಶಿಷ್ಯರನ್ನು ಗೆಲ್ಲುವಂತೆ ಮಾಡಿದ್ದು.
* ಬ್ರಹ್ಮರಾಕ್ಷಸನಿಗೆ ಜನ್ಮ ನಿವಾರಣ ಮಾಡಿದ್ದು.
* ಗದ್ವಾಲ್ ರಾಜನ ಆಪತ್ತು ಪರಿಹರಿಸಿದ್ದು.
* ಐಜಿ ಹಳ್ಳವನ್ನು ಗರುಡಾ ನದಿಯನ್ನಾಗಿಸಿದ್ದು
* ಹಂಪೆಯಲ್ಲಿ ವಿರೂಪಾಕ್ಷನ ರಥಕ್ಕೆ ಹತ್ತಿದ ಬೆಂಕಿಯನ್ನು ವೇಣಿಸೋಮಪುರ ದಿಂದಲೇ ನಂದಿಸಿದ್ದು.
* ಗೋವುಗಳಸಹಿತನಾದ ಶ್ರೀ ಕೃಷ್ಣ ಪರಮಾತ್ಮನ ದರ್ಶಿಸಿದ್ದು.
* ಪೂನ ನಗರದ ವಿದ್ವತ್ಸಭೆಯಲ್ಲಿ ವಾದಿಗಳನ್ನು ಜಯಿಸಿದ್ದು.
* ಮಾರಿಕ ಉಪದ್ರವ ಪರಿಹರಿಸಿದ್ದು.
* ಶ್ರೀಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧಿಪತಿ ಶ್ರೀ ವಿಬುಧೇಂದ್ರ ತೀರ್ಥರಿಗೆ ಒಲಿದು ಬಂದ ಶ್ರೀ ನರಸಿಂಹದೇವರನ್ನು ಅರ್ಚಿಸಿದ್ದು.
* ವರ ರೌದ್ರಿನಾಮಸಂವತ್ಸರ ಶ್ರಾವಣ , ಪರಪಕ್ಷ ಅಷ್ಟಮಿ ಭೌಮವಾರ , ಭರಣೀ ನಕ್ಷತ್ರ ಪ್ರಾತಃ ಕಾಲದಲ್ಲಿ ಹರಿಧ್ಯಾನ ತತ್ಪರರಾದರು.
* ಇಂದಿಗೂ ನೆನೆದ ಭಕ್ತರನ್ನು , ಶ್ರೀ ಮಂತ್ರಾಲಯ ಪ್ರಭುಗಳಂತೆ ಜ್ಞಾನ , ಭಕ್ತಿ , ವೈರಾಗ್ಯಾದಿ ಗಳನ್ನೂ ಕೊಟ್ಟು ಅನುಗ್ರಹಿಸುತ್ತಿರುವ ಮಹಾ ಮಹಿಮರು..
ಮೂಲವೃಂದಾವನ.

YOU ARE READING
ದಾಸ ಸಾಹಿತ್ಯ
Poesía*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...