ತುಳಸೀದಾಸರು

1 0 0
                                    

🌹ಓಂ ನಮಃ ಶಿವಾಯ 🌹
🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌     ‌                                                      ‌

*ಹನುಮಾನ್ ಚಾಲೀಸಾ ಕುರಿತಾಗಿರುವ ಆಶ್ಚರ್ಯಕರವಾದ ಸಂಗತಿಗಳು ನಿಮಗೆ ಗೊತ್ತಾ?*

ತುಳಸೀದಾಸರು ಬರೆದ ಹನುಮಾನ್‌ ಚಾಲೀಸವನ್ನು ನಿತ್ಯ ಪಠಿಸಿದರೆ ಹಲವು ಸಮಸ್ಯೆಗಳಿಂದ ಆಂಜನೇಯನು ಮುಕ್ತಿ ನೀಡುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು. ಇಷ್ಟೊಂದು ಪರಿಣಾಮಕಾರಿಯಾಗಿರುವ ಹನುಮಾನ್‌ ಚಾಲೀಸದ ಕುರಿತು ಕೆಲವೊಂದು ಆಶ್ಚರ್ಯಕರ ಸಂಗತಿಗಳಿವೆ. ಅವೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
‌                                                                                                        ಪ್ರತಿದಿನ ಆಂಜನೇಯ ಭಕ್ತರು ಹನುಮಾನ್‌ ಚಾಲೀಸವನ್ನು ಪಠಿಸುತ್ತಾರೆ. ಹನುಮಾನ್‌ ಚಾಲಿಸಾ ಎಂಬುದು ಯಾವುದೇ ಪ್ರಮುಖ ವಿಷಯಗಳ ವಿವರಣೆ ಅಲ್ಲ. ಭಗವಾನ್ ಹನುಮಾನ್ ಆರಾಧನೆ ಕೂಡ ಅಲ್ಲ. ಬದಲಾಗಿ, ಆತನ ದೈವೀ ದರ್ಶನ ಪಡೆಯುವುದಾಗಿದೆ. ಈ ಮೂಲಕ ಜೀವನದ ನೈಜತೆಯನ್ನು ತಿಳಿಯುವ ಪ್ರಯತ್ನವಾಗಿದೆ. ಹನುಮಾನ್‌ ಚಾಲೀಸದ ಕುರಿತಾದ ಆಶ್ಚರ್ಯಕರವಾದ ಸಂಗತಿಗಳಿವೆ. ಅವು ಯಾವುವು ಎನ್ನುವುದರ ವಿವರಣೆ ಈ ಕೆಳಗಿದೆ.

ವಿಜ್ಞಾನಿಗಳು ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಕುರಿತು 17 ನೇ ಶತಮಾನದಲ್ಲಿ ಸಂಶೋಧನೆ ನಡೆಸಿ, ತಿಳಿದುಕೊಂಡಿದ್ದರೆ, ಹನುಮಾನ್ ಚಾಲೀಸಾ ಬರೆದ ತುಳಸೀದಾಸರು ಈ ಕುರಿತು 15 ನೇ ಶತಮಾನದಲ್ಲಿ ತಮ್ಮ ಲೇಖನದಲ್ಲಿ ಬರೆದಿದ್ದರು. ಅದು ಕೂಡ ಹನುಮಾನ್ ಚಾಲೀಸಾದಲ್ಲಿ.

ತುಳಸೀದಾಸರು ವಾಲ್ಮೀಕಿಯ ಪುನರ್‌ಜನ್ಮವೆಂದು ಕರೆಯಲಾಗುತ್ತದೆ ಮತ್ತು ರಾಮಾಯಣವನ್ನು ಇವರೇ ಬರೆದರು. ವಾಲ್ಮೀಕಿಯ ಪ್ರತಿರೂಪವೆಂದೇ ಬಿಂಬಿತರಾಗಿರುವ ತುಳಸೀದಾಸರು, ತಮ್ಮ ಜೀವಿತಾವಧಿಯಲ್ಲಿ ಇದರಿಂದಲೇ ಗುರುತಿಸಲ್ಪಟ್ಟರು. ಹೀಗಾಗಿ, ಯಾರು ರಾಮಾಯಣ ಬರೆದರೋ, ಅವರೇ ಹನುಮಾನ್ ಚಾಲೀಸಾ ಬರೆದರೆಂಬ ನಂಬಿಕೆ ಇಂದಿಗೂ ಇದೆ. ಎರಡೂ ಮಹಾಕಾವ್ಯಗಳ ನಡುವೆ ಎಷ್ಟೋ ಶತಮಾನಗಳ ಅಂತರವಿದೆ.

ತುಳಸೀದಾಸರು ಆಂಜನೇಯನನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆಂದು ಹೇಳಲಾಗುತ್ತದೆ. ತಮ್ಮ ಜೀವಿತಾವಧಿಯ ಹೆಚ್ಚಿನ ಸಮಯವನ್ನು ವಾರಣಾಸಿಯಲ್ಲಿ ಕಳೆದ ತುಳಸೀದಾಸರು ಅಲ್ಲೇ ಹನುಮಾನ್ ದೇವರನ್ನು ಕಂಡರು ಎಂಬ ಮಾತಿದೆ. ಅಂತೆಯೇ, ಅಲ್ಲೇ ಸಂಕಟಮೋಚನ ದೇವಸ್ಥಾನ ನಿರ್ಮಿಸಿದರು.

