ಶ್ರೀ ಬಡೇಸಾಹೆಬರ* ( *ಜೋಳದಹೆಡಗಿ (ಲಿಂಗದಹಳ್ಳಿ) ರಾಮದಾಸರ*)

1 0 0
                                    

**ಶ್ರೀಂ ಶ್ರೀ ಕಂ ಕಪಿಲಾಯ ನಮಃ*

   *ಮಾರ್ಗಶಿರ ಕೃಷ್ಣ ನವಮಿ*

*ಶ್ರೀ ಉಪೇಂದ್ರತೀರ್ಥ ಯತೀಂದ್ರರ* ಉತ್ತರಾರಾಧನೆಯ ಶುಭವಂದನೆಗಳೊಂದಿಗೆ...

*ಶ್ರೀ ರಾಮಾವಧೂತವರಜ ಶ್ರೀ ರಾಮಾಂಕಿತ ಯೋಗಿನೇ/*
*ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ನಮಾಮಿ ಚ ಪುನಃ//*

ಯಾವ ಮತವಾದರೇನು, ಹರಿಯಮತ ಎನ್ನದು ಎಂದೇ ನಂಬಿ ಹನುಮನಮತದ ಹಿರಿಮೆಯನ್ಸಾರಿದ ಯಮಾಂಶಜರಾದ ಶ್ರೀ ಕನಕದಾಸಾರ್ಯರು ನಮಗೆ ಸದಾ ಪರಮಪೂಜ್ಯರೇ ಸರಿ.. ಇವರ ಹಾದಿಯಲ್ಲೇ ನಡೆದು ನಮ್ಮ ಹರಿದಾಸರಲ್ಲಿ ಧೀಟಾಗಿ ಸೇರಿದವರಾದ, ಶ್ರೀರಾಮಚಂದ್ರನ ಪರಮ ಭಕ್ತರು, ಶ್ರೀ ರಾಯರ ಅನುಗ್ರಹ ಪಡೆದವರು,  ಶ್ರೀ ಬುದ್ದಿನ್ನಿ ಮಾಧವತೀರ್ಥ ಗುರುಸಾರ್ವಭೌಮರ ಕಾರುಣ್ಯ ಪಾತ್ರರೂ,  18ನೇ ಶತಮಾನದ ರಾಯಚೂರು ಜಿಲ್ಲೆಯ,  ದೇವದುರ್ಗದ ಜೋಳದಹೆಡಗಿ ಗ್ರಾಮದಲ್ಲಿ ಜನಿಸಿದ, *ಮುಸ್ಲಿಂ* ಪಂಥಕ್ಕೆ ಸೇರಿದರೂ *ರಾಮ* *ಶ್ರೀರಾಮ* ಅಂಕಿತನಾಮಗಳಿಂದ ಶ್ರೀಹರಿಯ ಗುಣಗಾನವನ್ನು ಮಾಡಿದ, ಹರಿ ಸರ್ವೋತ್ತಮ,  ವಾಯುಜೀವೋತ್ತಮತ್ವವನ್ನು ಸಾರಿದ , ಸುಮಾರು  *800* ಕ್ಕೆ ಹೆಚ್ಚಿನ ಪದಗಳು, ಸುಮಾರು 100 ಉಗಾಭೋಗಗಳೂ, 460 ನುಡಿಗಳುಳ್ಳ ಶ್ರೀ ರಾಮಭಜನೆ ಎನ್ನುವ ಮೇರು ಕೃತಿಯೂ, 5 ಶತಾಷ್ಟಕಗಳನ್ನು ರಚನೆ ಮಾಡಿ, ಪರಮಾತ್ಮನ ಪದಗಳಲ್ಲಿ ಸಮರ್ಪಣೆ ಮಾಡಿ ನಮ್ಮನ್ನು ತಮ್ಮ ಪಥದಲ್ಲಿ ನಡೆಯಲು ಪ್ರೇರಕರಾದ, ಹರಿದಾಸ ಪಂಥದಲ್ಲಿ ಶ್ರೇಷ್ಠ ವಜ್ರದಂತೆ ವಿರಾಜಮಾನರಾದ, ಅವಧೂತರೆಂದೇ ಬದುಕನ್ನು ಹರಿಯ ಚರಣಗಳಲ್ಲಿ ನಿಲಿಸಿದ ದಾಸ ಶ್ರೇಷ್ಠರಾದ *ಶ್ರೀ ಬಡೇಸಾಹೆಬರ*  ಅರ್ಥಾತ್  ಶ್ರೀ  *ಜೋಳದಹೆಡಗಿ (ಲಿಂಗದಹಳ್ಳಿ) ರಾಮದಾಸರ*  ಆರಾಧನೆ  ಇಂದಿನಿಂದ ನಾಲ್ಕುದಿನ ದಾಸ ಸಾಹಿತ್ಯದ ಆರಾಧಕರ ಮನ ಮನೆಗಳಲ್ಲಿ..

