ಜಯೇಶವಿಠಲದಾಸರ

1 0 0
                                    

*ಶ್ರೀ ಜಯೇಶವಿಠಲ ದಾಸರ ಕೃತಿ*

*ರಾಗ : ಸರಸ್ವತಿ*
   *ತಾಳ* : *ತಿಶ್ರನಡೆ*

ಜಯರಾಯ ಭವಹರಣ ಪಾಲಿಸೆಮ್ಮ ॥ ಪ ॥
ಜಯದೇವಿಪತಿ ರೂಪಗುಣಕ್ರಿಯದಿ ರತ ಯತಿಯೇ ॥ ಅ ಪ ॥

ಅಮರೇಶ ಸ್ವರ್ಗಪದ ತೃಣ ಮಾಡಿ ಕ್ಷಿತಿಯಲ್ಲಿ ।
ಅಮಿತಮತಿ ಶ್ರೀಪಾದ ಸೇವೆಗಾಗಿ ॥
ಅಮಿತ ಸೌಭಾಗ್ಯದಿಂ ಪಶುವಾಗಿ ನೀನಂದು ।
ಭ್ರಮರವದ್ಗುರುಚರಣ ಕಮಲಮಧು ಸೇವಿಸಿದೆ ॥ 1 ॥

ತ್ರಿತಿಯೇಶರೆನಿಸುವಾ ಅಹಿಗರುಡ ಮಹರುದ್ರ ।
ಪ್ರತಿಕ್ಷಣದಿ ಅತಿಭಕುತಿಭಾರದಿಂದಾ ॥
ನತಿಸಿ ಸೇವಿಪ ಪರಮ ಗುರುಚರಣವಾಶ್ರೈಸಿದ ।
ಅತಿಸುಕೃತ ನಿಧಿ ನಮ್ಮ ಅತಿದಯದಿ ಈಕ್ಷಿಪುದು ॥ 2 ॥

ಶ್ರೀಭೂಮಿ ದುರ್ಗೇಶ ನಮಿತ ಮಂಗಳಮೂರ್ತಿ ।
ಶೋಭನಾನಂತ ಗುಣಕ್ರಿಯ ನಿವಹಗಳನು ॥
ಅದ್ಭುತದಿ ಧರಿಸಿಹಾ ಮಧ್ವಕೃತ ಗ್ರಂಥಗಳ ।
ಸದ್ಭಕ್ತಿಯಲಿ ಪೊತ್ತೆ ಸೌಭಾಗ್ಯನಿಧಿ ಗುರುವೇ ॥ 3 ॥

ಪವಮಾನರಾಯನಾ ಕೃಪೆಯೆಷ್ಟೋ ನಿನ್ನಲ್ಲಿ ।
ಅವನಿಯೊಳು ಸಿದ್ಧಾಂತಗ್ರಂಥಗಳ ಟೀಕಾ ॥
ಕವಿಶ್ರೇಷ್ಠರಿರಲಾಗಿ ನಿನ್ನಿಂದ ರಚಿಸಿದಾ ತ್ರಿ - ।
ಭುವನ ಮಾನ್ಯ ಧನ್ಯತಮ ಪೊರೆ ಎನ್ನಾ ॥ 4 ॥

ಪಾರ್ಥನಾಗಂದು ಶ್ರೀಯದುಪತಿಯ ಸಖ್ಯವನು ।
ಪೂರ್ತಿ ಪೊಂದಿದೆ ಸರ್ವ ಪುರುಷಾರ್ಥವೆಂದೂ ॥
ಸಾರ್ಥಮತಿಯಲಿ ಹರಿಯ ಒಲಿಸಿದಾ ಮಹನಿಪುಣ ।
ಪ್ರಾರ್ಥಿಸುವೆ ತವಪಾದಪಾಂಸು ರಕ್ಷಿಸಲೆಂದೂ ॥ 5 ॥

ದೇವಕೀಸುತ ನಿನ್ನ ಸಖನೆಂದು ಪವಮಾನ - ।
ದೇವ ನಿನ್ನಲಿ ಮಾಡ್ದ ಪರಮಪ್ರೀತಿ ॥
ಕೈವಲ್ಯಪತಿದಾಸ್ಯ ಪೂರ್ಣಪದ ಆರೂಢ ।
ಕೃಪೆ ಮಾಡೊ ಹರಿದಾಸಮಣಿ ಗುರುವೇ ॥ 6 ॥

ಭಾರತೀಪತಿಗೊಡೆಯ *ಜಯೇಶವಿಟ್ಠಲನ* ।
ವೈರಾಗ್ಯಶಿದ್ಧಿಯಲಿ ಏಕಾಂತ ಪೊಂದೀ ॥
ಭೂರಿ ಭಕ್ತಿಲಿ ಭಜಿಪ ಭವ ಕರುಣಸತ್ಪಾತ್ರ ।
ಸೂರಿ ಸುರಿ ದಯವೃಷ್ಟಿ ಹರಿಗುರುಗಳೊಲಿವಂತೆ ॥ 7 ॥

*

(ವೈಶಾಖ ಕೃಷ್ಣ ಪಾಡ್ಯ)

*ಇಂದುಮೌಳಿ ಪದಾಬ್ಜಾಳಿಂ/ ಮಂದ ಸಜ್ಜನ ತಾರಕಂ/*
*ಇಂದ್ರಕಾಮ ಸಮಾಭಾಸಂ/ ಸುಂದರಾಂಗ ಸಮನ್ವಿತಂ/*
*ವಿಜಯೋಪದೋಪೇತಮ್/ ಅಜಜಾತ ಸುತಾಖ್ಯಜಮ್/*
*ಶ್ರೀ ಜಯೇಶೇತಿ ದಾಸಾಖ್ಯಂ ಭಜೇ ವೈರಾಗ್ಯಶಾಲಿನಮ್*//

*ಇಂದಿನಿಂದ ಮೂರು ದಿನ* ಪರಮ ವೈರಾಗ್ಯಶಾಲಿಗಳೂ, ಪ್ರಮೇಯಗರ್ಭಿತ ಕೃತಿ ರಚನಾ ನಿಪುಣರು, ಶ್ರೀ ಅಪ್ಪಾವರ ಅನುಗ್ರಹ ಪಾತ್ರರೂ, ಶ್ರೀ ವಿಜಯರಾಮಚಂದ್ರವಿಠಲದಾಸರ ಶಿಷ್ಯರೂ ಆದ ಶ್ರೀ *ಜಯೇಶವಿಠಲದಾಸರ* ಆರಾಧನಾ ಮಹೋತ್ಸವ... (ಮೈಸೂರು,ಕಟ್ಟೆಮನೆಯಲ್ಲಿ)...

ದಾಸ ಸಾಹಿತ್ಯWhere stories live. Discover now