*ದೇಹದಲ್ಲಿರುವ ನಕಾರಾತ್ಮಕ ಶಕ್ತಿ ನಿವಾರಣೆ*
ನಂಬಿಕೆಯ ಪ್ರಕಾರ ಹನುಮಾನ್ ಚಾಲಿಸ ಪಠಿಸಿದರೆ ನಮ್ಮಲ್ಲಿ ಕಂಪನ ಉಂಟಾಗುವುದು ಎಂದು ಹೇಳಲಾಗುತ್ತದೆ. ನಮ್ಮಲ್ಲಿರುವ ನಕಾರಾತ್ಮಕ ಆಲೋಚನೆಯನ್ನು ಹೋಗಲಾಡಿಸಲು ಹನುಮಾನ್ ಚಾಲೀಸಾ ಪಠನೆ ಉತ್ತಮ ಮಾರ್ಗ. ಯಾವುದೇ ನಕಾರಾತ್ಮಕ ದುಷ್ಟ ಶಕ್ತಿಗಳು ಮತ್ತು ವಿಚಾರವನ್ನು ತೋರಿಸಿ, ಭಕ್ತರನ್ನು ರಕ್ಷಿಸುವುದು ಎಂಬ ಪ್ರತೀತಿ ಇದೆ. ದೈವಿಕ ಜ್ಞಾನ ಹೆಚ್ಚಿಸುವುದು.

*40 ದ್ವಿಪದಿ ಪದ್ಯಗಳನ್ನು ಸೇರಿ ಹನುಮಾನ್ ಚಾಲೀಸಾ ಆಯಿತು*                                                                                        ಚಾಲೀಸ್ ಎಂದರೆ 40. ನಲವತ್ತು ದ್ವಿಪದಿ ಪದ್ಯಗಳು ಹಾಗೂ ದೋಹಾಗಳು ಸೇರಿ ಹನುಮಾನ್ ಚಾಲೀಸಾ ಸಿದ್ದವಾಯಿತು. ಅದರಲ್ಲೂ, ಪ್ರತಿಯೊಬ್ಬ ದೇವಾನುದೇವತೆಗಳನ್ನು ಭಜಿಸುವ 40 ದ್ವಿಪದಿ ಪದ್ಯಗಳಿವೆ. ಹನುಮಾನ್ ಚಾಲೀಸವನ್ನು ಅವಧಿ ಭಾಷೆಯಲ್ಲಿ ಬರೆಯಲಾಗಿದೆ.

ವಾನರ ರೂಪದ ಹನುಮಾನ್, ಶ್ರೀರಾಮನ ಪರಮ ಭಕ್ತ. ಕೈಲಾಸವಾಸಿ ಶಿವನ ಸದೃಢತೆ, ಧೈರ್ಯ, ಸಂಪತ್ತು, ರಾಮನ ಕುರಿತು ಆಪ್ತತೆ ಮುಂತಾದವು ಹನುಮಾನ್ ಚಾಲೀಸಾದಲ್ಲಿ ಹೇಳಲಾಗಿದೆ. ಯಾವುದೇ ಇನ್ನಿತರ ದೇವತೆಗಳನ್ನು ಹೊರತು ಪಡಿಸಿ, ಆಂಜನೇಯನಿಗೆ ಅತೀ ಹೆಚ್ಚು ಮಂದಿರಗಳನ್ನು ಭಾರತದಲ್ಲಿ ನಿರ್ಮಿಸಲಾಗಿದೆ.

ಎಲ್ಲೆಲ್ಲಿ ಹನುಮಾನ್ ಚಾಲೀಸಾ, ಸುಂದರಕಾಂಡ, ರಾಮಚರಿತ ಮಾನಸ ಹಾಗೂ ರಾಮಾಯಣವನ್ನು ಹಾಡಲಾಗುತ್ತದೆಯೋ, ಅಲ್ಲಲ್ಲಿ ಭಗವಾನ್ ಹನುಮಾನ್ ದರ್ಶನ ನೀಡುತ್ತಾನೆ ಎಂಬ ಪ್ರತೀತಿ ಇದೆ. ಶಿವನ ಹನ್ನೊಂದನೇ ರುದ್ರಾವತಾರದ ಪ್ರತಿರೂಪವಾದ ಹನುಮಾನ್, ಶತ್ರುಗಳನ್ನು ಹಿಮ್ಮೆಟ್ಟಿಸಲು ಸಮರ್ಥನು.
🙏🙏🙏🙏🙏🙏🙏🙏🙏

You've reached the end of published parts.

⏰ Last updated: Mar 03, 2023 ⏰

Add this story to your Library to get notified about new parts!

ದಾಸ ಸಾಹಿತ್ಯWhere stories live. Discover now