ಶ್ರೀ ಉಪೇಂದ್ರತೀರ್ಥರ, ಶ್ರೀ  ದಾಸಾರ್ಯರ ಅನುಗ್ರಹ ಸದಾ ನಮ್ಮ ಸಮೂಹದಲಿ ಎಲ್ಲ ಸದಸ್ಯರ ಮೇಲಿರಲೆಂದು ಅವರಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

*ನಾದನೀರಾಜನದಿಂ ದಾಸಸುರಭಿ* 🙏🏽ರಾಮದಾಸರಕೃತಿ*

ಡೌಲಿನ ಡೌಲ್ಯಾಕೆ ಮಾಡ್ತಿ
ಕಾಲತೀರದ ಮೇಲೇನೆಂದು ಹೇಳ್ತಿ..ಪ
ಹೊಯ್ಮಾಲಿ ತನದ್ಹೊಲೆ ಕೆಲಸ ಮಾಡಿಕೂತಿ
ಸೈಮಾಡಿ ಬರಕೊಟ್ಟದೆಲ್ಲ ಮರೆತಿ..ಅ.ಪ
ಕಾಯವೆಂಬ ಹೊಲ ಕೌಲಿಗೆ ಹಿಡಿದಿ
ಮಾಯಾ ಮರವೆಯೆಂಬ ಮುಳ್ಳು ಬೆಳೆಸಿದಿ
ಹೇಯ ವಿಷಯವೆಂಬ ಸೆದೆಯ ಕೆಡವಿದಿ
ಸಾವು ಹುಟ್ಟುಯೆಂಬ ಕೊರಡಗಿದ್ಹೋದಿ
ಕಾವಲಾದೆಲೆ ಮೂಳಿ ನಿನ್ನ ಎಡಬಲದಿ
ವಾಯಿದೆ ಸಮೀಪ ಬಂತು ಮುಂದೇನು ಹಾದಿ...1
ಕ್ರೋಧ ಎಂದೆಂಬ ಅಲಬು ಕಿತ್ತದೆ
ಭೇದ ಎಂದೆಂಬುವ ಜೇಕು ತೋಡದೆ
ವಾದವೆಂಬ ಬೋರೆ ಜಡ್ಡು ಕಡಿಯದೆ
ಖೇದಯೆಂದೆಂಬ ಕರಿಕೆದಡ್ಡ ನಳಿಯದೆ
ಶೋಧವಿನಿತಿಲ್ಲದೆ ಮುಸುಕಿಟ್ಟು ಮಲಗಿದಿ
ಕಾದುವ ಒಡಯನಿಗೀಡೇನು ಮಾಡ್ದೀ....2
ಚಿತ್ತಶುದ್ಧಿಯೆಂಬ ಬದುವು ಕೆಡಿಸಿದಿ
ನಿತ್ಯ ನಿಮ೯ಲತೆಯೆಂಬ ಬಾಂದು ಒಡಿಸಿದಿ
ಸತ್ಯ ಸನ್ನಾಗೆ೯ಂಬ ಸೀಮೆಯ ಮುರಿದಿ
ತತ್ವ ವಿಚಾರವೆಂಬ ಒಡ್ಡ್ಹರೆಗಡಿದೀದಿ
ನಿತ್ಯ ನಿಮ೯ಲ ನಮ್ಮ ಕತು೯*ಶ್ರೀರಾಮನ*
ಅತು೯ ಭಜಿಸಿದೆ ಯಮಗ್ಯೈಥ೯ ತುತ್ತಾದಿ...3🌸
    .🌻🍁🌻🍁🌻🍁🌻

ದಾಸ ಸಾಹಿತ್ಯWhere stories live. Discover now